More

    VIDEO: ಹೊಸ ವರ್ಷಕ್ಕೆ ಹಣ ಸುಡ್ತಾರೆ ಇವರು!

    ಟಿಬೆಟಿಯನ್ನರಿಗೆ ಫೆಬ್ರವರಿ ತಿಂಗಳು ಹೊಸ ವರ್ಷ. ಇದರ ಹೆಸರು ಲೋಸಾರ್. ಹೊಸ ವರ್ಷವನ್ನು ಭೂತಾರಾಧನೆ ಮೂಲಕ ಅವರು ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಭೂತವನ್ನು ಸಂತೃಪ್ತಗೊಳಿಸಲು ತಾವು ಬೆಳೆದ ದವಸಧಾನ್ಯ ಮತ್ತು ಹಣವನ್ನು ಭೂತಕ್ಕೆ ಅರ್ಪಿಸುತ್ತಾರಂತೆ!

    ಹಾಗೆಂದು ನಾವು ದೇವರಿಗೆ ನೈವೇದ್ಯ ಮಾಡಿ ಅದನ್ನು ನಾವೇ ಪುನಃ ಸ್ವೀಕರಿಸುವಂತೆ ಟಿಬೆಟಿಯನ್ನರು ಮಾಡುವುದಿಲ್ಲ. ಭೂತಕ್ಕೆ ಅರ್ಪಿಸುವುದು ಎಂದರೆ ಬೆಂಕಿಯಲ್ಲಿ ಅವುಗಳನ್ನು ಸುಟ್ಟು ಹಾಕುವುದು!

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಟಿಬೆಟಿಯನ್ ಕಾಲೋನಿ ಇದ್ದು ಅಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆಲೆಸಿರುವ ಟಿಬೆಟಿಯನ್ನರು ಕೂಡ ಈ ಸಂಪ್ರದಾಯವನ್ನು ಅನುಸರಿಸುತ್ತಾರೆ. ಹೊಸ ವರ್ಷದ ಆಚರಣೆ 15 ದಿನ ನಡೆಯುತ್ತದೆ. ಕೊನೆಯ ದಿನ ಈ ಭೂತಾರಾಧನೆ ನಡೆಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts