More

    ಸರ್ಕಾರಕ್ಕೆ ಶಾಸಕ ಮನಗೂಳಿ ಪತ್ರ

    ಸಿಂದಗಿ: ತಾಲೂಕಿನ ಕೆಲ ಗ್ರಾಮಗಳಲ್ಲಿ ಮೇ 10 ರಂದು ಬಿರುಗಾಳಿ ಸಹಿತ ಸುರಿದ ಮಳೆಗೆ ಅಂದಾಜು 700 ಎಕರೆ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದು, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಶಾಸಕ ಎಂ.ಸಿ.ಮನಗೂಳಿ ಮಂಗಳವಾರ ಪತ್ರ ಬರೆದಿದ್ದಾರೆ.ತಾಲೂಕಿನ ಗೋಲಗೇರಿ, ಡಂಬಳ, ಸಾಸಾಬಾಳ, ಕೊಕಟನೂರ, ಕನ್ನೊಳ್ಳಿ, ಪುರದಾಳ, ಕರವಿನಾಳ, ಚಿಕ್ಕಸಿಂದಗಿ ಯಂಕಂಚಿ ಸೇರಿ ಇತರ ಗ್ರಾಮಗಳಲ್ಲಿ ಬೆಳೆಯಲಾಗಿದ್ದ ಲಿಂಬೆ, ಪಪಾಯ, ದ್ರಾಕ್ಷಿ, ಬಾಳೆ, ಕಬ್ಬು, ಮೆಕ್ಕೆಜೋಳ, ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ವಿಜಯಪುರ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಯನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಒಂದೆಡೆ ಲಾಕ್‌ಡೌನ್ ಪರಿಣಾಮ ಬೆಳೆದ ಬೆಳೆಗಳ ಬೆಲೆ ಕುಸಿತ ಕಂಡಿದೆ. ಇನ್ನೊಂದೆಡೆ ಬೆಳೆ ಕೈಗೆ ಬರುವಷ್ಟರಲ್ಲೇ ಅಕಾಲಿಕ ಮಳೆ, ಬಿರುಗಾಳಿಯಿಂದಾಗಿ ಈ ಭಾಗದ ರೈತರು ಹಾನಿಗೀಡಾಗಿ ಕಂಗಾಲಾಗಿದ್ದಾರೆ.

    ತಾಲೂಕಿನ ಗೋಲಗೇರಿ, ಡಂಬಳ, ಸಾಸಾಬಾಳ, ಕೊಕಟನೂರ, ಕನ್ನೊಳ್ಳಿ, ಪುರದಾಳ, ಕರವಿನಾಳ, ಚಿಕ್ಕಸಿಂದಗಿ ಯಂಕಂಚಿ ಸೇರಿ ಇತರ ಗ್ರಾಮಗಳಲ್ಲಿ ಬೆಳೆಯಲಾಗಿದ್ದ ಲಿಂಬೆ, ಪಪಾಯ, ದ್ರಾಕ್ಷಿ, ಬಾಳೆ, ಕಬ್ಬು, ಮೆಕ್ಕೆಜೋಳ, ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ವಿಜಯಪುರ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಯನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಒಂದೆಡೆ ಲಾಕ್‌ಡೌನ್ ಪರಿಣಾಮ ಬೆಳೆದ ಬೆಳೆಗಳ ಬೆಲೆ ಕುಸಿತ ಕಂಡಿದೆ. ಇನ್ನೊಂದೆಡೆ ಬೆಳೆ ಕೈಗೆ ಬರುವಷ್ಟರಲ್ಲೇ ಅಕಾಲಿಕ ಮಳೆ, ಬಿರುಗಾಳಿಯಿಂದಾಗಿ ಈ ಭಾಗದ ರೈತರು ಹಾನಿಗೀಡಾಗಿ ಕಂಗಾಲಾಗಿದ್ದಾರೆ.

    ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸುವ ಮೂಲಕ ರೈತರ ಕಣ್ಣೀರು ಒರೆಸಲು ಮುಂದಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ. ಪಾಟೀಲ, ತೋಟಗಾರಿಕೆ ಸಚಿವ ಕೆ.ಸಿ. ನಾರಾಯಣಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ, ತೋಟಗಾರಿಕೆ ನಿರ್ದೇಶಕರು ಹಾಗೂ ವಿಜಯಪುರ ಜಿಲ್ಲಾಧಿಕಾರಿಗೆ ಪತ್ರ ಮುಖೇನ ಶಾಸಕರು ಮನವಿ ಮಾಡಿದ್ದಾರೆ.

    ಸರ್ಕಾರಕ್ಕೆ ಶಾಸಕ ಮನಗೂಳಿ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts