More

    ಕರೊನಾ ಪತ್ತೆಗೆ ಬರಲಿವೆ ವೈದ್ಯಕೀಯ ಪತ್ತೇದಾರಿ ಶ್ವಾನಗಳು, ಅಪರಾಧಿಗಳಂತೆ ಸೋಂಕಿತರನ್ನು ಗುರುತಿಸಲಿವೆಯೇ ನಾಯಿಗಳು?

    ನವದೆಹಲಿ: ಕರೊನಾ ಚೀನಾದಲ್ಲಿ ತಾಂಡವವಾಡುತ್ತಿದ್ದಾಗ, ಅಂದರೆ ಜನವರಿ ಆರಂಭದಲ್ಲಿ ಜಾಗತಿಕವಾಗಿ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್​ ಸ್ಕ್ರೀನಿಂಗ್​ ನಡೆಸಲಾಗುತ್ತಿತ್ತು. ಅಂದರೆ, ಪ್ರಯಾಣಿಕರ ದೇಹದ ತಾಪಮಾನ ಪರಿಶೀಲನೆ ಮಾಡಿ ಅವರಿಗೆ ಜ್ವರವಿದ್ದಲ್ಲಿ, ತಪಾಸಣೆಗೆ ಗುರಿಪಡಿಸಲಾಗುತ್ತಿತ್ತು. ಆ ಮೂಲಕ ಅವರಲ್ಲಿ ಕರೊನಾ ಸೋಂಕು ವ್ಯಾಪಿಸಿದೆಯೇ ಎಂದು ತಿಳಿಯಲಾಗುತ್ತಿತ್ತು. ಒಂದು ವೇಳೆ ಇದೇ ಕೆಲಸವನ್ನು ನಾಯಿಗಳಿಗೆ ವಹಿಸಿದ್ದರೆ….

    ಇನ್ನೊಂದು ಲೆಕ್ಕಾಚಾರ…… ಪ್ರತಿದಿನ ಒಂದು ಲಕ್ಷ ವ್ಯಕ್ತಿಗಳನ್ನು ಕರೊನಾ ತಪಾಸಣೆಗೆ ಒಳಪಡಿಸಿದರೂ, ಭಾರತದ ಕಟ್ಟಕಡೆಯ ವ್ಯಕ್ತಿಯನ್ನು ತಪಾಸಣೆ ಮಾಡಲು 30ಕ್ಕೂ ಹೆಚ್ಚು ವರ್ಷಗಳು ಬೇಕಾಗುತ್ತವೆ…!

    ಕರೊನಾದಿಂದಾಗಿ ಪರಿಸ್ಥಿತಿ ಕೈಮೀರಿ ಹೋದರೆ, ಅದರ ತಪಾಸಣೆಗೆ ಅಥವಾ ಸೋಂಕಿತನನ್ನು ಪತ್ತೆ ಹಚ್ಚಲು ಶ್ವಾನಗಳನ್ನು ಬಳಸಿಕೊಳ್ಳಬಹುದು ಎನ್ನುವ ಸಾಧ್ಯತೆಗಳ ಬಗ್ಗೆ ಈಗ ಲಂಡನ್​ನಲ್ಲಿ ಸಂಶೋಧನೆಗಳು ಶುರುವಾಗಿವೆ.

    ಶ್ವಾನಗಳು ಕೇವಲ ಸ್ಫೋಟಕ ಅಥವಾ ಮಾದಕ ವಸ್ತುಗಳನ್ನು ಮಾತ್ರ ಪತ್ತೆ ಹಚ್ಚುವುದಲ್ಲ, ಇತರ ಹಲವು ಕಾರ್ಯಗಳಿಗೂ ಬಳಕೆಯಾಗುತ್ತವೆ. ಅಪರಾಧದ ಸ್ಥಳಗಳಲ್ಲಿ ಪತ್ತೆಯಾದ ರಕ್ತ, ದೇಹದ ತ್ಯಾಜ್ಯ, ಬೆವರಿನ ವಾಸನೆ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚಬಲ್ಲವು. ಅವುಗಳ ಆಘ್ರಾಣ ಶಕ್ತಿ ಅಷ್ಟು ಪ್ರಬಲವಾಗಿರುವುದರಿಂದಲೇ ಅವು ಅಪಾಯದ ಮುನ್ಸೂಚನೆ ನೀಡುತ್ತವೆ. ಜತೆಗೆ ಹಲವು ವೈದ್ಯಕೀಯ ಉದ್ದೇಶಗಳಿಗೂ ನಾಯಿಗಳನ್ನು ಬಳಸಲಾಗುತ್ತದೆ. ಇಂಥ ನಾಯಿಗಳನ್ನೇ ಕರೊನಾ ಪತ್ತೆಗೂ ಬಳಸಬಹುದು ಎನ್ನುತ್ತಾರೆ ಪಶುವೈದ್ಯಕೀಯ ತಜ್ಞ ಹಾಗೂ ಕೇಂದ್ರ ಗೃಹ ಸಚಿವಾಲಯ ಪತ್ತೇದಾರಿ ಶ್ವಾನ ದಳದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕರ್ನಲ್​ ಡಾ.ಪಿ.ಕೆ.ಛಗ್​.

    ಪತ್ತೇದಾರಿ ಶ್ವಾನಗಳ ಪೊಲೀಸ್​ ಕೆ9 ಘಟಕದ ಸಂದರ್ಶಕ ನಿರ್ದೇಶಕರಾಗಿದ್ದಾರೆ ಡಾ.ಪಿ.ಕೆ ಛಗ್​. ಸಾಮಾನ್ಯವಾಗಿ ವ್ಯಕ್ತಿಗಳಲ್ಲಿರುವ ಅನಾರೋಗ್ಯವನ್ನು ಪತ್ತೆ ಹಚ್ಚಲು ವೈದ್ಯಕೀಯ ಪತ್ತೇದಾರಿ ನಾಯಿಗಳನ್ನು ಬಳಸಲಾಗುತ್ತದೆ. ವಿದೇಶಗಳಲ್ಲಿ ಕ್ಯಾನ್ಸರ್​ ಸೇರಿ ಹಲವು ರೋಗಗಳ ಪತ್ತೆಯಲ್ಲಿ ಇವು ಬಳಕೆಯಾಗುತ್ತಿವೆ ಎಂದು ಅವರು ಮಾಹಿತಿ ನೀಡುತ್ತಾರೆ.

    ಹಾಗಿದ್ದರೆ, ಕರೊನಾ ಪತ್ತೆಗೆ ನಾಯಿಗಳನ್ನು ಬಳಸಬಹುದೇ? ಲಂಡನ್​ ಸ್ಕೂಲ್​ ಆಫ್​ ಹೈಜೀನ್​ ಆ್ಯಂಡ್​ ಟ್ರಾಪಿಕಲ್​ ಮೆಡಿಸಿನ್​ ಸಂಸ್ಥೆಯ ಪ್ರಾಧ್ಯಾಪಕ ಡಾ. ಜೇಮ್ಸ್​ ಲೋಗನ್​ ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. ಈ ಮೊದಲು “ಮೆಡಿಕಲ್​ ಡಿಟೆಕ್ಷನ್​ ಡಾಗ್ಸ್​” ಸಂಸ್ಥೆಯೊಂದಿಗೆ ಮಲೇರಿಯಾ ರೋಗಿಗಳನ್ನು ಪತ್ತೆಹಚ್ಚುವ ಕುರಿತಾದ ಸಂಶೋಧನೆ ನಡೆಸಿದ್ದರು.

    ಎಲ್ಲರನ್ನೂ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ಕರೊನಾ ಖಚಿತಪಡಿಸುವುದ ಸಾಧ್ಯವಿಲ್ಲದ ಕಾರಣ ನಾಯಿಗಳ ಬಳಕೆಯಿಂದ ಸಹಾಯವಾಗಲಿದೆ ಎಂಬುದು ಇವರ ವಾದ. ಆದರೆ, ಇದಿನ್ನೂ ಆರಂಭಿಕ ಹಂತದಲ್ಲಿದೆ. ಈ ಬಗ್ಗೆ ಲೋಗನ್​ ಮತ್ತವರ ತಂಡದ ಜತೆಗೆ ಮಾತುಕತೆ ನಡೆಸಿದ್ದೇವೆ. ಪ್ರಯೋಗಗಳು ಮುಂದುವರಿದಿದ್ದು, ಅದು ಖಚಿತಪಟ್ಟ ಬಳಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ ಎಂದು ಸಂಶೋಧನಾ ತಂಡ ತಿಳಿಸಿರುವುದಾಗಿ ಡಾ. ಛಗ್​ ವಿವರಿಸುತ್ತಾರೆ.

    ಈ ಸಂಶೋಧನಾ ತಂಡವು ಕರೊನಾ ರೋಗಿಗಳ ದೇಹದ ವಾಸನೆ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ರೋಗಿಗಳು ಧರಿಸಿದ್ದ ಮಾಸ್ಕ್​, ಬಟ್ಟೆ ಮೊದಲಾವುಗಳನ್ನು ಪರಿಶೀಲಿಸಿ ಅವನ್ನು ಸಾಮಾನ್ಯ ವ್ಯಕ್ತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಇವುಗಳಲ್ಲಿ ವ್ಯತ್ಯಾಸವಿದದರೆ ಶ್ವಾನಗಳು ಸುಲಭವಾಗಿ ಪತ್ತೆಹಚ್ಚಬಲ್ಲವು. ಜತೆಗೆ, ಶೇ.90ಕ್ಕೂ ಹೆಚ್ಚು ಫಲಿತಾಂಶ ದೊರೆತರೆ ಮಾತ್ರ ಇದನ್ನು ಪ್ರಯೋಗಕ್ಕಿಳಿಸಬಹುದು. ಜತೆಗೆ, ವೈದ್ಯಕೀಯ ಪರಿಣತರು ಇದಕ್ಕೆ ಒಪ್ಪಬೇಕು ಎನ್ನುತ್ತಾರೆ.

    ಅತ್ಯಂತ ಸೂಕ್ಷ್ಮ ವಾಸನೆಯನ್ನು ಪತ್ತೆಹಚ್ಚಬಲ್ಲ ಜಾತಿಯ ಶ್ವಾನಗಳನ್ನೇ ಇದಕ್ಕೆ ಬಳಸಲಾಗುತ್ತದೆ. ಅಂದರೆ, ಲ್ಯಾಬ್ರಡಾರ್​ ರಿಟ್ರೀವರ್ಸ್​, ಜರ್ಮನ್​ ಶೆಫರ್ಢ್ಸ, ಬೆಲ್ಜಿಯಂ ಶೆಫರ್ಢ್ಸ ಮೊದಲಾದ ತಳಿಯ ನಾಯಿಗಳನ್ನು ಬಳಸಬಹುದು ಎಂದು ಹೇಳುತ್ತಾರೆ ಡಾ. ಛಗ್​.
    ಇದು ಶೇ.100 ಭರವಸೆದಾಯಕ ಸಂಶೋಧನೆಯಾಗಿದೆ. ಸರ್ಕಾರ ಕೂಡ ಇದರ ಮೇಲೆ ನಂಬಿಕೆಯಿಟ್ಟು ಕೆ9 ಘಟಕ ರೂಪಿಸಿ ಅದರ ನಿರ್ವಹಣೆ ಜವಾಬ್ದಾರಿಯನ್ನು ನನಗೆ ವಹಿಸಿದೆ ಎಂದು ಹೇಳುತ್ತಾರೆ. ಡಾ.ಪಿ.ಕೆ. ಛಗ್​.

    ಬಿಟ್ಟೆನೆಂದರೂ ಬಿಡದ ಹೆಮ್ಮಾರಿ ಕರೊನಾ, 70 ದಿನಗಳಾದರೂ ದೇಹದಲ್ಲೇ ಠಿಕಾಣಿ, ಗುಣಮುಖರಾದವರಲ್ಲಿ ಪದೇಪದೆ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts