More

    ಲೋಳಸೂರ ಬಳಿ ಗ್ರಾಮಸ್ಥರ ಆಕ್ರೋಶ

    ಗೋಕಾಕ: ನೆರೆ ಹಾಗೂ ಅತಿವೃಷ್ಟಿಯಿಂದಾದ ಬೆಳೆಹಾನಿ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಅಧ್ಯಯನ ತಂಡಕ್ಕೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಲೋಳಸೂರ ಬಳಿ ಗ್ರಾಮಸ್ಥರು ಮಂಗಳವಾರ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರೊಂದಿಗೆ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿ, ರೈತರಿಂದ ಮಾಹಿತಿ ಕಲೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಅಧ್ಯಯನ ತಂಡದ ಅಧಿಕಾರಿಗಳ ಬಳಿ ರೈತರು ಎದುರಿಸುತ್ತಿರುವ ಸಮಸ್ಯೆ ಹೇಳಿಕೊಳ್ಳಲು ಯಾದವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ ಹಾಗೂ ಮುಖಂಡರು ಮುಂದಾದರು. ಆದರೆ, ಕೇಂದ್ರದ ಅಧಿಕಾರಿಗಳು ಮಾತನಾಡಲು ನಿರಾಕರಿಸಿ, ಕಾರಿನಲ್ಲಿ ಹೋಗಿ ಕುಳಿತರು.

    ಇದರಿಂದ ಸಿಟ್ಟಾದ ಸ್ಥಳದಲ್ಲಿದ್ದ ಮುಖಂಡರು, ಅಧಿಕಾರಿಗಳ ಕಾರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು. ಮನವೊಲಿಕೆಗೆ ಮುಂದಾದ ಜಿಲ್ಲಾಧಿಕಾರಿ ಹಿರೇಮಠ ಅವರನ್ನೂ ತರಾಟೆಗೆ ತೆಗೆದುಕೊಂಡರು.

    ಹಿಂದಿಯಲ್ಲೇ ಮಾತನಾಡ್ತೇವೆ: ಸಮಸ್ಯೆ ಹೇಳಿಕೊಳ್ಳಲು ನಮಗೆ ಅವಕಾಶ ಕೊಡಿ. ಅವರಿಗೆ ಕನ್ನಡ ತಿಳಿಯದಿದ್ದರೆ ಹಿಂದಿಯಲ್ಲೇ ಮಾತನಾಡುತ್ತೇವೆ. ಸಂತ್ರಸ್ತರ ಬವಣೆ ಏನೆಂಬುದು ಅವರಿಗೂ ತಿಳಿಯಲಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು. ‘ಎಲ್ಲ ವಿಷಯವನ್ನೂ ಕೇಂದ್ರ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಸೂಕ್ತ ಪರಿಹಾರ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ನೀಡಿದ ಭರವಸೆಯಿಂದಾಗಿ ೇರಾವ್ ಬಿಟ್ಟು, ಕಾರು ಮುಂದೆ ಹೋಗಲು ಅವಕಾಶ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts