More

    ಲೋಕಸಭೆ ಚುನಾವಣೆ: 97 ಕೋಟಿ ಅರ್ಹ ಮತದಾರರು; 12 ರಾಜ್ಯಗಳಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ; 10.5 ಲಕ್ಷ ಮತಗಟ್ಟೆಗಳು

    ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 96.8 ಕೋಟಿ ನೋಂದಾಯಿತ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

    ಇತ್ತೀಚೆಗೆ 18 ವರ್ಷ ತುಂಬಿದ 1.8 ಕೋಟಿ ಭಾರತೀಯರು ಕೂಡ ಇದರಲ್ಲಿ ಸೇರಿದ್ದಾರೆ. ಇವರು ಮೊದಲ ಬಾರಿಗೆ ತಮ್ಮ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

    ಭಾರತದ 12 ರಾಜ್ಯಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ಮತದಾರರು ಇರುವುದು ವಿಶೇಷ.

    88.4 ಲಕ್ಷ ಮತದಾರರು ವಿಕಲಚೇತನರು ಮತ್ತು 48,000 ಟ್ರಾನ್ಸ್​ಜೆಂಡರ್ (ತೃತೀಯ ಲಿಂಗಿಗಳು) ಸಮುದಾಯದವರಾಗಿದ್ದಾರೆ.

    ಚುನಾವಣೆ ನಡೆಸಲು 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಮತಗಟ್ಟೆಗಳ ನಿರ್ವಹಣೆಗೆ 1.5 ಕೋಟಿ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಮತದಾನದಲ್ಲಿ 55 ಲಕ್ಷ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲಾಗುವುದು.

    ಭಾರತದ ಚುನಾವಣಾ ಆಯೋಗವು ಇದುವರೆಗೆ 17 ಸಾರ್ವತ್ರಿಕ ಚುನಾವಣೆಗಳು ಮತ್ತು 400 ವಿಧಾನಸಭಾ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದೆ.

    ಪ್ರಸ್ತುತ ಲೋಕಸಭೆಯ ಅಧಿಕಾರಾವಧಿ ಜೂನ್ 16 ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಹೊಸ ಸದನವನ್ನು ರಚಿಸಬೇಕಾಗಿದೆ. ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆಗಳ ಅಧಿಕಾರಾವಧಿಯೂ ಜೂನ್‌ನಲ್ಲಿ ಕೊನೆಗೊಳ್ಳಲಿದೆ.

     

    ಲೋಕಸಭೆ ಚುನಾವಣೆ: ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾವಾಗ ಮತದಾನ?

    ಕೇಂದ್ರ ಸರ್ಕಾರದಿಂದ ದೊಡ್ಡ ಘೋಷಣೆ: ಪೆಟ್ರೋಲ್, ಡೀಸೆಲ್ ಬೆಲೆ 15 ರೂಪಾಯಿ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts