More

    ಪ್ರವಾಸದ ವೇಳೆ ಲಗ್ಗೇಜ್ ಬ್ಯಾಗ್ ಕಳೆದು ಹೋಯ್ತೆಂದು ಈ ಮಹಿಳೆ ಮಾಡಿದ್ದೇನು ಗೊತ್ತಾ?

    ಸ್ಕಾಟ್ಲೆಂಡ್: ಅರ್ಮರ್ ಎಂಬ ಸ್ಕಾಟಿಷ್ ಮಹಿಳೆಯೊಬ್ಬಳು ತನ್ನ ಕುಟುಂಬದೊಂದಿಗೆ ಟರ್ಕಿ ದೇಶಕ್ಕೆ ಪ್ರವಾಸ ಹೋಗಿದ್ದಳು. ಈ ವೇಳೆ ಲಗ್ಗೇಜ್ ಇದ್ದ ಸೂಟ್​ಕೇಸ್ ಕಳುವಾಗಿದೆ. ಇದಿರಿಂದ ಧರಿಸಲು ತಂದಿದ್ದ ಬಟ್ಟೆ ಇಲ್ಲದಾಗಿ ಕೊನೆಗೆ ತನ್ನ ಮಕ್ಕಳ ಬಟ್ಟೆ ಧರಿಸುತ್ತಿದ್ದಳು ಎಂಬ ಸಂಗತಿಯೊಂದು ವರದಿಯಾಗಿದೆ. ಈ ಘಟನೆ ನಡೆದು 5 ತಿಂಗಳ ನಂತರ ಸೂಟ್​ಕೇಸ್ ಮರಳಿ ಮಹಿಳೆ ಲಭ್ಯವಾಗಿದೆ.

    ಕಳೆದ ಜುಲೈನಲ್ಲಿ 42 ವರ್ಷದ ಸ್ಕಾಟಿಷ್ ಮಹಿಳೆ ಅರ್ಮರ್ ದಲಮನ್‌ನಲ್ಲಿರುವ ಲಿಬರ್ಟಿ ಫ್ಯಾಬೇ ಎಂಬ ರೆಸಾರ್ಟ್‌ಗೆ ಎರಡು ವಾರಗಳ ಸುದೀರ್ಘ ಕುಟುಂಬ ಪ್ರವಾಸದ ಕೈಗೊಂಡಿದ್ದಳು. ಈ ಸಮಯದಲ್ಲಿ ಲಗೇಜ್ ಕಾಣೆಯಾಗಿದ್ದು, ಸೂಟ್​ಕೇಸ್​ನ್ನು ಮರಳಿ ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಆದರೆ ಎಷ್ಟೇ ಹುಡುಕಾಡಿದರೂ ಕಾಣೆಯಾದ ಲಗ್ಗೇಜ್ ಮಾತ್ರ ಲಭಿಸಿರಲಿಲ್ಲ. ಕೊನೆಗೆ ಹುಡುಕುವ ಭರವಸೆಯನ್ನೇ ಕಳೆದುಕೊಂಡೆ ಎಂದು ಮಹಿಳೆ ಹೇಳಿರುವುದು ವರದಿಯಾಗಿದೆ.

    ಅರ್ಮರ್ ತನ್ನ ಸೂಟ್‌ಕೇಸ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಏರ್​ಲೈನ್ ಪ್ರತಿನಿಧಿಯೊಬ್ಬರು ಸಹಾಯ ಮಾಡಿದ್ದಾರೆ. ಟ್ಯಾಕ್ಸಿ ಮೂಲಕ ಟರ್ಕಿ ದೇಶದಲ್ಲಿದ್ದ ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳು ಸಿಗುವಂತಹ ಮಾರುಕಟ್ಟೆಗೆ ಕರೆದುಕೊಂಡು ಹೋಗಿ ನೆರವಾಗಿದ್ದಾರೆ. ಆದರೆ ಇಲ್ಲಿ ಮಹಿಳೆ ಅರ್ಮರ್​​ಗೆ ಹೊಂದಿಕೆಯಾಗುವಂತಹ ಯಾವುದೇ ವಸ್ತುಗಳು ಅಲ್ಲಿರಲಿಲ್ಲ. ಹೀಗಾಗಿ ಕೊನೆಗೆ ತನ್ನಗಿಂತ ಸಣ್ಣ ಗಾತ್ರದ ಬಟ್ಟೆಗಳನ್ನು ಖರೀದಿಸಬೇಕಾಗಿ ಬಂತೆಂದು ಹೇಳಿಕೊಂಡಿದ್ದಾಳೆ.

    ಫೈವ್ ಸ್ಟಾರ್ ರೆಸಾರ್ಟ್‌ನಲ್ಲಿ ತಂಗಿದ್ದ ವೇಳೆ ಉಳಿದ ಮಹಿಳೆಯರು ಗುಣಮಟ್ಟದ ಉಡುಪುಗಳನ್ನು ಧರಿಸಿ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಲಗ್ಗೇಜ್ ಕಳೆದುಕೊಂಡ ಕಾರಣ ಮಾರುಕಟ್ಟೆಯಲ್ಲಿ ಖರೀದಿಸಿದ ಕಳಪೆ ಗುಣಮಟ್ಟದ ಬಟ್ಟೆ ಧರಿಸಬೇಕಾಗಿ ಬಂತು. ಇದರಿಂದ ನಾನು ತೀವ್ರ ಮುಜುಗರಕ್ಕೆ ಒಳಗಾದೆ. ಮಾರುಕಟ್ಟೆಯಲ್ಲಿ ಖರೀದಿಸಿದ್ದ ಬಿಕಿನಿ ಬಟ್ಟೆ ಸ್ವಿಮ್ಮಿಂಗ್​​ ಫೂಲ್​ನಲ್ಲಿದ್ದಾಗ ಹಾಳಾಗಿ ಹೋಯಿತು. ಇದೂ ಕೂಡ ಕಳಪೆ ಗುಣಮಟ್ಟದ್ದಾಗಿತ್ತು ಎಂದು ಸ್ಕಾಟಿಷ್ ಮಹಿಳೆ ಅರ್ಮರ್, ತನ್ನ ಪ್ರವಾಸದಲ್ಲಿ ಎದುರಾದ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts