More

    ವಶಪಡಿಸಿಕೊಂಡ ಬೈಕ್ ಬಿಡಲು 1 ಲಕ್ಷ ರೂ. ಕೇಳಿದ ಹೆಡ್ ಕಾನ್ಸ್ಟೇಬಲ್! ಮಧ್ಯವರ್ತಿ ಬಂಧನ

    ಬೆಂಗಳೂರು: ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸೈಯಾದ್ ಇಮ್ರಾನ್ ಬಂಧಿಸಲಾಗಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದ ಹೆಡ್ ಕಾನ್ಸ್‌ಟೆಬಲ್ ಶಕೀಲ್ ಅಹಮ್ಮದ್​ಗಾಗಿ ಶೋಧ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಹಮ್ಮದ್ ಫಿರೋಜ್ ಎನ್ನುವವರು ನೀಡಿದ ದೂರಿನನ್ವಯ ಟ್ರಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮಧ್ಯವರ್ತಿ ೫೦ ಸಾವಿರ ರೂ. ಹಣ ಪಡೆಯುವಾಗ ಸಾಕ್ಷಿ ಸಮೇತ ಬಂಧಿಸಿದ್ದಾರೆ. ಶಕೀಲ್ ಅಹಮ್ಮದ್ ೧ ಲಕ್ಷ ರೂ. ಬೇಡಿಕೆ ಇಟ್ಟು ಮಧ್ಯವರ್ತಿಯ ಮೂಲಕ ೫೦ ಸಾವಿರ ಹಣ ಪಡೆಯುತ್ತಿದ್ದ ಈ ವೇಳೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ೫೦ ಸಾವಿರ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಶಕೀಲ್ ಅಹಮದ್ ಗಾಗಿ ಶೋಧ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts