More

    ತೋಂಟದಾರ್ಯ ಮಠದ ಲಘು ರಥೋತ್ಸವ

    ಡಂಬಳ: ಇಲ್ಲಿನ ತೋಂಟದಾರ್ಯ ಮಠದ ಲಘು ರಥೋತ್ಸವ ಶನಿವಾರ ಸಂಜೆ ಭಕ್ತರ ಮಧ್ಯ ಜಯ ಘೊಷಣೆಯೊಂದಿಗೆ ಸಂಭ್ರಮದಿಂದ ನಡೆಯಿತು.

    ಲಘು ರಥೋತ್ಸವದ ಮುಂದೆ ಡೊಳ್ಳು ಕುಣಿತ, ಭಜನೆ ಸೇರಿ ವಿವಿಧ ವಾದ್ಯಮೇಳ ಸಾಗಿದವು. ಅಲ್ಲದೆ, ಅಡ್ಡಪಲ್ಲಕ್ಕಿ ಉತ್ಸವವೂ ವಿಜೃಂಭಣೆಯಿಂದ ಜರುಗಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಸಿದರು. ಮಾಜಿ ಶಾಸಕ ಜಿ.ಎಸ್. ಪಾಟೀಲ, ಗೋಣಿಬಸಪ್ಪ ಕೊರ್ಲಹಳ್ಳಿ, ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ, ರೇವಣ್ಣಸಿದ್ದಪ್ಪ ಕರಿಗಾರ, ಎಸ್.ಎಸ್. ಪಟ್ಟಣಶೆಟ್ಟರ, ಜಿ.ವಿ. ಹಿರೇಮಠ, ಮರಿಯಪ್ಪ ಸಿದ್ದಣ್ಣವರ, ಶ್ರೀಕಾಂತ ರಾಯರಡ್ಡಿ, ಕುಬೇರಪ್ಪ ಕೊಳ್ಳಾರ, ಮಾರುತಿ ಹೊಂಬಳ, ಬಸವರಡ್ಡಿ ಬಂಡಿಹಾಳ, ಸೋಮಣ್ಣ ಗುಡ್ಡದ, ಬಾಬುಸಾಬ್ ಸರಕವಾಸ, ಅಶೋಕ ಕಬೇರಹಳ್ಳಿ, ಮುತ್ತು ಹಿರೇಮಠ, ಮುತ್ತಣ್ಣ ಕೊಂತಿಕಲ್ಲ, ಬಸವರಾಜ ಪೂಜಾರ, ನಿಂಗಪ್ಪ ಪಲ್ಲೇದ, ಮಂಜು ತಳವಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts