More

    ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವಂತೆ ಫೋಟೋಗ್ರಾಫರ್ಸ್‌ ಆಗ್ರಹ

    ಕುಷ್ಟಗಿ: ಅಸಂಘಟಿತ ವಲಯದ 42ನೇ ವರ್ಗಕ್ಕೆ ಸೇರಿರುವ ಫೋಟೋಗ್ರಾಫರ್ಸ್‌ಗೆ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ಸೇರಿ ಇಲಾಖೆಯ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಎಂ.ಸಿದ್ದೇಶಗೆ ತಾಲೂಕಿನ ಫೋಟೋಗ್ರಾಫರ್ಸ್‌ ಗುರುವಾರ ಮನವಿ ಸಲ್ಲಿಸಿದರು.

    ಕರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಹಾಗೂ ವೈಯಕ್ತಿಕ ಕಾರ್ಯಕ್ರಮಗಳು ನಡೆಯದೆ ಫೋಟೋಗ್ರಾಫರ್ಸ್‌ಗೆ ಇಡೀ ವರ್ಷ ಕೆಲಸದವಿಲ್ಲದಂತಾಗಿ ಅದೇ ವೃತ್ತಿ ನಂಬಿರುವ ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸರ್ಕಾರ ಹಾಗೂ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ವೃತ್ತಿ ಭದ್ರತೆ ನೀಡಬೇಕು. ವಿವಿಧ ಇಲಾಖೆಗಳಲ್ಲಿ ವೆಬ್ ಕ್ಯಾಮರಾಗಳಿಂದ ಫೋಟೋ ತೆಗೆಯುವುದನ್ನು ನಿಲ್ಲಿಸಿ ವೃತ್ತಿನಿರತ ಫೋಟೋಗ್ರಾಫರ್ಸ್‌ಗೆ ಅವಕಾಶ ನೀಡಬೇಕು. ಉಚಿತ ನಿವೇಶನ, ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಅ.31ರಂದು ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಂಘದ ಅಧ್ಯಕ್ಷ ಮಹೇಂದ್ರ ಎಸ್.ಹಡಗಲಿ, ಗೌರವ ಅಧ್ಯಕ್ಷ ಭೀಮಸೇನ್‌ರಾವ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ವಿ. ಹಿರೇಮಠ, ಉಪಾಧ್ಯಕ್ಷ ಅಶೋಕ ಎಂ.ಪಾಟೀಲ್, ಖಜಾಂಚಿ ರವಿ ಎಸ್. ಗಂಗಾವತಿ, ಪದಾಧಿಕಾರಿಗಳಾದ ಮಹಾಂತೇಶ ಮಂಗಳೂರು, ಕನಕೇಶ ಪೂಜಾರ, ತಿರುಪತಿ ಎಲಿಗಾರ, ಅಣ್ಣೀರಯ್ಯ ಹಿರೇಮಠ, ಸಂತೋಶ ಕವಡಿಕಾಯಿ, ಗಣೇಶ ಎಲಿಗಾರ, ವಿಜಯ್ ಸೂಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts