More

    ಭಗವಾನ್ ಬುದ್ಧನ ಬೋಧನೆಗಳು ಕರೊನಾ ಸಾಂಕ್ರಮಿಕ ಕಾಲದಲ್ಲಿ ಹೆಚ್ಚು ಪ್ರಸ್ತುತ: ಪ್ರಧಾನಿ ಮೋದಿ

    ನವದೆಹಲಿ: ಭಗವಾನ್ ಬುದ್ಧನ ಬೋಧನೆಗಳು ಕರೊನಾ ವೈರಸ್​ ಸಾಂಕ್ರಮಿಕ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ ಎಂಬ ಸಂದೇಶದೊಂದಿಗೆ ಪ್ರಧಾನಿ ಮೋದಿ ದೇಶದ ಜನತೆಗೆ ಗುರು ಪೂರ್ಣಿಮೆಯ ಶುಭಕೋರಿದರು.

    ಆಷಾಢ ಪುರ್ಣಿಮಾ-ಧಮ್ಮ ಚಕ್ರ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬುದ್ಧನ ಬೋಧನೆ ಮತ್ತು ಮೌಲ್ಯಗಳ ಪ್ರಭಾವವನ್ನು ಉಲ್ಲೇಖಿಸಿದರು.

    ಇಂದು ಮಾನವೀಯತೆ ಕೋವಿಡ್​ನಿಂದ ಬಿಕ್ಕಟ್ಟು ಎದುರಿಸುತ್ತಿದೆ. ಇಂದಿನ ದಿನದಲ್ಲಿ ಭಗವಾನ್​ ಬುದ್ಧ ಹೆಚ್ಚು ಪ್ರಸ್ತುತರಾಗಿದ್ದಾರೆ. ಬುದ್ಧನ ದಾರಿಯಲ್ಲಿ ನಡೆದು ಅತ್ಯಂತ ದೊಡ್ಡ ಸವಾಲನ್ನು ಹೇಗೆ ಎದುರಿಸಿದೆವು ಎಂಬುದನ್ನು ಭಾರತ ತೋರಿದೆ. ಬುದ್ಧನ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶಗಳು ಪರಸ್ಪರ ಕೈಜೋಡಿಸಿ ಒಂದು ಶಕ್ತಿಯಾಗುತ್ತಿವೆ ಎಂದು ತಿಳಿಸಿದರು.

    ಹಿಂದು ಕ್ಯಾಲೆಂಡರ್​ನ ಆಷಾಢ ತಿಂಗಳಲ್ಲಿ ಬರುವ ಹುಣ್ಣಿಮೆಯ ದಿನವನ್ನು ಧಮ್ಮ ಚಕ್ರ ದಿನವನ್ನಾಗಿ ಗೌತಮ ಬುದ್ಧನು ತನ್ನ ಐದು ತಪಸ್ವಿ ಶಿಷ್ಯರಿಗೆ ನೀಡಿದ ಮೊದಲ ಧರ್ಮೋಪದೇಶದ ಸ್ಮರಣಾರ್ಥ ವಿಶ್ವದಾದ್ಯಂತ ಆಚರಿಸಲಾಗುತ್ತದೆ.

    ಸಾರನಾಥದಲ್ಲಿ, ಭಗವಾನ್ ಬುದ್ಧನು ಇಡೀ ಜೀವನದ ಮೂಲವನ್ನು ನಮಗೆ ತಿಳಿಸಿದ್ದಾರೆ. ದುಃಖ ಮತ್ತು ಅದರ ಕಾರಣಗಳ ಬಗ್ಗೆ ನಮಗೆ ವಿವರಿಸಿದ್ದಾರೆ. ದುಃಖಗಳ ವಿರುದ್ಧ ಗೆಲ್ಲಬಹುದೆಂದು ನಮಗೆ ಭರವಸೆ ನೀಡಿದರು. ದುಃಖ ವಿರುದ್ಧ ಗೆಲ್ಲುವ ಮಾರ್ಗವನ್ನು ಸಹ ಅವರು ನಮಗೆ ತಿಳಿಸಿದರು. ಉತ್ತಮ ಜೀವನಕ್ಕಾಗಿ ಅವರು ನಮಗೆ ಎಂಟು ಮಂತ್ರಗಳನ್ನು ನೀಡಿದ್ದಾರೆಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)

    ಅಂಕಲ್​ 5 ಕೊಲೆಯಾಗಿವೆ ಭಯವಾಗ್ತಿದೆ ಬೇಗ ಬನ್ನಿ ಎಂದು ಕರೆ ಮಾಡಿದ ಬಾಲಕಿ: ಸ್ಥಳಕ್ಕೆ ಹೋದ ಪೊಲೀಸರಿಗೆ ಶಾಕ್!​

    ಹಣ ದುಪ್ಪಟ್ಟು ಮಾಡೋದಾಗಿ ಜನರಿಂದ ಹಣ ಸಂಗ್ರಹ: ಹೆಲಿಕಾಪ್ಟರ್​ ಬ್ರದರ್ಸ್​ರಿಂದ 600 ಕೋಟಿ ರೂ. ವಂಚನೆ!

    ಉತ್ತರಪ್ರದೇಶ ಮೂಲದ ನಕಲಿ ಶಾಪಿಂಗ್ ವೆಬ್‌ಸೈಟ್ ವಂಚಕ ಬನಶಂಕರಿಯಲ್ಲಿದ್ದ, ಸೈಬರಾಬಾದ್ ಪೊಲೀಸರ ಕೈಗೆ ಸಿಕ್ಕಿಬಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts