ಕೊಪ್ಪ: ತಾಲೂಕಿನ ಎಸ್ಟೆಟ್ವೊಂದರಲ್ಲಿ ವ್ಯವಸ್ಥಾಪಕರು ಊಟ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಮಧ್ಯಪ್ರದೇಶದಿಂದ ಆಗಮಿಸಿದ್ದ ಕೂಲಿ ಕಾರ್ವಿುಕರು ಆರೋಪಿಸಿದ್ದಾರೆ.
ಮಧ್ರಪ್ರದೇಶದ ವಿದಿಶಾ ಜಿಲ್ಲೆಯ ಶಂಶಾಬಾದ್ ತಾಲೂಕಿನ ಆರು ಕಾರ್ವಿುಕರು ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ನಿಂದ ಕೆಲಸವೂ ಇಲ್ಲದೆ, ತಮ್ಮ ಊರಿಗೆ ತೆರಳಲಿಕ್ಕೂ ಸಾಧ್ಯವಾಗದೆ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಲಾಕ್ಡೌನ್ಗೂ ಮುಂಚೆ ದಿನಕ್ಕೆ 300 ರೂ.ನಂತೆ ನಮಗೆ ಎರಡು ತಿಂಗಳ ಸಂಬಳ ನೀಡಿದ್ದಾರೆ. ಮಾರ್ಚ್ ಮಧ್ಯದಿಂದ ಏಪ್ರಿಲ್ ಅಂತ್ಯದವರೆಗಿನ ಸಂಬಳ ನೀಡಿಲ್ಲ ಎಂದು ದೂರಿದರು.
ಮೊದಲು ನೀಡಿದ ಎರಡು ತಿಂಗಳ ಸಂಬಳದಲ್ಲಿ ದಿನಸಿ, ತರಕಾರಿ ಖರೀದಿಸಿ ದಿನ ಕಳೆದವು. ಈವರೆಗೂ ನಮ್ಮ ಊರಿಗೆ ತೆರಳಲು ವ್ಯವಸ್ಥೆ ಮಾಡಿಲ್ಲ. ಯಾರ ಬಳಿಯಾದರೂ ನಮ್ಮ ಸಂಕಷ್ಟ ಹೇಳಿಕೊಂಡರೆ ಹಲ್ಲೆ ಮಾಡುತ್ತಾರೆಂಬ ಭಯ ಕಾಡುತ್ತಿದೆ ಎಂದು ಕಾರ್ವಿುಕರಾದ ಬ್ರಿಜೇಷ್ ಹಾಗೂ ಪ್ರಕಾಶ್ ಅಳಲು ತೋಡಿಕೊಂಡರು.
ಕಾರ್ವಿುಕರಿಗೆ ಊಟದ ವ್ಯವಸ್ಥೆ ಮಾಡದಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಬಳಿ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು. ಕಾರ್ವಿುಕರನ್ನು ಕರೆಸಿಕೊಂಡ ಎಸ್ಟೇಟ್ ಮಾಲೀಕರು ಅವರಿಗೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಬೇಕು. ಎಸ್ಟೇಟ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ಪೊಲೀಸರಿಗೆ ತಿಳಿಸುತ್ತೇನೆ ಎಂದು ತಹಸೀಲ್ದಾರ್ ಪರಮೇಶ್ ತಿಳಿಸಿದ್ದಾರೆ.