More

    ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

    ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ.

    ಪಕ್ಷದ ಹಿತದೃಷ್ಟಿಯಿಂದ ಸಿಎಲ್ಪಿ, ಎಲ್ಓಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್ಪಿ ಹೆಚ್ಚಿನದಲ್ಲ, ಎಲ್ಓಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಅದು ಆಯಾಯ ನಾಯಕರ ಮನಸ್ಥಿತಿಯ ಮೇಲೆ ಹೋಗುತ್ತದೆ.

    ಪ್ರತ್ಯೇಕ ಮಾಡಿದರೆ ರಾಜೀನಾಮೆ ಕೊಡ್ತೀನಿ ಅನ್ನೋದು ಸಿದ್ದರಾಮಯ್ಯ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಸಿದ್ದರಾಮಯ್ಯ ಗೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರ ದಲ್ಲೂ ಮಾಡಿದ್ದಾರೆ, ಇಲ್ಲೂ ಮಾಡಿದರೆ ತಪ್ಪೇನಿಲ್ಲ… ಇದು ನನ್ನ ಅಭಿಪ್ರಾಯ.

    ಒಬ್ಬ ಅಧ್ಯಕ್ಷ ಇದ್ರೆ ಒಳ್ಳೆಯದು ನಾಲ್ಕು ಜನ ಕಾರ್ಯಾಧ್ಯಕ್ಷರು ಇದ್ದರೆ ಒಳ್ಳೆಯದಲ್ಲ. ನಮ್ಮ ಮನೆಯಲ್ಲಿ ಆದ ಸಭೆ ಬಗ್ಗೆ ಜನರಲ್ ಸೆಕ್ರೆಟರಿ ಅವರಿಗೆ ಮಾಹಿತಿ ನೀಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲ ಇರುವುದೊಂತು ನಿಜ.

    ಡಿಕೆ ಶಿವಕುಮಾರ್ ,ಎಂ ಬಿ ಪಾಟೀಲ್ ಅವರ ಹೆಸರುಗಳು ಮೀಡಿಯಾ ಗಳಲ್ಲಿ ಓಡಾಡುತ್ತಿದೆ. ಇದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ದಿನೇಶ್ ಗುಂಡೂರಾವ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗದೆ ತಟಸ್ಥವಾಗಿ ಇದ್ದಾರೆ. ಆದಷ್ಟು ಬೇಗ ಘೋಷಣೆ ಮಾಡಿದ್ರೆ ಒಳ್ಳೆಯದು. ದೆಹಲಿಗೆ ಕರೆದು ಅಭಿಪ್ರಾಯ ಕೇಳುತ್ತಾರೆ ಎಂದು ಕೊಂಡಿದೆ ಅದೂ ಆಗಲಿಲ್ಲ.

    ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ ಈ ದೃಷ್ಟಿಯಿಂದ ಒಳ್ಳೆಯದು. ನನ್ನ ದೃಷ್ಟಿಯಿಂದ ಒಂದು ಕೂಡ ವೈಸ್ ಪ್ರೆಸಿಡೆಂಡ್ ಮಾಡಬಾರದು.‌ ಗುಂಪುಗಾರಿಗೆ ಪ್ರಾರಂಭವಾಗುತ್ತದೆ ನಾನು ಹಿರಿಯ ನಾಯಕರ ಸಭೆ ಕರೆದಿದ್ದೆ. ಅದರಲ್ಲಿ ಕೂಡ ಬೇಗ ಘೋಷಣೆ ಮಾಡಿ ಎಂದು ನಾನು ಹೇಳಿದ್ದೆ. ಹಾಗಂತ ನಮ್ಮಲ್ಲೇನೂ ಗುಂಪಿಲ್ಲ, ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ ಅಂದ್ರೆ ನಾನು ಒಂದು ಗುಂಪಾ?? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts