More

    ಭೌತಿಕ ಮತ್ತು ಇಂದ್ರಿಯಗಳ ಸುಖ ನಿಜವಾದ ಸುಖವೇ ಇಲ್ಲ: ತೋಂಟದ ಸಿದ್ಧರಾಮ ಶ್ರೀ

    ವಿಜಯವಾಣಿ ಸುದ್ದಿಜಾಲ ಗದಗ
    ಭೌತಿಕ ಮತ್ತು ಇಂದ್ರಿಯಗಳ ಸುಖ ನಿಜವಾದ ಸುಖವೇ ಇಲ್ಲ. ನಿಜವಾದ ಸುಖ ಲಿಂಗಾಂಗ ಸಾಮರಸ್ಯದ ಸುಖ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ಲಿಂಗಾಯತ ಪ್ರಗತಿಶೀಲ ಸಂದ 2649 ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದ್ರಿಯಾತೀತವಾದ ಆತ್ಮಸುಖವನ್ನು ಹೊಂದಬೇಕೆಂದು ಹಡಪದ ಅಪ್ಪಣ್ಣನವರು ತಮ್ಮ ಬದುಕಿನಿಂದ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಅವರನ್ನು ನಿಜಸುಖಿ ಎಂದು ಕರೆಯುತ್ತೇವೆ. ಹಡಪದ ಅಪ್ಪಣ್ಣನವರು ಮತ್ತು ಅವರ ಧರ್ಮಪತ್ನಿ ಲಿಂಗಮ್ಮನವರು ಅನುಭಾವಿಗಳು. ಶ್ರೇಷ್ಠ ಶರಣರು. ಮಾನವ ಜನ್ಮದ ಶ್ರೇಷ್ಠತೆಯನ್ನು ತಮ್ಮ ವಚನಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಶರಣರು ಕಾಯಕಕ್ಕೆ ಮಹತ್ವವನ್ನು ಕೊಟ್ಟಿದ್ದರು ಎಂದು ಶ್ರೀಗಳು ತಿಳಿಸಿದರು.
    ಶಶಿಧರ ಕರವೀರಶೆಟ್ರ ಉಪನ್ಯಾಸ ನೀಡಿ, ಹಪಡದ ಅಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದಶಿರ್ಯಾಗಿ ನಿಜಸುಖವನ್ನು ಹೊಂದಿದವರು. ಒತ್ತಡದ ಬದುಕಿನಲ್ಲಿಯೂ ಲಿಂಗಪೂಜೆಯಿಂದ ಲಿಂಗಾನಂದದ ಸುಖವನ್ನು ಪಡೆಯಬೇಕು. ಲಿಂಗಪೂಜೆ ಮತ್ತು ಶರಣರ ಸಂಗದಿಂದ ಮನುಷ್ಯನ ಬದುಕಿಗೆ ಪರಿರ್ಪೂಣತೆ ಲಭಿಸುತ್ತದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕ ಪಡೆದ ಹಡಪದ ಸಮಾಜದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಲ್ಲಿಕಾರ್ಜುನ ಚಂದಪ್ಪನವರ, ಲಿಂಗರಾಜ ಚಂಬಣ್ಣ ಚಂದಪ್ಪನವರ, ಬಸವರಾಜ ಹಡಪದ ಅವರನ್ನು ಸನ್ಮಾನಿಸಲಾಯಿತು.
    ತಂಗಡಗಿಯ ಅನ್ನದಾನಿ ಭಾರತಿ ಅಪ್ಪಣ್ಣ ಶ್ರಿಗಳು ಅಮ್ಮುಖ ವಹಿಸಿದ್ದರು.ಎನ್​. ತಿಮ್ಮಪ್ಪ, ವಿ. ಬಿ. ಕೊಣ್ಣೂರು, ಶ್ರೀನಿವಾಸ ಹಡಪದ, ಶೇಖಣ್ಣ ಕಳಸಾಪೂರ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts