More

    ಧೂಳೆಬ್ಬಿಸುತ್ತಿದೆ ಶ್ರೀಮುರಳಿ ಅಭಿನಯದ ‘ಮದಗಜ’ ಟೀಸರ್​ …

    ಬೆಂಗಳೂರು: ಶ್ರೀಮುರಳಿ ಅವರ ಹುಟ್ಟುಹಬ್ಬದ ಅಂಗವಾಗಿ, ಚಿತ್ರದ ಫಸ್ಟ್​ಲುಕ್​ ಟೀಸರ್​ ಬಿಡುಗಡೆಯಾಗಲಿದೆ ಎಂದು ‘ಮದಗಜ’ ಚಿತ್ರತಂಡದವರು ಮೊದಲೇ ಹೇಳಿದ್ದರು. ಅದರಂತೆ, ಇಂದು ಬೆಳಿಗ್ಗೆ 09:09ಕ್ಕೆ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಸಮಂತಾ ಅಕ್ಕಿನೇನಿ ಪಡೆದಿದ್ದು 1 ಕೋಟಿ ರೂಪಾಯಿ!

    ಬರೀ ಬಿಡುಗಡಯಾಗುವುದಷ್ಟೇ ಅಲ್ಲ, ಸ್ವಲ್ಪ ಹೊತ್ತಿನಲ್ಲೇ ಸಾಕಷ್ಟು ಹಿಟ್ಸ್​ ಸಿಕ್ಕಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಚಿತ್ರದ ಟೀಸರ್​ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ‘ಈ ಪಾಪದ್​ ಪ್ರಪಂಚದಲ್ಲಿ ನಮ್ ಪ್ರಯಾಣ ಕೊಚ್ಚೆನಲ್ಲಿ ಹವಾಯಿ ಚಪ್ಲಿ ಹಾಕ್ಕೊಂಡು ನಡೆದಂತೆ. ನಾವು ಸರಿಯಾಗಿ ನಡೆದ್ರೂನೂ ಅದು ನಮ್​ ಮೇಲೆ ಹಾರ್ದೇ ಇರಲ್ಲ …’ ಎಂಬ ಡೈಲಾಗ್​ನಿಂದ ಪ್ರಾರಂಭವಾಗುವ ಟೀಸರ್​ ಮಾಸ್​ ಆಗಿದ್ದು, ಮೇಕಿಂಗ್​ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

    ಇದನ್ನೂ ಓದಿ: ಸಚಿನ್ ಸುವರ್ಣ ಈಗ ಶ್ರೀ ಅಲ್ಲಮಪ್ರಭು

    ಈಗಾಗಲೇ ‘ಮದಗಜ’ ಚಿತ್ರದ ಮೂರು ಹಂತಗಳ ಚಿತ್ರೀಕರಣ ಮುಗಿದಿದ್ದು, ಶೇ. 75ರಷ್ಟು ಮುಗಿದಿದೆ. ಈ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ನಟಿಸುತ್ತಿದ್ದು, ಚಿಕ್ಕಣ್ಣ, ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ. ಇನ್ನು, ಈ ಚಿತ್ರವನ್ನು ‘ಅಯೋಗ್ಯ’ ಖ್ಯಾತಿಯ ಮಹೇಶ್​ ನಿರ್ದೇಶನ ಮಾಡಿದರೆ, ‘ರಾಬರ್ಟ್​’ ನಿರ್ಮಿಸುತ್ತಿರುವ ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

    ಶ್ರೀಮುರಳಿ ಹೊಸ ಚಿತ್ರ ‘ಬಘೀರ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts