More

    ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

    ಅಳವಂಡಿ: ಕ್ರೀಡೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕ್ರೀಡಾ ಪ್ರೇಮಿ ಚೌಡಪ್ಪ ಜಂತ್ಲಿ ತಿಳಿಸಿದರು.

    ಇದನ್ನೂ ಓದಿ: ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

    ಎಸ್‌ಎಸ್‌ಪಿಯು ಕಾಲೇಜ ಮೈದಾನದಲ್ಲಿ ನಡೆದ ಅಳವಂಡಿ ಪ್ರೀಮಿಯರ್ ಲೀಗ್‌ನಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಸೋಮವಾರ ಮಾತನಾಡಿದರು. ಪ್ರಥಮ ಸ್ಥಾನ ಎಸ್.ಎನ್.ಜೆ, ದ್ವಿತೀಯ ಸ್ಥಾನ ಡೆವಿಲ್ ಕಿಂಗ್ಸ , ತೃತೀಯ ಸ್ಥಾನ ಎಂಎಎಸ್‌ಎಚ್ ಈಗಲ್ಸ್ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

    ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಜತೆಗೆ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸುವದರಿಂದ ನಾಯಕತ್ವ ಗುಣ ಬೆಳೆಯಲಿದೆ ಹಾಗೂ ಆರೋಗ್ಯ ಕೂಡ ವೃದ್ದಿಯಾಗಲಿದೆ. ಉತ್ತಮ ಆರೋಗ್ಯ ಜೀವನದ ಯಶಸ್ಸಿನ ಅಡಿಪಾಯ, ಈ ಅಡಿಪಾಯ ಗಟ್ಟಿಯಾಗಿದ್ದರೆ ಮಾತ್ರ ಜೀವನ ಯಶಸ್ಸಿನತ್ತ ನಡೆಯಲು ಸಾದ್ಯ ಎಂದರು.

    ಪ್ರಮುಖರಾದ ಮಲ್ಲಪ್ಪ ಬೆಣಕಲ್, ತೋಟಯ್ಯ ಅರಳೆಲೆಮಠ, ಹನುಮಂತ ಜೋಗಿನ, ತಿಮ್ಮಣ್ಣ ಲಮಾರಿ, ರಮೇಶ ಜೋಳದ, ಬಸವರಾಜ ಜಂತ್ಲಿ, ಮೈಲಾರಪ್ಪ ಪುರದ, ಚನ್ನಪ್ಪ ಮುತ್ತಾಳ, ನೀಲಪ್ಪ ಹಕ್ಕಂಡಿ, ರವಿ ಭಜಂತ್ರಿ, ಜಗದೀಶ ಅರ್ಕಸಾಲಿ, ಅಶೋಕ ಹಳ್ಳಿಕೇರಿ,

    ಜಗದೀಶ ಜಂತ್ಲಿ, ಮಹಾಂತೇಶ ಪುರದ, ಸಂತೋಷ ಜಂತ್ಲಿ, ಕಿರಣ ಮೇಟಿ, ರವಿ ಕುಟಗನಹಳ್ಳಿ, ಮಂಜುನಾಥ ಹಾದಿಮನಿ, ಪ್ರಶಾಂತ ಜೋಳದ, ಸತೀಶ ಇಮ್ಮಡಿ, ದೇವಪ್ಪ ಬರದೂರ, ನಂದೀಶ ಬೆಟಗೇರಿ, ನಾಗರಾಜ ಕರಡಿ, ಶರಣಪ್ಪ ಭಂಗಿ, ಶರಣಪ್ಪ ಬಳ್ಳಾರಿ, ರಾಜು ಬುಕಿಟಗಾರ, ವಿರುಪಾಕ್ಷಿ ದೇಸಾಯಿಗೌಡ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts