More

    ಚಿಂತಕ, ಸಂಶೋಧಕ ಚಿದಾನಂದ ಮೂರ್ತಿಯವರ ಸ್ಫೂರ್ತಿಯುತ ಶೈಕ್ಷಣಿಕ ಜೀವನ

    ಬೆಂಗಳೂರು: ಚಿದಾನಂದ ಮೂರ್ತಿಯವರು 1931ರ ಮೇ 10ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೋಗಲೂರಿನಲ್ಲಿ (ಹಿರೇಕೋಗಲೂರು) ಜನಿಸಿದರು.

    ತಂದೆ ಕೊಟ್ರಯ್ಯ, ತಾಯಿ ಪಾರ್ವತಮ್ಮ. ತಂದೆ ಹಳ್ಳಿಯ ಮಠದ ಜಂಗಮರಾಗಿದ್ದವರು. ‘ಎಂ’ ಎಂದರೆ ‘ಮಠದ’. ‘ಚಲ, ಹಠ, ಕಷ್ಟ, ಸಹಿಷ್ಣುತೆ, ನೇರ ನಡೆ-ನುಡಿ, ಅದಮ್ಯೋತ್ಸಾಹ, ಸ್ವಾಭಿಮಾನ, ಸ್ವಾವಲಂಬಿ ಸ್ವಭಾವ ಇವು ನನ್ನ ಅಯ್ಯ-ಅವ್ವರಿಂದ ಬಂದ ಗುಣಗಳೆಂದು ನಾನು ಭಾವಿಸಿದ್ದೇನೆ’ ಎಂದು ಆಗಾಗ ಚಿದಾನಂದಮೂರ್ತಿಯವರು ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು.

    ಚಿದಾನಂದಮೂರ್ತಿಯವರು ಪ್ರಾಥಮಿಕ ಶಿಕ್ಷಣವನ್ನು ಕೋಗಲೂರಿನಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣವನ್ನು ಸಂತೆಬೆನ್ನೂರಿನಲ್ಲಿ ಆರಂಭಿಸಿ ಪುನಃ ಕೋಗಲೂರಿನಲ್ಲಿ ಮುಂದುವರಿಸಿದರು. ಚನ್ನಗಿರಿಯಲ್ಲಿ ಪಬ್ಲಿಕ್ ಪರೀಕ್ಷೆಗೆ ಕುಳಿತು, ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು (1945).

    ದಾವಣಗೆರೆಯ ಮುನಿಸಿಪಲ್ ಪ್ರೌಢಶಾಲೆಗೆ ಸೇರಿ ವಿದ್ಯಾಭ್ಯಾಸ ಮುಂದುವರಿಸಿದರು. ಜಯದೇವ ವಸತಿನಿಲಯದಲ್ಲಿದ್ದುಕೊಂಡು ಓದಿ, 1948ರಲ್ಲಿ ಎಸ್​ಎಸ್​ಎಲ್​ಸಿ ಮುಗಿಸಿದರು. ಬಳಿಕ ಅಲ್ಲಿಯೇ ಇಂಟರ್​ಮೀಡಿಯೇಟ್ ಕಾಲೇಜಿಗೆ ಸೇರಿ ರ್ಯಾಂಕ್​ನೊಂದಿಗೆ ಉತ್ತೀರ್ಣರಾದರು.

    ಚಿದಾನಂದ ಅವರು ಆರಿಸಿಕೊಂಡ ವಿಷಯಗಳು ಗಣಿತ ಮತ್ತು ವಿಜ್ಞಾನವಾಗಿತ್ತು. ಆದರೆ, ಮೈಸೂರು ಮಹಾರಾಜ ಕಾಲೇಜಿಗೆ ಕನ್ನಡ ಆನರ್ಸ್ ವಿದ್ಯಾರ್ಥಿಯಾಗಿ ಸೇರಿದರು. ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿ ಕನ್ನಡ ಆನರ್ಸ್​ಗೆ ಸೇರಿದ್ದು ಹಲವರಿಗೆ ಸೋಜಿಗದ ವಿಷಯವಾಗಿತ್ತು; ಕೆಲವರು ಹಿಯಾಳಿಸಿದರಂತೆ! ಆದರೆ ಚಿದಾನಂದಮೂರ್ತಿಯವರು ಯಾವ ರೀತಿಯ ಮಾತುಗಳಿಂದಲೂ ವಿಚಲಿತರಾಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts