More

    ಕರೊನಾ ಭೀತಿ ಸರಳವಾಗಿ ಜರುಗಿದ ಧಾರ್ಮಿಕ ಕಾರ್ಯಕ್ರಮ

    ಕೊಡೇಕಲ್: ಮದಲಿಂಗನಾಳ ಗ್ರಾಮದ ಶ್ರೀ ಶಂಕರಲಿಂಗೇಶ್ವರ ದೇಗುಲದ ನೂತನ ಗೋಪುರಕ್ಕೆ ಗುರುವಾರ ಶ್ರೀ ಶಂಕರಲಿಂಗ ಮಹಾರಾಜರ ಸಮ್ಮುಖದಲ್ಲಿ ಕಳಸಾರೋಹಣ ಕಾರ್ಯಕ್ರಮ ಸರಳವಾಗಿ ನೆರವೇರಿತು.

    ಶ್ರೀ ಶಂಕರಲಿಂಗ ಮಹಾರಾಜರ ಆಶ್ರಮದಲ್ಲಿ ಗುರುವಾರ ಜರುಗಿದ ಜಾತ್ರಾ ಮಹೋತ್ಸವ ಸರಳವಾಗಿ ಕತೃ ಗದ್ದುಗೆಗೆ ಗಂಧ ಲೇಪನ ಮತ್ತು ದೇವಸ್ಥಾನದ ಕಳಸಾರೋಹಣ ನಡೆಯಿತು. ಗುರುವಾರ ಬೆಳಗ್ಗೆಯಿಂದ ಹಳ್ಳೂರಿನ ಹುಲ್ಲಪ್ಪ ಶರಣರು ಹಾಗೂ ಆಶ್ರಮದ ಧರ್ಮದರ್ಶಿ ಶ್ರೀ ಶಂಕರಲಿಂಗ ಮಹಾರಾಜರ ಸಮ್ಮುಖದಲ್ಲಿ ಪಂಚಾಮೃತ ಅಭಿಷೇಕ, ಗಣ, ರುದ್ರ, ಮತ್ತು ನವಗ್ರಹ ಹೋಮ ಜರುಗಿತು.

    ಆಶೀರ್ವಚನ ನೀಡಿದ ಪೂಜ್ಯ ಶ್ರೀ ಶಂಕರಲಿಂಗ ಮಹಾರಾಜರು ಕರೊನಾ ವೈರಸ್ ದೇಶದ ಜನರ ನಿದ್ದೆಗೇಡಿಸಿದೆ. ಯಾವುದಕ್ಕೂ ಜನರು ಭಯ ಪಡದೆ ಸಕರ್ಾರ ಮತ್ತು ಆರೋಗ್ಯ ಇಲಾಖೆ ನೀಡುವ ಮುಂಜಾಗ್ರಾತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ ಎಂದರು. ಇಂದು ನಡೆದ ರುದ್ರ ಹೋಮ ಮತ್ತು ನವಗ್ರಹ ಹೋಮಗಳಲ್ಲಿ ಕರೊನಾ ಆಪತ್ತಿನಿಂದ ಎಲ್ಲರ ರಕ್ಷಣೆ ಮಾಡಲು ಭಗವಂತನಲ್ಲಿ ಪ್ರಾರ್ಥಿಸಲಾಗಿದೆ ಎಂದರು.

    ಕೊಡೇಕಲ್, ಮದಲಿಂಗನಾಳ, ಡೊಂಕಮಡು, ಜಂಬಗಿ, ಗುಂಡಕರ್ಜಗಿ, ನಾರಾಯಣಪುರ, ಕೊಟೇಗುಡ್ಡ, ಕುರೇಕನಾಳ, ಯರಕಿಹಾಳ, ಬರದೇವನಾಳ, ಉಪ್ಪಲದಿನ್ನಿ, ರೋಡಲಬಂಡಾ, ಸೋಮನಾಳ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts