More

    ಲೋಕಕಲ್ಯಾಣಾರ್ಥ ಮಹಾ ಮೃತ್ಯುಂಜಯ ಜಪ

    ರಾಣೆಬೆನ್ನೂರ: ನಗರದ ಹೊರವಲಯದ ಶ್ರೀ ಶನೈಶ್ವರ ಮಂದಿರದಲ್ಲಿ ಲೋಕಕಲ್ಯಾಣಾರ್ಥ, ಪ್ರದೇಶಾಭಿವೃದ್ಧಿಗಾಗಿ 384 ದಿನಗಳವರೆಗೆ ಮಹಾಮೃತ್ಯುಂಜಯ ಜಪ, ಯಾಗ, ಶ್ರೀ ದುರ್ಗಾ ಜಪ, ಹವನ ಮತ್ತು ದೀಪದುರ್ಗಾ ನಮಸ್ಕಾರ ಪೂಜೆ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಲಿವೆ ಎಂದು ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಕಲ್ಯಾಣಾರ್ಥವಾಗಿ ಹಾಗೂ ಕರೊನಾ ದೂರ ಮಾಡುವ ಉದ್ದೇಶದಿಂದ ಧಾರ್ವಿುಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ. 11ರಿಂದ 2021ರ ಡಿಸೆಂಬರ್ 4ರವರೆಗೆ ಒಟ್ಟು 384 ದಿನ ಕಾರ್ಯಕ್ರಮ ನಡೆಯಲಿವೆ ಎಂದರು.

    ನ. 11ರಂದು ಬೆಳಗ್ಗೆ 4.30ಕ್ಕೆ ಉಜ್ಜಯಿನಿ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಕತೃ ಗದ್ದುಗೆಯಿಂದ ನಂದಾದೀಪ ತರುವುದು, ಕುದರಿಹಾಳ ಗ್ರಾಮದ ತುಂಗಭದ್ರಾ ನದಿಯಿಂದ ಗಂಗಾಪೂಜೆ ನೆರವೇರಿಸುವುದು ಹಾಗೂ ಅಲ್ಲಿಂದ ಪಾದಯಾತ್ರೆ ಮೂಲಕ ಶನೈಶ್ವರ ಮಂದಿರಕ್ಕೆ ಪೂರ್ಣಕುಂಭದೊಂದಿಗೆ ಆಗಮಿಸಿ ಸಂಪನ್ನಗೊಳ್ಳುವುದು. ಸಂಜೆ 5.30ರಿಂದ ಯಾಗ ಮಂಟಪ ಪ್ರವೇಶ, ಶ್ರೀ ಗಣಪತಿ, ಸ್ವಸ್ತಿಪುಣ್ಯಾಹ, ಪಂಚಗವ್ಯ ಪ್ರಾಶನ ಪೂಜೆ ಜರುಗಲಿವೆ ಎಂದರು.

    ನ. 12ರಂದು ಬೆಳಗ್ಗೆ ಮಹಾಮೃತ್ಯುಂಜಯ ಮತ್ತು ಶ್ರೀ ದುರ್ಗಾ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ 6ಕ್ಕೆ ಸಿದ್ಧಾಂತ ಶಿಖಾಮಣಿ ಪ್ರವಚನಕ್ಕೆ ಚಾಲನೆ ಹಾಗೂ 7.30ಕ್ಕೆ ನಂದಾದೀಪ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ. ನ. 13ರಂದು ಬೆಳಗ್ಗೆ ಮಹಾಮೃತ್ಯುಂಜಯ ಮಂತ್ರ, ದುರ್ಗಾ ಮಂತ್ರ, ನವಾರ್ಣ ಮಂತ್ರ, ಶನೈಶ್ಚರ ಮಂತ್ರ ಹಾಗೂ ಶಿವ ಪಂಚಾಕ್ಷರಿ ಮಂತ್ರಗಳ ಪಠಣ ಮಾಡಲಾಗುವುದು ಎಂದರು.

    ಏಷ್ಯಾ ಖಂಡದಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಹದಿನೈದು ದಿವಸ ಹಾಗೂ ಒಂದು ತಿಂಗಳವರೆಗೆ ಮಾತ್ರ ಮಾಡಲಾಗಿದೆ. ಆದರೆ, ನಾವು 384 ದಿನ ಮಾಡುತ್ತಿರುವುದು ವಿಶೇಷವಾಗಿದೆ. ಇಷ್ಟು ದಿನದಲ್ಲಿ 16 ಲಕ್ಷ ಮಹಾಮೃತ್ಯುಂಜಯ ಜಪ ಹಾಗೂ 4 ಲಕ್ಷ ಹೋಮ ನಡೆಯಲಿದೆ. 6 ಲಕ್ಷ ಶ್ರೀ ದುರ್ಗಾದೇವಿ ಜಪ, 9 ಲಕ್ಷ ನವಾರ್ಣ ಜಪ, 23 ಲಕ್ಷ ಶನೈಶ್ವರ ಜಪ ಹಾಗೂ ಒಂದು ಕೋಟಿ ಓಂ ಕಾರ ಜಪ ನಡೆಯಲಿದೆ. ಸಂಪೂರ್ಣ ಕಾರ್ಯಕ್ರಮ 2021 ಡಿಸೆಂಬರ್ 4ರಂದು ನಡೆಯುವ ಶನೈಶ್ವರನ ಲಕ್ಷ ದೀಪೋತ್ಸವದೊಂದಿಗೆ ಸಂಪನ್ನವಾಗಲಿವೆ ಎಂದರು.

    ಕರೊನಾ ಹಿನ್ನೆಲೆಯಲ್ಲಿ ಒಂದು ದಿನಕ್ಕೆ ನಾಲ್ಕು ಅಥವಾ ಐದು ಜನರಿಗೆ ಮಾತ್ರ ಹೋಮದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9980518689ಗೆ ಸಂರ್ಪಸುವಂತೆ ತಿಳಿಸಿದರು.

    ಪ್ರಮುಖರಾದ ಎಸ್.ಎಸ್. ರಾಮಲಿಂಗಣ್ಣನವರ, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ರವೀಂದ್ರಗೌಡ ಪಾಟೀಲ, ಚೋಳಪ್ಪ ಕಸವಾಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts