More

    ರೈಲ್ವೆ ಕಮಿಷನರ್ ಪರಿಶೀಲನೆ ನಂತರ ಉದ್ಘಾಟನೆ

    ಸಿಂಧನೂರು; ಮುನಿರಾಬಾದ್-ಮಹಿಬೂಬ್ ನಗರ ರೈಲ್ವೆ ಯೋಜನೆ ಸಿಂಧನೂರುವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಕಮಿಷನರ್ ಪರಿಶೀಲಿಸಿದ ನಂತರ ರೈಲು ಸೇವೆಗೆ ಚಾಲನೆ ಸಿಗಲಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದರು.

    ಇದನ್ನೂ ಓದಿ: ಈ ರೀತಿಯಾಗಿ ಹಳಿಗಳ ಮೇಲೆ ಓಡುತ್ತೆ ವಂದೇ ಭಾರತ್ ಎಕ್ಸ್‌ಪ್ರೆಸ್: ವಿಡಿಯೋ ಹಂಚಿಕೊಂಡ ರೈಲ್ವೆ, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ

    ನಗರದಲ್ಲಿ ಮುನಿರಾಬಾದ್-ಮಹಿಬೂಬ ನಗರ ರೈಲ್ವೆ ಯೋಜನೆ ರೈಲು ನಿಲ್ದಾಣ ಸೇರಿ ಇತರ ಕಾಮಗಾರಿ ವೀಕ್ಷಿಸಿ ಶುಕ್ರವಾರ ಮಾತನಾಡಿದರು.
    ಇಲ್ಲಿನ ರೈಲ್ವೆ ಯೋಜನೆ ಅಧಿಕಾರಿಗಳಿಂದ ಕಾಮಗಾರಿ ಪೂರ್ಣಗೊಂಡ ಬಗ್ಗೆ ಮಾಹಿತಿ ಪಡೆದು, ಜ.30ರೊಳಗೆ ರೈಲ್ವೆ ಓಡಿಸುವ ಯೋಜನೆ ಹಾಕಿಕೊಂಡಿದೆ.

    ಆದರೆ, ಯೋಜನೆ ಸ್ಥಳೀಯವಾಗಿ ರೈಲ್ವೆ ಕಮಿಷನರ್ ಪರಿಶೀಲಿಸಬೇಕು. ನಂತರ ಉದ್ಘಾಟನೆಗೆ ದಿನಾಂಕ ನಿಗದಿಯಾಗಲಿದೆ. ಈಗಾಗಲೇ ಸ್ಥಳೀಯ ಬಿಜೆಪಿ ಪ್ರಮುಖರು, ಕೇಂದ್ರ ಸರ್ಕಾರದ ಸಚಿವರೊಂದಿಗೆ ಮಾತನಾಡಿದ್ದೇವೆ. ಆದಷ್ಟು ಶೀಘ್ರವೇ ರೈಲು ಸಿಂಧನೂರಿಗೆ ಬರಲಿದೆ ಎಂದರು.

    ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿಕೆ

    ಗಂಗಾವತಿಯಿಂದ ಅಯೋಧ್ಯೆಗೆ ರೈಲು ಓಡಿಸುವ ಬಗ್ಗೆ ಬೇಡಿಕೆ ಇದೆ. ಸಿಂಧನೂರಿನಿಂದಲೇ ಓಡಿಸಿದರೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು. ರೈಲ್ವೆ ನಿಲ್ದಾಣಕ್ಕೆ ಬರಲು, ನಗರದ ಗಂಗಾವತಿ ರಸ್ತೆಯಿಂದ ಇಲ್ಲಿಗೆ ರಸ್ತೆ ನಿರ್ಮಾಣಕ್ಕೆ ನೀರಾವರಿ ಇಲಾಖೆಯಿಂದ 9 ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಕರೆಯಲು ಈ ಸರ್ಕಾರ ಹಿಂದೇಟು ಹಾಕಿದೆ.

    ರಸ್ತೆ ನಿರ್ಮಾಣಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಹೈಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸುವೆ. ಒಂದು ವೇಳೆ ಟಿಕೆಟ್ ಕೆ.ಕರಿಯಪ್ಪ, ಅಮರೇಗೌಡ ವಿರೂಪಾಪುರ ಸೇರಿ ಯಾರಿಗೆ ಟಿಕೆಟ್ ನೀಡಿದರೂ, ಕೆಲಸ ಮಾಡುವೆ.

    ಮಾಧ್ಯಮಗಳ ವರದಿಯಂತೆ ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದಲ್ಲಿ 400ಕ್ಕೂ ಅಧಿಕ ಸೀಟು ಗೆಲ್ಲುವ ಮೂನ್ಸೂಚನೆ ಸಿಕ್ಕಿದೆ. ಖಂಡಿತ ಇದು ಸಾಧ್ಯವಾಗಲಿದೆ ಎಂದರು. ರೈಲ್ವೆ ಯೋಜನೆ ಎಇಇ ಉಮಾಮಹೇಶ್ವರ, ಭೂಸ್ವಾಧೀನ ಅಧಿಕಾರಿ ಶ್ರತಿ, ಬಿಜೆಪಿ ಪ್ರಮುಖ ಕೆ.ಕರಿಯಪ್ಪ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರೂಪಾಪುರ,

    ಬಿಜೆಪಿ ನಗರ ಅಧ್ಯಕ್ಷ ನಿರುಪಾದಿ ಜೋಳದರಾಶಿ, ಗ್ರಾಮೀಣ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜಡಿಯಪ್ಪ ಹೂಗಾರ, ಸಿದ್ರಾಮೇಶ ಮನ್ನಾಪುರ, ತಿಮ್ಮಾರಡ್ಡಿ ಹುಡಾ, ವೆಂಕೋಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts