More

    ಟೀಮ್​ ಇಂಡಿಯಾದ ಮಾಜಿ ನಾಯಕ ಧೋನಿ ಮೈದಾನದಲ್ಲಿ ಸಿಟ್ಟಾಗಿದ್ದರಂತೆ, ಅದೂ 20 ವರ್ಷಗಳ ಬಳಿಕ; ಏಕೆ ಗೊತ್ತಾ?

    ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮಿ. ಕೂಲ್​ ಎಂದೇ ಪ್ರಖ್ಯಾತರು. ಎದುರಾಳಿ ತಂಡದವರು ಭಾರತೀಯ ಬೌಲರ್​ಗಳನ್ನು ಚೆಂಡಾಡುತ್ತಿದ್ದರೂ, ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಮರಳಿಸುವ ರಣತಂತ್ರವನ್ನು ಕೂಲಾಗಿ ರೂಪಿಸುತ್ತಿದ್ದರು ಎಂಬ ಮಾತು ಕ್ರಿಕೆಟ್​ ವಿಶ್ವದಲ್ಲಿ ಜನಜನಿತವಾಗಿದೆ.

    ಇಂಥ ಧೋನಿ ಮೈದಾನದಲ್ಲಿ ಒಮ್ಮೆ ತಮ್ಮ ಬೌಲರ್ ಒಬ್ಬರ ಮೇಲೆ ಸಿಟ್ಟಾಗಿ, ಕೂಗಾಡಿದ್ದರಂತೆ. ಅದೂ 20 ವರ್ಷಗಳ ಬಳಿಕ ಅವರಿಗೆ ಆ ಪರಿಯ ಸಿಟ್ಟು ಬಂದಿತ್ತಂತೆ. ಈ ಘಟನೆಯನ್ನು ಧೋನಿ ಅವರಿಂದ ಬೈಸಿಕೊಂಡ ಬೌಲರ್​ನ ಬಾಯಲ್ಲೇ ಕೇಳೋಣ.

    ಅದು 2017ರ ಡಿಸೆಂಬರ್​. ಇಂದೋರ್​ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ 2ನೇ ಪಂದ್ಯ. ಇಂದೋರ್​ನ ಮೈದಾನದಲ್ಲಿ ಬೌಂಡರಿ ಗೆರೆ ತುಂಬಾ ಸಣ್ಣದಾಗಿದೆ. ಶ್ರೀಲಂಕಾದ ಕುಶಲ್​ ಪೆರೇರಾ ಬ್ಯಾಟಿಂಗ್​ ಮಾಡುತ್ತಿದ್ದರೆ ಭಾರತದ ಯುವ ಸ್ಪಿನ್ನರ್​ ಕುಲದೀಪ್​ ಯಾದವ್​ ಬೌಲಿಂಗ್​ ಮಾಡುತ್ತಿದ್ದರು. ಕುಶಲ್​ ಪೆರೇರಾ ಕವರ್​ ವಿಭಾಗದಲ್ಲಿ ಚೆಂಡನ್ನು ಬೌಂಡರಿಗಟ್ಟಿದ್ದರು. ವಿಕೆಟ್​ ಕೀಪಿಂಗ್​ ಮಾಡುತ್ತಿದ್ದ ಧೋನಿ, ಫೀಲ್ಡಿಂಗ್​ ಅನ್ನು ಬದಲಿಸುವಂತೆ ಕುಲದೀಪ್​ ಯಾದವ್​ಗೆ ಸೂಚಿಸಿದರು.

    ಧೋನಿಯ ಮಾತು ಕೇಳಿಸಿದರೂ, ಕೇಳಿಸದವರಂತೆ ತಮ್ಮ ಬೌಲಿಂಗ್​ ಮಾರ್ಕ್​ಗೆ ಮರಳಿದ ಕುಲದೀಪ್​ ಯಾದವ್​ ಮತ್ತೊಂದು ಎಸೆತ ಹಾಕಿದರು. ರಿವರ್ಸ್​ ಸ್ವೀಪ್​ ಮಾಡಿದ ಕುಶಲ್​ ಪರೇರಾ ಮತ್ತೊಂದು ಬೌಂಡರಿ ಸಿಡಿಸುತ್ತಿದ್ದಂತೆ ವಿಕೆಟ್​ ಹಿಂದಿನಿಂದ ಧೋನಿ ಸಿಡಿದಿದ್ದರು!
    ನನ್ನೇನು ಹುಚ್ಚಾ ಎಂದು ಭಾವಿಸಿದ್ದೀಯಾ? ನಾನು 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ್ದೇನೆ. ಆ ಅನುಭವದಿಂದಲೇ ನಾನು ನಿನಗೆ ಫೀಲ್ಡಿಂಗ್​ ಬದಲಿಸಲು ಸಲಹೆ ಕೊಡುತ್ತಿದ್ದೇನೆ… ಸುಮ್ಮನೆ ಫೀಲ್ಡಿಂಗ್​ ಬದಲಿಸು… ಎಂದು ಅಬ್ಬರಿಸಿದರು.

    ಆಗ ನನಗೆ ನಿಜಕ್ಕೂ ನಡುಕ ಉಂಟಾಯಿತು. ಅವರು ಹೇಳಿದಂತೆ ಫೀಲ್ಡಿಂಗ್​ ಬದಲಿಸಿದೆ. ಮರು ಎಸೆತದಲ್ಲೇ ನನಗೆ ವಿಕೆಟ್​ ದಕ್ಕಿತು ಎಂದು ಕುಲದೀಪ್​ ಯಾದವ್​ ಹೇಳಿದ್ದಾರೆ.

    ಲಾಕ್​ಡೌನ್​ನಿಂದಾಗಿ ಸದ್ಯ ಕಾನ್ಪುರದ ಮನೆಯಲ್ಲಿ ಬಂದಿಯಾಗಿರುವ ಕುಲದೀಪ್​ ಯಾದವ್​, ಕ್ರಿಕೆಟ್​ ಕಾರ್ಯಕ್ರಮದ ನಿರೂಪಕ ಜತಿನ್​ ಸಪ್ರು ಅವರ ಎಎಸ್​ಎಪಿ ವಿತ್​ ಜೆಎಸ್​ಎಪಿ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಆ ಪಂದ್ಯದಲ್ಲಿ ನಾನು 52ಕ್ಕೆ 3 ವಿಕೆಟ್​ ಕಬಳಿಸಿದ್ದೆ. ಇದಕ್ಕೂ ಮುನ್ನ ಆರಂಭಿಕ ರೋಹಿತ್​ ಶರ್ಮ 35 ಎಸೆತಗಳಲ್ಲಿ ಗಳಿಸಿದ್ದ ಶತಕದ ನೆರವಿನಿಂದ ಬೃಹತ್​ ಮೊತ್ತ ಕಲೆಹಾಕಿತ್ತು. ಹಾಗಾಗಿ ಭಾರತಕ್ಕೆ 88 ರನ್​ಗಳ ಗೆಲುವು ದಕ್ಕಿತು ಎಂದು ವಿವರಿಸಿದ್ದಾರೆ.

    ಪಂದ್ಯ ಮುಗಿದ ಬಳಿಕವೂ ಧೋನಿ ಜತೆ ಮಾತನಾಡಲು ಹೆದರಿಕೆಯಾಗುತ್ತಿತ್ತು. ಆದರೂ ಧೈರ್ಯ ಮಾಡಿ ಟೀಂ ಬಸ್​ನಲ್ಲಿ ಅವರ ಬಳಿ ಹೋಗಿ ಮಾತನಾಡಿದಾಗ ಅವರು ಸಮಾಧಾನವಾಗಿಯೇ ಮಾತನಾಡಿದರು. ನಿಮಗೆ ಈ ಹಿಂದೆ ಇಷ್ಟೊಂದು ಸಿಟ್ಟು ಬಂದಿತ್ತೇ ಎಂದು ಪ್ರಶ್ನಿಸಿದ್ದಕ್ಕೆ 20 ವರ್ಷಗಳ ಹಿಂದೆ ಒಮ್ಮೆ ಹೀಗೆಯೇ ವಿಪರೀತ ಸಿಟ್ಟು ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾಗಿ ಹೇಳಿದ್ದಾರೆ.

    ಪಂಜಾಬ್​ನ ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಾಯುಪಡೆ ಹೆಲಿಕಾಪ್ಟರ್​, ಇತ್ತೀಚೆಗೆ ಖರೀದಿಸಿದ್ದ ಈ ಹೆಲಿಕಾಪ್ಟರ್​ ಯಾವುದು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts