More

    ಹಸುವಿನ ಪೋಸ್ಟ್ ಮಾರ್ಟಂ ವರದಿ ನೀಡಲು ಲಂಚ ಕೇಳಿದ ಪಶುವೈದ್ಯ ಲೋಕಾಯುಕ್ತ ಬಲೆಗೆ!

    ಚಿತ್ರದುರ್ಗ: ಮೃತ‌ ಹಸುವಿನ ಮರಣೋತ್ತರ ಪರೀಕ್ಷೆ ವರದಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಶುವೈದ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಾ.ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಪಶು ವೈದ್ಯಾಧಿಕಾರಿ. ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

    ಇದನ್ನೂ ಓದಿ: 2 ವರ್ಷ ಕಳೆಯಲಿ, ಮತ್ತೆ 8 ವರ್ಷ ಡಿಕೆಶಿ ಸಿಎಂ; ಭವಿಷ್ಯ ನುಡಿದ ಜ್ಯೋತಿಷಿ!

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದರು. ಕಾಗಳಗೆರೆ ಗ್ರಾಮದ ಎಸ್.ಸ್ವಾಮಿ ಎಂಬುವರ ಬಳಿ ಹಸುವಿನ ಮರಣೋತ್ತರ ಪರೀಕ್ಷೆ ವರದಿ ನೀಡಲು 7 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಲಂಚ ಪಡೆಯುತ್ತಿದ್ದ ಪೇದೆ ಲೋಕಾ ಬಲೆಗೆ

    ಕಲಬುರಗಿ: ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯ ಪೇದೆ ಮುಕ್ಕಲಪ್ಪ ನಿಲಜೇರಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 13 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದು, 7000 ರೂ. ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಅರ್ಜಿ ತನಿಖೆಯಲ್ಲಿ ದೂರುದಾರರ ಹೆಸರು ಕೈ ಬಿಡಲು ಸಂಜನಾ ಬೀರಪ್ಪಾ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಲೋಕಾಯುಕ್ತ ಎಸ್​.ಪಿ ಎಆರ್ ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬಳಿಕ ಲಂಚ ಸ್ವಿಕರಿಸುತ್ತಿದ್ದ ಪೇದೆಯನ್ನು ವಶಕ್ಕೆ ಪಡಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts