More

    ಮುಗಿದ ಚಂದ್ರಗ್ರಹಣ; ಮೋಕ್ಷ ಕಾಲ ಆಗುತ್ತಿದ್ದಂತೆ ಜನಜೀವನ ಚುರುಕು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ..

    ಬೆಂಗಳೂರು: ರಾಹುಗ್ರಸ್ತ ಗ್ರಸ್ತೋದಯ ಚಂದ್ರಗ್ರಹಣ ಎಂದೂ ಕರೆಯಲಾಗುವ ಖಂಡಗ್ರಾಸ ಚಂದ್ರಗ್ರಹಣ ಮುಗಿದಿದ್ದು, ಮೋಕ್ಷ ಕಾಲವಾಗುತ್ತಿದ್ದಂತೆ ಜನಜೀವನ ಚುರುಕುಗೊಂಡಿದ್ದು, ಕೆಲಕಾಲ ಮುಚ್ಚಲಾಗಿದ್ದ ದೇವಸ್ಥಾನಗಳೂ ತೆರೆಯಲಾರಂಭಿಸಿ, ವಿಶೇಷ ಪೂಜೆ-ಪುನಸ್ಕಾರಗಳು ನಡೆಯಲಾರಂಭಿಸಿವೆ.

    ಈ ಚಂದ್ರ ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2.38, ಗ್ರಹಣದ ಮಧ್ಯ ಕಾಲವು ಸಂಜೆ 4.29 ಹಾಗೂ ಮೋಕ್ಷ ಕಾಲ ಸಂಜೆ 6.19 ಆಗಿದ್ದು, ಒಟ್ಟು 3 ಗಂಟೆ 40 ನಿಮಿಷಗಳ ಅವಧಿಯಲ್ಲಿ ಗ್ರಹಣವು ಮುಗಿದುಹೋಗಿದೆ. ರಾಜ್ಯದ ಹಲವೆಡೆ ಜನರು ಗ್ರಹಣ ಚಂದ್ರನನ್ನು ವೀಕ್ಷಿಸಿದರೆ, ಇನ್ನು ಕೆಲವೆಡೆ ಚಂದ್ರನ ದರ್ಶನ ಸಾಧ್ಯವಾಗಲಿಲ್ಲ.

    ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನಾಗತಿ ಬಸಾಪುರದಲ್ಲಿ ಸಂಜೆ 5.30ಕ್ಕೆ ನಡೆಯಬೇಕಿದ್ದ ಶ್ರೀಹಾಲಸ್ವಾಮಿ ರಥೋತ್ಸವ ರಾತ್ರಿ 7ಕ್ಕೆ ನಡೆಯಿತು.

    ಧಾರವಾಡದಲ್ಲಿ ಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯಾಯಿತು. ಕೊನೆಯ 22 ನಿಮಿಷ ಕಾಣಬೇಕಿದ್ದ ಗ್ರಹಣ, ಮೋಡ ಕೊನೆಯವರೆಗೂ ಇದ್ದಿದ್ದರಿಂದ ಗೋಚರಿಸಲಿಲ್ಲ. ಆದರೆ ಗ್ರಹಣ ಮೋಕ್ಷ ಮುಗಿದ ಬಳಿಕ ಕೊನೆಯ 2-3 ನಿಮಿಷ ಮಾತ್ರ ಕೆಂಪು ಚಂದ್ರ ಗೋಚರಿಸಿದ.

    ರಾಯಚೂರು ಎನ್​ಜಿಒ ಕಾಲನಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ, ನವಗ್ರಹ ಶಾಂತಿ, ಮೃತ್ಯುಂಜಯ, ನಕ್ಷತ್ರ ಹೋಮ, ಗ್ರಹಣ ಬಳಿಕ ಸತ್ಯನಾರಾಯಣ ಪೂಜೆಗಳು ನಡೆದವು. ನಗರದ ನಂದೀಶ್ವರ ದೇವಸ್ಥಾನದಲ್ಲಿ ನಿರಂತರ ಜಲರುದ್ರಾಭಿಷೇಕ ನೆರವೇರಿತು.

    ಬೆಳಗಾವಿಯ ನಾಗಲೋಟಿಮಠ ವಿಜ್ಞಾನ ಕೇಂದ್ರದಿಂದ ಬೆಳಗಾವಿಯ ಎಸ್‌ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ದೂರದರ್ಶಕ ಮೂಲಕ ವಿದ್ಯಾರ್ಥಿಗಳು ಚಂದ್ರಗ್ರಹಣ ವೀಕ್ಷಿಸಿದರು.

    ಗ್ರಹಣ ಕಾಲದಲ್ಲಿ ಹುಬ್ಬಳ್ಳಿಯ ಈಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು. ಹುಬ್ಬಳ್ಳಿಯ ಪ್ರಮುಖ ದೇವಾಲಯಗಳಲ್ಲಿ ಬಾಗಿಲು ಬಂದ್ ಮಾಡಿ ಹೋಮ ಮತ್ತು ಪೂರ್ಣಕುಂಭ ಪೂಜೆಗಳು ನಡೆದವು.

    ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿಯ ಹತ್ಯೆ, ಇಬ್ಬರು ಆರೋಪಿಗಳ ಬಂಧನ..

    Hindu ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ: ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts