More

    ಮತ್ತೆ ಏರಿತು ಎಲ್​ಪಿಜಿ ಸಿಲಿಂಡರ್​ ದರ! ಒಂದೇ ತಿಂಗಳಲ್ಲಿ 100 ರೂಪಾಯಿ ಏರಿಕೆ

    ನವದೆಹಲಿ: ಎಲ್​ಪಿಜಿ ಸಿಲಿಂಡರ್​, ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಎಲ್​ಪಿಜಿ ಸಿಲಿಂಡರ್​ ದರ ಏರಿಕೆಯಾಗಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ ಎಲ್​ಪಿಜಿ ದರದಲ್ಲಿ 100 ರೂಪಾಯಿ ಏರಿಕೆಯಾದಂತಾಗಿದೆ.

    14.2 ಕೆಜಿ ಸಿಲಿಂಡರ್​ ದರದಲ್ಲಿ 25 ರೂಪಾಯಿ ಏರಿಕೆಯಾಗಿದೆ. ಈ ಹಿಂದೆ ಫೆಬ್ರವರಿ 4ರಂದು 25 ರೂಪಾಯಿ ಹಾಗೂ ಫೆಬ್ರವರಿ 15ರಂದು 50 ರೂಪಾಯಿ ಏರಿಕೆಯಾಗಿತ್ತು. ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್​ ದರ 794 ರೂಪಾಯಿಯಾಗಿದೆ. ಕೋಲ್ಕತ್ತದಲ್ಲಿ 820 ರೂಪಾಯಿ, ಮುಂಬೈನಲ್ಲಿ 794 ರೂಪಾಯಿ, ಚೆನ್ನೈನಲ್ಲಿ 810 ರೂಪಾಯಿ ಮತ್ತು ಹೈದರಾಬಾದ್​ನಲ್ಲಿ 846.50 ರೂಪಾಯಿಗೆ ಏರಿಕೆಯಾಗಿದೆ.

    ಡಿಸೆಂಬರ್​ನಲ್ಲೂ ಎಲ್​ಪಿಜಿ ಸಿಲಿಂಡರ್​ ದರ 100 ರೂಪಾಯಿ ಏರಿಕೆಯಾಗಿತ್ತು. ಎರಡು ಬಾರಿ 50 ರೂಪಾಯಿಯಂತೆ ಏರಿಕೆ ಮಾಡಲಾಗಿತ್ತು. ಇನ್ನೊಂದತ್ತ ಪೆಟ್ರೋಲ್​ ಬೆಲೆಯಲ್ಲೂ ಭಾರಿ ಏರಿಕೆ ಕಾಣುತ್ತಿದೆ. ಪ್ರತಿ ದಿನ ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 100 ರೂಪಾಯಿಯ ಗಡಿಗೆ ಸನಿಹವಾಗಿದೆ. (ಏಜೆನ್ಸೀಸ್​)
    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಗೊತ್ತಿಲ್ಲದೆ ತಪ್ಪಾಗಿದೆ… ನಿಮ್ಮ ಮನೆಮಗ ತಪ್ಪು ಮಾಡಿದ್ದಾನೆ ಅಂದುಕೊಂಡು ದಯವಿಟ್ಟು ಕ್ಷಮಿಸಿ…

    ಕೈಯಲ್ಲಿ ಪಿಸ್ತೂಲ್‌- ಉಸಿರುಬಿಟ್ರೆ ಶೂಟ‌್ಔಟ್‌: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್‌ ಕಳ್ಳ ಸಿಕ್ಕಿಬಿದ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts