More

    ಜಾತಿ ಕೊಳೆ ತೆಗೆಯಲು ಯತ್ನಿಸಿದ ಮಾಚಿದೇವ

    ಯಳಂದೂರು : 12ನೇ ಶತಮಾನದಲ್ಲಿ ಜಾತೀಯತೆ ಎಂಬ ಕೊಳೆಯನ್ನು ತೊಳೆಯಲು ಹೋರಾಡಿದ ಮಹಾನ್ ಮಾನವತಾವಾದಿಗಳಲ್ಲಿ ಮಡಿವಾಳ ಮಾಚೀದೇವರೂ ಒಬ್ಬರು ಎಂದು ಗೂಳಿಪುರ ಗ್ರಾಮ ಪಂಚಾಯಿತಿ ಸದಸ್ಯ ಬೂದಂಬಳ್ಳಿ ಗಿರೀಶ್ ತಿಳಿಸಿದರು.

    ಸಮೀಪದ ಬೂದಂಬಳ್ಳಿ ಗ್ರಾಮದಲ್ಲಿ ಮಡಿವಾಳ ಸಮುದಾಯದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಮಡಿವಾಳ ಮಾಚೀದೇವ 12ನೇ ಶತಮಾನದಲ್ಲಿ ಬಸವಣ್ಣನವರೊಂದಿಗೆ ಕಾಣಿಸಿಕೊಂಡ ಮಹಾನ್ ವಚನಕಾರರಾಗಿದ್ದರು. ಇವರು ನುಡಿದಂತೆ ನಡೆದ ವ್ಯಕ್ತಿಯಾಗಿದ್ದು, ತಮ್ಮ ಜೀವನವಿಡೀ ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು. ಈ ಸಮುದಾಯ ಇನ್ನೂ ಕೂಡ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇದರಿಂದ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಗತಿ ಸಾಧಿಸಬಹುದು ಎಂದರು.

    ಇದಕ್ಕೂ ಮುನ್ನ ಮಡಿವಾಳ ಮಾಚೀದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಗೌಡ್ರಮಹದೇವಪ್ಪ, ಬಿ.ಕೆ.ರಾಜಣ್ಣ, ನಂದೀಶ್, ಬಿ.ಡಿ.ನಾಗರಾಜು, ವಿ.ನಾಗರಾಜು, ನಾಗಶೆಟ್ಟಿ, ಮಾಚಿದೇವ ಸಂಘದ ಮಧು, ಬಸವಣ್ಣ, ಎನ್.ಮಹೇಶ್, ಚೆನ್ನಂಜಶೆಟ್ಟಿ, ಬಸವಶೆಟ್ಟಿ, ಎನ್.ಮಹೇಶ್, ರಂಗಶೆಟ್ಟಿ, ಮಹದೇವಶೆಟ್ಟಿ, ಲೊಕೇಶ್, ಮಹದೇವಶೆಟ್ಟಿ, ಲಿಂಗರಾಜು, ನಾಗಶೆಟ್ಟಿ, ಶಿವಕುಮಾರಶೆಟ್ಟಿ ಅನೇಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts