More

    ಅಣ್ಣಿಗೇರಿ ದಾಸೋಹಮಠದ ರಥೋತ್ಸವ

    ಅಣ್ಣಿಗೇರಿ: ದಾಸೋಹ ಮಠದ 60ನೇ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಮಠದ ಆವರಣದಿಂದ ಪ್ರಾರಂಭಗೊಂಡ ರಥೋತ್ಸವ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿಯವರೆಗೆ ಸಾಗಿ ಪೂಜೆ ಬಳಿಕ ನಂತರ ಶ್ರೀಮಠವನ್ನು ತಲುಪಿತು. ತೇರಿನಲ್ಲಿ ಆಸೀನರಾಗಿದ್ದ ದಾಸೋಹಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಭಕ್ತರಿಗೆ ಆಶೀರ್ವದಿಸಿದರು. ಶ್ರೀ ಶಂಕರೇಂದ್ರ ಮಹಾರಾಜ ಕಿ ಜೈ, ಶ್ರೀ ಶಿವಕುಮಾರ ಮಹಾರಾಜಕಿ ಜೈ ಎಂದು ಜಯಘೋಷ ಮೊಳಗಿಸಿದರು.
    ರಥೋತ್ಸವದ ಮುಂಭಾಗದಲ್ಲಿ ರಾಣೆಬೆನ್ನೂರಿನ ಸಿದ್ದಪ್ಪ ಅಟವಾಳಗಿ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಗುಗ್ಗಳ ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಒಡಪು ಹೇಳುವುದು ಹಾಗೂ ರಥೋತ್ಸವದ ಮುಂದೆ ಖಡ್ಗ ವರಸೆ ನಡೆಯಿತು. ಬಳಿಕ ಪಟ್ಟಣದ ವಿವಿಧ ಯುವಕ ಮಂಡಳಗಳಿಂದ ಕೋಲಾಟ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶ್ರೀ ಗುರುಲಿಂಗ ದೇವರು ಮಹಾಲಿಂಗಪುರ, ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ತಂಗಡಗಿ, ಶ್ರೀ ಶಂಕರಾನಂದ ಸ್ವಾಮೀಜಿ ಮುಕ್ಕಣ್ಣೇಶ್ವರಮಠ ಗದಗ ರಥೋತ್ಸವಕ್ಕೆ ಚಾಲನೆ ನೀಡಿದರು. ದಾಸೋಹ ಮಠ ಟ್ರಸ್ಟ್ ಅಧ್ಯಕ್ಷ ರಾಜೇಶ್ವರರಾವ ದೇಸಾಯಿ, ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಜಾತ್ರಾ ಮಹೋತ್ಸವದ ಅಧ್ಯಕ್ಷ ಶ್ರೀಮಂತ ಶ್ರೀಕುಮಾರ ಸಿಕ್ಕೆದೇಸಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಶ್ರೀಮಂತ ಶರಣಬಸಪ್ಪ ದೇಶಮುಖ, ಡಾ. ಶಂಕರ ಜೋಶಿ, ಮಹಾಂತೇಶ ಇಂಗಳಹಳ್ಳಿ, ನಾಗರಾಜ ಕುಬಸದ, ಶಿವು ಹೊಸಳ್ಳಿ, ಶಂಕ್ರಣ್ಣ ಇಂಗಳಹಳ್ಳಿ, ಅಶೋಕ ಕುರಿ, ಪ್ರವೀಣ ಹಾಳದೋಟರ, ಮಾಬಲೇಶ್ವರ ಹೆಬಸೂರ, ರಾಜು ವೇರ್ಣಿಕರ, ಶಂಕರ ಪಾಟೀಲ, ಟ್ರಸ್ಟ್ ಸದಸ್ಯರು, ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರು, ಭಕ್ತಾಧಿಗಳು ಇದ್ದರು.
    ಜಿಲೇಬಿ, ಮಾದಲಿ ಪ್ರಸಾದ: ದಾಸೋಹ ಮಠದಲ್ಲಿ ಭಕ್ತರಿಗೆ 8 ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಶ್ರೀಮಠದಿಂದ 2 ಕ್ವಿಂಟಾಲ್ ಜಿಲೇಬಿ, ತಯಾರಿಸಲಾಗಿತ್ತು. ಹುಣಸಿಕಟ್ಟಿ ಗ್ರಾಮದ ಭಕ್ತರು 5 ಕ್ವಿಂಟಾಲ್ ಮಾದಲಿ ದಾಸೋಹಕ್ಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts