More

    ಮ್ಯಾಚ್​ಗೆ ಮೊದಲು ಯಾರಿಗೂ ವಿಷ್​ ಮಾಡಲ್ವಂತೆ ಧೋನಿ! ಚೆನ್ನೈ ತಂಡದ ನಾಯಕನ ಈ ನಡೆಗೆ ಕಾರಣವೇನು?

    ನವದೆಹಲಿ: ಆಟ ಶುರುವಾಗುವುದಕ್ಕೂ ಮೊದಲು ತಂಡದ ಪ್ರತಿ ಸದಸ್ಯರು ಪರಸ್ಪರ ವಿಷ್​ ಮಾಡಿಕೊಳ್ಳುವುದು ಸಾಮಾನ್ಯ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಕೂಡ ತಮ್ಮ ತಂಡದ ಆಟಗಾರರಿಗೆ ಅದೇ ರೀತಿ ವಿಷ್​ ಮಾಡುತ್ತಾರೆ ಎನ್ನುವ ಕಲ್ಪನೆ ನಿಮಗಿದ್ದರೆ ಈ ಸುದ್ದಿ ಓದಿ. ನಾಯಕನ ಸ್ಥಾನದಲ್ಲಿದ್ದರೂ ಧೋನಿ ಆಟಕ್ಕೂ ಮೊದಲು ಯಾರೊಬ್ಬರಿಗೂ ವಿಷ್​ ಮಾಡುವುದಿಲ್ಲವಂತೆ.

    ಹೌದು! ಧೋನಿ ಅವರ ಈ ವಿಚಿತ್ರ ನಡೆಗೆ ಕಾರಣವೊಂದಿದೆ. ಮೊದ ಮೊದಲು ಅವರು ವಿಷ್​ ಮಾಡಿದಾಗೆಲ್ಲ ನಿರೀಕ್ಷೆಯ ಆಟವನ್ನು ತಂಡ ಆಡುವಲ್ಲಿ ವಿಫಲವಾಗುತ್ತಿತ್ತಂತೆ. ಅದಾದ ನಂತರ ಅವರು ವಿಷ್​ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ವಿಷ್​ ಮಾಡದಿದ್ದರೆ ಆಟ ಚೆನ್ನಾಗಿ ಆಗುತ್ತದೆ ಎನ್ನುವುದು ಅವರ ನಂಬಿಕೆಯಂತೆ. ಅಂದ ಹಾಗೆ ಧೋನಿ ಅವರ ಈ ನಂಬಿಕೆಯನ್ನು ಭಾರತೀಯ ಕ್ರಿಕೆಟ್​ ತಂಡದ ಮಾಜಿ ಸ್ಪಿನ್ನರ್​ ಪ್ರಜ್ಞಾನ್ ಓಜಾ ಸಾಮಾಜಿಕವಾಗಿ ತೆರೆದಿಟ್ಟಿದ್ದಾರೆ.

    ಧೋನಿ ಮಾತ್ರವಲ್ಲ, ಅನೇಕರಲ್ಲಿ ಈ ರೀತಿಯ ಕೆಲವು ನಂಬಿಕೆಗಳಿರುತ್ತದೆ. ಅದು ಸತ್ಯವೋ ಅಥವಾ ಸುಳ್ಳೋ ಒಟ್ಟಿನಲ್ಲಿ ಆ ನಂಬಿಕೆಯಂತೆಯೇ ಬದುಕುತ್ತಿರುತ್ತಾರೆ. ಸದ್ಯ ಎಂಎಸ್​ ಧೋನಿ ಅವರು ಐಪಿಎಲ್​ ಟೂರ್ನಮೆಂಟ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕನಾಗಿ ಆಟವಾಡುತ್ತಿದ್ದಾರೆ. ಈ ಟೂರ್ನಮೆಂಟ್​ನಲ್ಲೂ ಅವರು ತಮ್ಮ ಸಹ ಆಟಗಾರರಿಗೆ ಆಟಕ್ಕೂ ಮೊದಲು ವಿಷ್​ ಮಾಡದೆಯೇ ಮೈದಾನಕ್ಕಿಳಿಯುತ್ತಿರಬಹುದು. (ಏಜೆನ್ಸೀಸ್​)

    ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​ಗೆ ಕರೊನಾ ಸೋಂಕು ದೃಢ

    ಧೋನಿ ತಂದೆ-ತಾಯಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದೌಡಾಯಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts