More

    ಮಾಜಿ ಡಿಸಿಎಂ ಅವರ ಮಗ-ಸೊಸೆ, ಮೊಮ್ಮಗಳ ಕೊಲೆ! ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ

    ಭೋಪಾಲ್: ಮಧ್ಯಪ್ರದೇಶದ ಜನತೆಗೆ ಬುಧವಾರ ಒಂದು ಶಾಕ್​ ಎದುರಾಗಿದೆ. ಮಾಜಿ ಉಪಮುಖ್ಯಮಂತ್ರಿಗಳ ಮಗ, ಸೊಸೆ ಮತ್ತು ಮೊಮ್ಮಗಳನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

    ಮಾಜಿ ಉಪಮುಖ್ಯಮಂತ್ರಿ ಪ್ಯಾರೆಲಾಲ್​ ಕನ್ವಾರ್​ ಅವರ ಮಗ ಹರೀಶ್​ ಕನ್ವಾರ್​, ಸೊಸೆ ಸುಮಿತ್ರ ಕನ್ವಾರ್​ ಮತ್ತು ಐದು ವರ್ಷದ ಮೊಮ್ಮಗಳು ಆಶಿ ಕನ್ವಾರ್​ನನ್ನು ಕೊಲೆ ಮಾಡಲಾಗಿದೆ. ಈ ಕುಟುಂಬ ಚತ್ತೀಸ್​ಗಢದ ಕೋಬ್ರಾ ಜಿಲ್ಲೆಯಲ್ಲಿ ವಾಸವಿದ್ದು, ಅವರ ಮನೆಯಲ್ಲೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಕೋಬ್ರಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ತಿಳಿಸಿದ್ದಾರೆ. ಅನೇಕ ರಾಜಕೀಯ ನಾಯಕರು ಸ್ಥಳಕ್ಕೆ ತೆರಳಿ, ಕುಟುಂಬಸ್ಥರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. (ಏಜೆನ್ಸೀಸ್​)

    ಆನ್​ಲೈನ್​ ತರಗತಿಗಳನ್ನು ತಕ್ಷಣವೇ ನಿಲ್ಲಿಸಿ! ಖಾಸಗಿ ಶಾಲೆಗಳಿಗೆ ಸರ್ಕಾರದ ಸೂಚನೆ

    ಶ್ರೀಶೈಲ ಜಗದ್ಗುರುಗಳಿಗೆ ಕರೊನಾ ಪಾಸಿಟಿವ್! ಕೆಲ ದಿನಗಳ ಹಿಂದಷ್ಟೇ ಪ್ರವಾಸ ಮಾಡಿದ್ದ ಶ್ರೀಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts