More

    ಬಿಜೆಪಿ ಅಭ್ಯರ್ಥಿ ಲೋಕೇಶ ವಿ.ನಾಯಕ ನಾಮಪತ್ರ ತಿರಸ್ಕಾರಕ್ಕೆ ಆಗ್ರಹ

    ಹೊಸಪೇಟೆ: ಜಿಲ್ಲೆಯ ಕೂಡ್ಲಿಗಿ(ಎಸ್.ಟಿ. ಮೀಸಲು) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ.ನಾಯಕ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತ ವೇದಿಕೆ, ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದೆ.

    ಕಮ್ಮವಾರಿ ನಾಯುಡು ಜನಾಂಗ

    ವೇದಿಕೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾಗೆ ಗುರುವಾರ ಮನವಿ ಸಲ್ಲಿಸಿದರು. ಲೋಕೇಶ ವಿ.ನಾಯಕ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಕುಪ್ಪಂ ತಾಲೂಕಿನ ಮೋತಿಯಚಿ ಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಕಮ್ಮವಾರಿ ನಾಯುಡು ಜನಾಂಗದವರು. ಆದರೆ, ಅವರ ತಂದೆ ವೆಂಕಟಪತಿ, ತಾಯಿ ರೇಣಮ್ಮ ನಾಯುಡು ವಾಲ್ಮೀಕಿ ನಾಯಕ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ.

    ಇದನ್ನೂ ಓದಿ: 47 ನಾಮಪತ್ರ ತಿರಸ್ಕೃತ, 486 ಕ್ರಮಬದ್ಧ

    ಎಸ್ಟಿ ಜಾತಿ ಪ್ರಮಾಣ ಪತ್ರ ಆಧಾರದಲ್ಲಿ 2010ರಲ್ಲಿ ಬಿಬಿಎಂಪಿ ಸದಸ್ಯರಾಗಿದ್ದರು. ಈ ಮೂಲಕ ಸರ್ಕಾರಿ ಸೌಲಭ್ಯ ಮತ್ತು ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ತಕ್ಷಣವೇ ಗಮನ ಹರಿಸಿ, ಲೋಕೇಶ ನಾಯಕ ಅವರ ನಾಮ ಪತ್ರವನ್ನು ತಿರಸ್ಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸಂಘಟನೆಯ ಪ್ರಮುಖರಾದ ಬೆಳ್ಗೋಡ್ ಅಂಬಣ್ಣ, ತಾರಿಹಳ್ಳಿ ಶಿವಪ್ಪ, ಶ್ರೀನಿವಾಸ ಅಂಚಿನ ಗುಡಿ, ಹೊಸಗೇರಿ ವೆಂಕಟೇಶ್, ಹಿರೇಭೀಮಪ್ಪ, ದುರ್ಗೇಶ್ ಮೂರ್ತಿ, ಪ್ರಶಾಂತ್ ನಾಯಕ, ರಘು ನಾಯಕ, ಲತಾ, ಲಕ್ಷ್ಮೀ, ಕಂಪ್ಲಿ ಕಣಿಮಪ್ಪ, ಗುಜ್ಜಲ ಕರಿಹನುಮಪ್ಪ, ನಿಂಗಣ್ಣ ನಾಯಕ, ರುದ್ರಪ್ಪ ಹಾಗೂ ಲಕ್ಷ್ಮಣ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts