More

    ಪೊಲೀಸರ ರಕ್ಷಣೆ ಕೋರಿದ ನವಜೋಡಿ; ಸಿನಿಮಾ ಕಥೆ ಮೀರಿಸುವಂತಿದೆ ಇವರ ಲವ್ ಕಹಾನಿ!

    ಶಿವಮೊಗ್ಗ: ಮದುವೆಯಾದ ನಂತರ ಮಧುಚಂದ್ರಕ್ಕೆ ತೆರಳಬೇಕಿದ್ದ ದಂಪತಿ, ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಘಟನೆ ಇದು. ಪ್ರೀತಿಸಿ ಮದುವೆಯಾದ ನವ ಜೋಡಿ ರಕ್ಷಣೆ ನೀಡುವಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸರ ಮೊರೆ ಹೋಗಿದೆ.

    ತಾಲೂಕಿನ ಬೀರನಕೆರೆಯ ಈ ಪ್ರೇಮಿಗಳು ಎರಡು ದಿನಗಳ ಹಿಂದಷ್ಟೇ ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ನವದಂಪತಿಗೆ ಯುವತಿ ಪಾಲಕರಿಂದ ಬೆದರಿಕೆ ಇದ್ದು, ಬೇರೆ ಹುಡುಗನೊಂದಿಗೆ ಮದುವೆ ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಪೊಲೀಸ್ ರಕ್ಷಣೆ ಕೋರಿದ್ದಾರೆ. ಪ್ರೇಮಿಗಳಿಬ್ಬರೂ ಒಂದೇ ಗ್ರಾಮದವರು. ಹುಡುಗ ಎಸ್ಸೆಸ್ಸೆಲ್ಸಿ ಮುಗಿಸಿದ್ದರೆ, ಹುಡುಗಿ ಬಿಇ ಸಿವಿಲ್ ಇಂಜಿನಿಯರಿಂಗ್ ಪದವೀಧರೆ. ಮೂರು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯವರಿಗೆ ತಿಳಿದಿತ್ತು. ಹಾಗಾಗಿ ಯುವತಿ ಮನೆಯವರು ಬೇರೊಂದು ಹುಡುಗನ ಜತೆ ಮದುವೆ ಮಾಡಲು ಪ್ಲ್ಯಾನ್ ಮಾಡಿ ರಾಣೆಬೆನ್ನೂರಿನ ಸಂಬಂಧಿಕರ ಮನೆಗೆ ಯುವತಿಯನ್ನು ಕಳುಹಿಸಿದ್ದರು.

    10 ದಿನಗಳ ಹಿಂದೆ ಯುವತಿಗೆ ಬೇರೆ ಹುಡುಗನೊಂದಿಗೆ ಮದುವೆ ಮಾಡಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಿವಮೊಗ್ಗದಿಂದ ಯುವಕ ಅಲ್ಲಿಗೂ ಒಂದೆರಡು ಬಾರಿ ಹೋಗಿ ಬಂದಿದ್ದ. ಪಾಲಕರು ಬೇರೆ ಊರಿನಲ್ಲಿರಿಸಿದ್ದರೂ ಪ್ರೇಮಿಯೊಂದಿಗೆ ಯುವತಿ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

    ಸಿನಿಮೀಯ ರೀತಿಯಲ್ಲಿ ಪರಾರಿ: ಯುವತಿ ರಾಣೆಬೆನ್ನೂರಿನಿಂದ ಸಂಬಂಧಿಕರ ಜತೆ ದಾವಣಗೆರೆ ನಗರದೇವತೆ ಜಾತ್ರೆಗೆ ಕಾರಿನಲ್ಲಿ ಹೊರಟಿದ್ದಳು. ಈ ವಿಚಾರ ತಿಳಿದಿದ್ದ ಪ್ರೇಮಿ ಆ ಕಾರನ್ನು ಹಿಂಬಾಲಿಸಿದ್ದ. ರಾಣೆಬೆನ್ನೂರಿನಿಂದ ಸ್ವಲ್ಪ ದೂರ ತೆರಳಿದ ಬಳಿಕ ಬೈಕ್ ಸವಾರನೊಬ್ಬ ಯುವತಿ ಇದ್ದ ಕಾರಿನ ಚಾಲಕನೊಂದಿಗೆ ಮಾತನಾಡುವಂತೆ ನಟಿಸಿದ್ದ. ಈ ವೇಳೆ ಚಾಲಕ ಕಾರನ್ನು ನಿಧಾನವಾಗಿ ಚಲಿಸುತ್ತಿದ್ದಂತೆ ಯುವತಿ ಕಾರಿನಿಂದ ಇಳಿದು ಪ್ರೇಮಿ ಜತೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಳು. ಯುವತಿ ಪಾಲಕರು ರಾಣೆಬೆನ್ನೂರು ಠಾಣೆಯಲ್ಲಿ ಅಪಹರಣ ಕೇಸ್ ದಾಖಲಿಸಿದ್ದರು.

    ಮಾರ್ಗಮಧ್ಯೆ ಮದುವೆ: ಕಾರಿನಿಂದ ಇಳಿದು ಪ್ರೇಮಿಯೊಂದಿಗೆ ಪರಾರಿಯಾದ ಯುವತಿ ಶಿವಮೊಗ್ಗಕ್ಕೆ ಬರುವ ವೇಳೆ ತುಮ್ಮಿನಕಟ್ಟೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಬುಧವಾರ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಆಗಮಿಸಿ ರಕ್ಷಣೆ ಕೋರಿದ್ದು, ಪೊಲೀಸರು ಇಬ್ಬರ ಹೇಳಿಕೆ ಪಡೆದು ಯುವಕನ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಅಧಿಕಾರಿಗಳು ಲಂಚ ಕೇಳಿದ್ರೆ ಕೊಡಿ, ನಂತರ ಈ ಕೆಲಸ ಮಾಡಿ ಎಂದ ದೆಹಲಿ ಸಿಎಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts