More

    ಫೋನ್ ಕರೆ ಸ್ವೀಕರಿಸದ ಪ್ರೇಯಸಿ; ಸ್ಕ್ರೂ ಡ್ರೈವರ್‌ನಿಂದ ಚುಚ್ಚಿದ ಪ್ರಿಯಕರ!

    ಬೆಂಗಳೂರು: ಮೊಬೈಲ್ ಕರೆಗಳನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಪ್ರೇಯಸಿ ಮೇಲೆ ಕುಪಿತಗೊಂಡ ಪ್ರಿಯಕರ ಆಕೆಯ ಮುಖಕ್ಕೆ ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ ಗಾಯಗೊಳಿಸಿದ್ದಾನೆ.

    ಕಾಮಾಕ್ಷಿಪಾಳ್ಯದ ನಿವಾಸಿ 18 ವರ್ಷದ ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಮಂಜುನಾಥ್ ಎಂಬಾತನ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ದೂರುದಾರ ಯುವತಿ ಈ ಹಿಂದೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆರೋಪಿ ಮಂಜುನಾಥ್ ಈಕೆಯ ಸಹಪಾಠಿಯಾಗಿದ್ದ. ಇಬ್ಬರೂ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಟ್ರಿಲಿಯನ್ ಆಸೆ ತೋರಿಸಿ ವಂಚಿಸಿದ ಚೈನ್‌ಲಿಂಕ್ ಕಂಪನಿ ಮಾಲೀಕ ಸೆರೆ

    2020 ಆಗಸ್ಟ್‌ನಲ್ಲಿ ಮಂಜುನಾಥ್ ಯುವತಿಯನ್ನು ನಿರ್ಲಕ್ಷಿಸಿ, ಪ್ರೀತಿಸುವುದಿಲ್ಲ ಎಂದು ತಿಳಿಸಿದ್ದ. ಇದಾದ ಬಳಿಕ ಯುವತಿ ಆತನಿಗೆ ಕರೆ ಮಾಡುತ್ತಿರಲಿಲ್ಲ. ಕೆಲ ದಿನಗಳ ಹಿಂದೆ ಆರೋಪಿಯೇ ಯುವತಿಗೆ ಬೇರೆ ನಂಬರ್‌ನಿಂದ ಕರೆ ಮಾಡಿ ತೊಂದರೆ ಕೊಡಲು ಆರಂಭಿಸಿದ್ದ. ಕಳೆದ 15 ದಿನಗಳ ಹಿಂದೆ ಯುವತಿಯ ಮನೆಗೆ ಬಂದಿದ್ದ ಆರೋಪಿ ಆಕೆಗೆ ಹಲ್ಲೆ ನಡೆಸಿ ನನ್ನ ನಂಬರ್ ಬ್ಲಾಕ್ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದ.

    ಜ.9ರಂದು ಸಂಜೆ ಮತ್ತೆ ಯುವತಿಗೆ ಕರೆ ಮಾಡಿದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಯುವತಿಯ ಮನೆಗೆ ಬಂದು ‘ನನ್ನ ಕರೆಗಳನ್ನು ಏಕೆ ಸ್ವೀಕರಿಸುವುದಿಲ್ಲ’ ಎಂದು ನಿಂದಿಸಿ ಸ್ಕ್ರೂ ಡ್ರೈವರ್‌ನಿಂದ ಚುಚ್ಚಲು ಬಂದಾಗ ಯುವತಿ ಕೈ ಅಡ್ಡ ಹಿಡಿದಿದ್ದಳು. ಪರಿಣಾಮ ಕೈಗೆ ಗಾಯವಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಸ್ಕ್ರೂ ಡ್ರೈವರ್‌ನಿಂದ ಯುವತಿಯ ಮುಖಕ್ಕೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

    ಅವನು ಕುಡಿದು ಬಂದು ತೆಗಿ ಅಂತ ಒತ್ತಾಯಿಸ್ತಿದ್ದ, ಇವನು ಜೀವವನ್ನೇ ತೆಗೆದ; ಕೊಲೆಯಲ್ಲಿ ಅಂತ್ಯವಾಯ್ತು ಸಲಿಂಗ ಕಾಮ!

    ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್​; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts