More

    ಡಿವೋರ್ಸ್​ ಪಡೆಯಲು ಬಂದ 20 ದಂಪತಿಗೆ ಫ್ರೀ ಸಿನಿಮಾ ಟಿಕೆಟ್​ ಕೊಟ್ಟು ಕಳುಹಿಸಿದ ಪೊಲೀಸರು!

    ಲೂಧಿಯಾನ: ಗಂಡ-ಹೆಂಡತಿ ಅಂದಮೇಲೆ ಅಲ್ಲಿ ಜಗಳ ಮಾಮೂಲಿ. ಆದರೆ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು, ಪರಸ್ಪರ ಗೌರವಿಸುತ್ತಾ, ಸರಿ-ತಪ್ಪುಗಳನ್ನು ಸ್ವೀಕರಿಸುವ ಮನೋಭಾವ ಬೆಳಸಿಕೊಂಡು, ಅಹಂ ಭಾವನೆಯನ್ನು ಬದಿಗಿಟ್ಟು ಒಟ್ಟಿಗೆ ಹೆಜ್ಜೆ ಹಾಕಿದರೆ ವೈವಾಹಿಕ ಜೀವನ ಹಾಲು ಜೇನಿನಂತೆ ಇರುತ್ತದೆ. ಆದರೆ, ಇದನ್ನು ಮರೆಯುವ ಕೆಲವರು ದಾಂಪತ್ಯ ಜೀವನವೆಂಬ ಪರಿಶುದ್ಧ ಕನ್ನಡಿಯನ್ನು ಡಿವೋರ್ಸ್​ನಿಂದ ಹೊಡೆದು ಬಿಡುತ್ತಾರೆ. ಆದರೆ, ತಪ್ಪನ್ನು ತಿದ್ದಿ ಹೇಳುವವರಿದ್ದರೆ ಒಂದು ಸಂಸಾರವನ್ನೇ ಉಳಿಸಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.

    ಅನೇಕ ದಂಪತಿ ತಮ್ಮ ಕೌಟುಂಬಿಕ ಕಲಹವನ್ನು ಇತ್ಯರ್ಥ ಪಡೆಸಿಕೊಳ್ಳಲು ಪೊಲೀಸ್​ ಠಾಣೆಗೆ ಬರುತ್ತಾರೆ. ಅಂಥವರಿಗೆ ಪೊಲೀಸರು ವಿಶೇಷ ಸಮಾಲೋಚನೆ ನೀಡಿ, ಮನಸ್ತಾಪಗಳನ್ನು ತೊಡೆದುಹಾಕಿ ಮತ್ತೆ ಒಟ್ಟಾಗಿ ಹೆಜ್ಜೆ ಹಾಕಲು ದಾರಿ ಮಾಡಿಕೊಡುತ್ತಾರೆ. ಅದರಂತೆ ಪ್ರೇಮಿಗಳ ದಿನದಂದು ಪಂಜಾಬ್​ನ ಲೂಧಿಯಾನ ಪೊಲೀಸ್​ ಠಾಣೆಗೆ ಅನೇಕ ದಂಪತಿ ಡಿವೋರ್ಸ್​ ವಿಚಾರವಾಗಿ ಆಗಮಿಸಿದ್ದರು.

    ಠಾಣೆಗೆ ಆಗಮಿಸಿದ ಅನೇಕ ದಂಪತಿಗಳಿಗೆ ಆಪ್ತ ಸಮಾಲೋಚನೆ ನೀಡಲಾಯಿತು. ಈ ವೇಳೆ 20 ದಂಪತಿ ತಮ್ಮ ಮನಸ್ಸನ್ನು ಬದಲಿಸಿಕೊಂಡು ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದರು. ಅಂದು ಪ್ರೇಮಿಗಳ ದಿನವಾದ್ದರಿಂದ ಪೊಲೀಸ್​​ ಠಾಣೆ ವತಿಯಿಂದಲೇ 20 ದಂಪತಿಗೂ ಉಚಿತವಾಗಿ ಸಿನಿಮಾ ಟಿಕೆಟ್​ ನೀಡಲಾಯಿತು.

    ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿ, ಅವರಿಗೆ ಸಿನಿಮಾ ಟಿಕೆಟ್​ ನೀಡಿದ ಲೂಧಿಯಾನ ಪೊಲೀಸರ ಕಲ್ಪನೆಯನ್ನು ಸ್ಥಳೀಯ ಜನರು ಮೆಚ್ಚಿಕೊಂಡಿದ್ದಾರೆ. ಪೊಲೀಸರು ಇದೇ ರೀತಿ ಜನಸ್ನೇಹಿ ಆಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಟ್ರಾಫಿಕ್​ ಜಾಮ್​: ವಿಶ್ವದಲ್ಲೇ ಸಿಲಿಕಾನ್​ ಸಿಟಿ ಬೆಂಗಳೂರಿಗೆ 2ನೇ ಸ್ಥಾನ! ಲಂಡನ್​ ಮೊದಲು​

    ಎಲಾನ್​ ಮಸ್ಕ್ ನಾಯಿ ಫ್ಲೋಕಿ ಟ್ವಿಟರ್ ಸಿಇಒ! ಪರೋಕ್ಷವಾಗಿ ಪರಾಗ್​ಗೆ ಟಾಂಗ್​

    ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts