More

    ಆಹಾರ ಇಲಾಖೆ ಆಯುಕ್ತೆಯಾಗಿ ಎಂ.ಕನಗವಲ್ಲಿ ಮುಂದುವರಿಸಿ: ಪಡಿತರ ಹಿತರಕ್ಷಣಾ ಸಂಘ ಮನವಿ

    ಬೆಂಗಳೂರು: ಆಹಾರ ಇಲಾಖೆ ಆಯುಕ್ತೆರಾಗಿ ಎಂ.ಕನಗವಲ್ಲಿ ಅವರನ್ನೇ ಮುಂದುವರಿಸಬೇಕೆಂದು ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘ, ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

    ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡುವ ಡಿಬಿಟಿ ವ್ಯವಸ್ಥೆಯನ್ನು ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ಪಡಿತರದಾರರ ಖಾತೆಗೆ ಯಾವುದೇ ಲೋಪದೋಷ ಇಲ್ಲದಂತೆ ಹಣ ವರ್ಗಾವಣೆಯಾಗುತ್ತಿದೆ. ಇಲಾಖೆಯಲ್ಲಿ ಕೆಲವೊಂದು ಬದಲಾವಣೆ ತಂದಿರುವ ಕನಗವಲ್ಲಿ, ಭ್ರಷ್ಟ್ರಾಚಾರ ತಡೆಗೆ ಹಲವು ಕ್ರಮ ಕೈಗೊಂಡಿದ್ದಾರೆ. ಹೀಗಿರುವಾಗ, ಪ್ರಾಮಾಣಿಕ ಅಧಿಕಾರಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬಾರದು ಎಂದು ಇಲಾಖೆ ಸಚಿವರಿಗೆ ಸಂಘ ಮನವಿ ಮಾಡಿದೆ.

    ಇದನ್ನೂ ಓದಿ: ವಿಶ್ವಕಪ್ ಫೈನಲ್‌ನ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ರೋಹಿತ್ ಶರ್ಮಾ; ಪತ್ನಿ ರಿತಿಕಾ ಜೊತೆ ಎಲ್ಲಿಗೆ ಹೋಗಿದ್ದಾರೆ?

    ನ್ಯಾಯಬೆಲೆ ಅಂಗಡಿ ಮಾಲೀಕರು ಎದುರಿಸುತ್ತಿದ್ದ ಕೆಲ ಸಮಸ್ಯೆಗಳನ್ನು ಈಡೇರಿಸುವ ಕೆಲಸವನ್ನು ಇವರು ಮಾಡಿದ್ದಾರೆ. ನಿಗದಿತ ಅವಧಿಯಲ್ಲಿ ನಮಗೆ ಕಮಿಷನ್ ಹಣ ಸಿಗುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಇವರನ್ನು ವರ್ಗಾವಣೆ ಮಾಡದೆ ಇದೇ ಇಲಾಖೆಯಲ್ಲಿ ಮುಂದುವರಿಸಬೇಕು ಎಂದು ಸಂಘದ ಅಧ್ಯಕ್ಷ ಜೆ.ಬಿ.ಕುಮಾರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts