More

    ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ ಪ್ರತಿಷ್ಠಾ ಮಂಡಲೋತ್ಸವ

    ವಿಟ್ಲ: ವಿಶ್ವವಿದ್ಯಾಪೀಠದ ಶಾಖೆಯಾಗಿ ಮಾಣಿ ಶ್ರೀರಾಮ ವೇದಪಾಠ ಶಾಲೆಯನ್ನು ಬೆಳೆಸಿ, ಸಮಗ್ರ ಜೀವನ ಶಿಕ್ಷಣ ನೀಡುವ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಪ್ರತಿಷ್ಠಾ ಮಂಡಲೋತ್ಸವ ಮತ್ತು ಮಂಗಳೂರು ಹೋಬಳಿ, ಶ್ರೀ ರಾಮ ಸಂಸ್ಕೃತ ವೇದಪಾಠ ಶಾಲೆಯ ವಾರ್ಷಿಕೋತ್ಸವದ ಧರ್ಮಸಭೆಯಲ್ಲಿ ಶನಿವಾರ ಆಶೀರ್ವಚನ ನೀಡಿದರು.

    ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ ಕುಮಾರ್ ಬೊಳಿಯಾರು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಾಮನಿರ್ದೇಶಿತ ಸದಸ್ಯ ರಾಮ ಅಮೀನ್ ಪಚ್ಚಪಾಡಿ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಭೇಟಿ ನೀಡಿದರು.

    ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ಬಿಂದುಸಿಂಧು ಪ್ರಧಾನ ಅರವಿಂದ ದರ್ಬೆ, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್ ಉಪಸ್ಥಿತರಿದ್ದರು. ಹಾರಕರೆ ನಾರಾಯಣ ಭಟ್ ವಾರ್ಷಿಕ ವರದಿ ವಾಚಿಸಿದರು. ಬಂಗಾರಡ್ಕ ಜನಾರ್ದನ ಭ ಟ್ ಲೆಕ್ಕಪತ್ರ ಮಂಡಿಸಿದರು. ಮರುವಾಳ ನಾರಾಯಣ ಭಟ್ ಆನ್‌ಲೈನ್ ತರಬೇತಿ ಮತ್ತು ಸಂಧ್ಯಾ ಕಾನತ್ತೂರು ಪ್ರತಿಭಾ ಪುರಸ್ಕಾರದ ಮಾಹಿತಿ ನೀಡಿದರು. ಎಂ.ವಿ.ಹೆಗಡೆ ಮುತ್ತಿಗೆ ನೂತನ ಸೇವಾ ಸಮಿತಿಯನ್ನು ಘೋಷಿಸಿದರು. ಸುಬ್ರಹ್ಮಣ್ಯ ಭಟ್ ಸೇರಾಜೆ ಕಾರ್ಯ ಕ್ರಮ ನಿರೂಪಿಸಿದರು.

    ಭತ್ತ, ಅಕ್ಕಿ ಸಮರ್ಪಣೆ: ರಾಮ ನೈವೇದ್ಯದ 550 ಕೆ.ಜಿ. ಸಾವಯವ ಅಕ್ಕಿ ಹಾಗೂ ಭತ್ತ ಸಮರ್ಪಣೆ, 23 ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ, ಗೋಸ್ವರ್ಗದ ವೆಬ್‌ಸೈಟ್ ಲೋಕಾರ್ಪಣೆ, ಘನಪಾಠಿಗಳಾದ ಶಂಕರನಾರಾಯಣ ಪಳ್ಳತ್ತಡ್ಕ ಅವರ ವೇದೋ ನಿತ್ಯಮಧೀಯತಾಮ್ ಪುಸ್ತಕ ಲೋಕಾರ್ಪಣೆ ನಡೆಯಿತು. ವೇದಪಾಠ ಶಾಲೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts