More

    ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಲಸಿಕೆ ಬಗ್ಗೆ ತಿಳಿಸಿ; ಸಂಶೋಧಕರಲ್ಲಿ ಮೋದಿ ಮನವಿ

    ನವದೆಹಲಿ: ಕರೊನಾ ಸೋಂಕಿಗೆ ಲಸಿಕೆ ಸಿದ್ಧಪಡಿಸುವಲ್ಲಿ ಭಾರತ ಉತ್ತಮ ಸ್ಫರ್ಧೆ ಕಾಯ್ದುಕೊಂಡಿದೆ. ಲಸಿಕೆ ತಯಾರಿಕಾ ಘಟಕಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ಬೆನ್ನಲ್ಲೇ ಇದೀಗ ಸಂಶೋಧಕರು ಮತ್ತು ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

    ಇದನ್ನೂ ಓದಿ: ಸೀರಿಯಲ್​ ಕಿಲ್ಲರ್​ನೊಂದಿಗೇ ಬದುಕು! ದುರ್ವಾಸನೆ ಬರುತ್ತಿದ್ದ ಮನೆಯ ಬಾಗಿಲು ಒಡೆದವರಿಗೆ ಕಾದಿತ್ತು ಶಾಕ್​

    ಪುಣೆಯ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌, ಹೈದರಾಬಾದ್​ನ ಬಯೋಲಾಕಿಲ್​ ಇ ಲಿಮಿಟೆಡ್​ ಮತ್ತು ಡಾ.ರೆಡ್ಡೀಸ್​ ಲ್ಯಾಬೋರೇಟರಿಯ ತಂಡದೊಂದಿಗೆ ಪ್ರಧಾನಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ್ದಾರೆ. ಲಸಿಕೆ ಸಿದ್ಧಪಡಿಸುವಿಕೆಯಲ್ಲಿ ಈ ತಂಡಗಳ ಕೊಡುಗೆಯನ್ನು ಪ್ರಶಂಸಿಸಿದ್ದಾರೆ.

    ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಕರೊನಾ ಲಸಿಕೆಯ ಬಗ್ಗೆ ಅರ್ಥವಾಗಬೇಕು. ಲಸಿಕೆ ಏನು, ಹೇಗೆ ಕೆಲಸ ಮಾಡುತ್ತದೆ, ಅದರ ಸಾಮರ್ಥ್ಯವೆಷ್ಟು ಎನ್ನುವುದರ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಂಶೋಧಕರು ವಿಶ್ಲೇಷಿಸಬೇಕು ಎಂದು ಪ್ರಧಾನಿ ಅವರು ಹೇಳಿದ್ದಾರೆ. ಈ ಸಮಯದಲ್ಲಿ ಲಸಿಕೆ ಅಭಿವೃದ್ಧಿಗೆ ವಿವಿಧ ವೇದಿಕೆಗಳ ಸಾಮರ್ಥ್ಯದ ಬಗ್ಗೆಯೂ ಚರ್ಚಿಸಲಾಗಿದೆ.

    ಇದನ್ನೂ ಓದಿ: ಬಳಕೆಯಾಗದ ವೆಂಟಿಲೇಟರ್ ; ಇಚ್ಛಾಶಕ್ತಿ ಕೊರತೆಯಿಂದ ರೋಗಿಗಳಿಗೆ ದೊರೆಯದ ಸೌಲಭ್ಯ

    ದೇಶದಲ್ಲಿ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮೂರು ಕೇಂದ್ರಗಳಿಗೆ ಮೋದಿಯವರು ಶನಿವಾರ ಭೇಟಿ ನೀಡಿದ್ದರು. ಪುಣೆಯ ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ, ಅಹಮದಾಬಾದ್​ನ ಜೈದಸ್​ ಬಯೋಟೆಕ್​ ಪಾರ್ಕ್​ ಮತ್ತು ಹೈದರಾಬಾದ್​ನ ಭಾರತ್​ ಬಯೋಟೆಕ್​ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. (ಏಜೆನ್ಸೀಸ್​)

    ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

    ಲಾಡ್ಜ್​ಗೆ ಬರುವಾಗ ಇಬ್ಬರು, ಹೋಗುವಾಗ ಒಬ್ಬನೇ: ಮುಚ್ಚಿದ್ದ ಕೊಠಡಿ ತೆರೆದವರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts