More

    5000 ರೂ.ಗೆ ಮುಂಬೈನಿಂದ ಲಾರಿಯಲ್ಲಿ ಕರೊನಾ ಸೋಂಕು ತಂದ ಚಾಲಕ; ಕೇಳಿದ್ದಕ್ಕೆ ‘ತೊಳೆದೆ’ ಎಂದ…ಆದ್ರೆ ಲಾರಿನಲ್ಲ !

    ಹಾವೇರಿ: ಒಂದು ಕಡೆ ಸರ್ಕಾರ ಕರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಿಡಿ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೂ ಸಂಚಾರ ಸಾಧ್ಯವಿಲ್ಲ.

    ಆದರೆ ಕೆಲವರು ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ. ಇದೀಗ ಹಾವೇರಿಯಲ್ಲಿ ಲಾರಿ ಡ್ರೈವರ್​ ಒಬ್ಬ ರಾತ್ರೋರಾತ್ರಿ ಕರೊನಾವನ್ನು ತನ್ನ ವಾಹನದಲ್ಲಿ ಹೊತ್ತುತಂದಿದ್ದಾನೆ.
    ಈ ಚಾಲಕ ಮುಂಬೈನಿಂದ ಹಾವೇರಿಗೆ ತನ್ನ ಲಾರಿಯಲ್ಲಿ ಬಂದಿದ್ದಾನೆ. ಹಾಗೆ ಬರುವವನು ಒಬ್ಬನೇ ಬಾರದೆ, ಮೂವರನ್ನು ಕರೆತಂದಿದ್ದಾನೆ. ಸವಣೂರಿನವರು ಎನ್ನಲಾದ ಮೂವರಲ್ಲಿ ಓರ್ವನಿಗೆ ಕರೊನಾ ದೃಢಪಟ್ಟಿದೆ. ಈಗ ಹಾವೇರಿ ಜಿಲ್ಲೆಗೆ ಆತಂಕ ಶುರುವಾಗಿದೆ.

    ಇದನ್ನೂ ಓದಿ: ವರ್ಷಾಂತ್ಯಕ್ಕೆ ಕರೊನಾ ಲಸಿಕೆ ತಯಾರಾಗುವುದು ಖಚಿತ

    ಲಾರಿ ಚಾಲಕನ ಬಳಿ, ಗ್ರಾಮವೊಂದರ ಉಪಾಧ್ಯಕ್ಷ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಎಲ್ಲೆಡೆ ವೈರಲ್​ ಆಗುತ್ತಿದೆ. ಅದರಲ್ಲಿ ಉಪಾಧ್ಯಕ್ಷ ಲಾರಿ ಚಾಲಕನ ಬಳಿ ನೀನು ಹೀಗೆ ಮಾಡಿದ್ದು ಸರೀನಾ? ಅವರನ್ಯಾಕೆ ಕರೆತರಬೇಕಿತ್ತು ಎಂದು ಪ್ರಶ್ನಿಸಿದ್ದಾರೆ?

    ಅದಕ್ಕೆ ಉತ್ತರಿಸಿದ ಡ್ರೈವರ್​, ಏನೂ ಆಗೋದಿಲ್ಲ, ನಾನೇನೂ ನನ್ನ ಪಕ್ಕ ಕೂರಿಸಿಕೊಂಡು ಬಂದಿಲ್ಲ. ಅವರೆಲ್ಲ ಡ್ರೈವರ್ ಸೀಟ್ ಮೇಲೆ ಇರುವ ಖಾಲಿ ಜಾಗದಲ್ಲಿ ಕುಳಿತಿದ್ದರು. ಯಾರೂ ಕೆಮ್ಮಲಿಲ್ಲ, ಸೀನಿಲ್ಲ ಎಂದು ಉತ್ತರಿಸಿದ್ದಾನೆ. ಅಷ್ಟೇ ಅಲ್ಲ, ಅವರಿಂದ 5 ಸಾವಿರ ರೂಪಾಯಿ ತೆಗೆದುಕೊಂಡಿದ್ದೇನೆ. ಅದನ್ನು ತೊಳೆದಿದ್ದೇನೆ ಎಂದೂ ಉಪಾಧ್ಯಕ್ಷನಿಗೆ ಉತ್ತರಿಸಿದ್ದನ್ನು ಆಡಿಯೋದಲ್ಲಿ ಕೇಳಬಹುದು.

    ಇದನ್ನೂ ಓದಿ: ‘ಅವರ ಹೊಟ್ಟೆಗೆ ಎಣ್ಣೆ ಇಳಿದಿತ್ತು..ಇವರು ಸುಮ್ಮನೆ ಹೋಗಿ ಸಿಕ್ಕಿಬಿದ್ರು…’; ಮಾಗಡಿ ಶಾಸಕನಿಗೆ ಕುಡುಕರ ಆವಾಜ್​…!

    ಹೀಗೆ ಮುಂಬೈನಿಂದ ಬಂದ 32ವರ್ಷದ ವ್ಯಕ್ತಿಯಲ್ಲಿ ನಿನ್ನೆ ಕರೊನಾ ಸೋಂಕು ಪತ್ತೆಯಾಗಿದೆ. ಆತನ ಟ್ರಾವೆಲ್​ ಹಿಸ್ಟರಿ ಗಮನಿಸಿದಾಗ ಈ ಎಲ್ಲ ವಿಚಾರಗಳೂ ಬೆಳಕಿಗೆ ಬಂದಿವೆ. ಹಾಗೇ ಆ ಗ್ರಾಮದ ಉಪಾಧ್ಯಕ್ಷ ಚಾಲಕನ ಬಳಿ ಫೋನ್​ನಲ್ಲಿ ಮಾತನಾಡಿದ್ದಾನೆ.

    ಚಾಲಕನನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ನೆಗೆಟಿವ್​ ಬಂದಿದೆ. (ದಿಗ್ವಿಜಯ ನ್ಯೂಸ್)

    ಚೀನಾ ಕೋವಿಡ್​ 19ರ ತೀವ್ರತೆಯನ್ನು ಬೇಕೆಂದೇ ಬಚ್ಚಿಟ್ಟಿತ್ತು: ಅಮೆರಿಕದ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts