More

    ಬಿಬಿಎಂಪಿ ಮತ್ತು ಇತರೆ ನಗರಗಳಲ್ಲಿ ಹೇಗಿರಲಿದೆ ಪ್ರಮಾಣಿತ ಲಾಕ್​ಡೌನ್ ಕಾರ್ಯತಂತ್ರ : ಘಟನಾ ಕಮಾಂಡರ್ ಪಾತ್ರವೇನು?

    ಬೆಂಗಳೂರು: ಕರೊನಾ ಸೋಂಕು ನಿವಾರಣೆಗಾಗಿ ದೇಶಾದ್ಯಂತ ಲಾಕ್​ಡೌನ್ 2 ಚಾಲ್ತಿಯಲ್ಲಿದೆ. ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರವೂ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು, ಆ ಕ್ರಮಗಳ ಅನುಷ್ಠಾನ ಸುಲಭಗೊಳಿಸುವ ಸಲುವಾಗಿ ಕೆಲವೊಂದು ವಿವರಣೆಗಳುಳ್ಳ ಸುತ್ತೋಲೆಯನ್ನು ಶುಕ್ರವಾರ ಪ್ರಕಟಿಸಿದೆ. ಇದರ ಪ್ರಕಾರ, ಬಿಬಿಎಂಪಿ ಮತ್ತು ಇತರೆ ನಗರಗಳಲ್ಲಿ ಪ್ರಮಾಣಿತ ಲಾಕ್​ಡೌನ್ ಕಾರ್ಯ ನಿರ್ವಹಣಾ ವಿಧಾನ ಹೇಗಿರಲಿದೆ ಎಂಬ ಅಂಶದತ್ತ ಬೆಳಕು ಚೆಲ್ಲಲಾಗಿದೆ.
    ನಗರಗಳ ಪ್ರದೇಶಗಳಲ್ಲಿ ಕಾರ್ಯವಿಧಾನವನ್ನು ಐದು ರೀತಿಯಲ್ಲಿ ವರ್ಗೀಕರಣ ಮಾಡಿಕೊಂಡಿದ್ದು, ಬಿಕ್ಕಟ್ಟು ನಿರ್ವಹಣಾ ತಂಡದ ಘಟಕ ನಿಯಂತ್ರಕ, ಸಂಪೂರ್ಣ ಸೀಲ್​ಡೌನ್​ನಲ್ಲಿ ಪೊಲೀಸರ ಪಾತ್ರ ಏನು?, ಆರೋಗ್ಯ ಇಲಾಖೆ ಅಧಿಕಾರಿಗಳ ಹೊಣೆಗಾರಿಕೆಗಳು ಏನೇನು? ಬಿಬಿಎಂಪಿ, ನಗರಸಭೆ ಅಧಿಕಾರಿಗಳ ಜವಾಬ್ದಾರಿ ಏನು, ಅಗತ್ಯವಸ್ತುಗಳ ಪೂರೈಕೆ ನಿರ್ವಹಣೆ ಹೇಗೆ ಮಾಡಬೇಕು ಎಂಬುದರ ವಿವರಣೆ ಇದೆ.

    ಬಿಕ್ಕಟ್ಟು ನಿರ್ವಹಣಾ ತಂಡದ ಘಟಕ ನಿಯಂತ್ರಕ: ಬಿಬಿಎಂಪಿ ಒಂದು ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಒಮ್ಮೆ ಘೋಷಣೆ ಮಾಡಿದ ಬಳಿಕ, ಪ್ರತಿಯೊಂದು ವಲಯಕ್ಕೂ ಒಬ್ಬ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್​ ಅಥವಾ ಒಂದನೇ ದರ್ಜೆ ಅಧಿಕಾರಿಗೆ ದಂಡಾಧಿಕಾರಿಯ ಅಧಿಕಾರಗಳನ್ನು ನೀಡಿ ಅವರನ್ನು ಘಟಕ ನಿಯಂತ್ರಕ (ಕಮಾಂಡರ್) ನನ್ನಾಗಿ ಆಯುಕ್ತರು ನೇಮಕ ಮಾಡಬೇಕು. ಈ ಕಮಾಂಡರ್ ಬಫರ್​ ವಲಯದ ಒಟ್ಟಾರೆ ನಿರ್ವಹಣೆಗೆ ಪೂರ್ಣ ಜವಾಬ್ದಾರನಾಗಿರುತ್ತಾನೆ. ಬಿಬಿಎಂಪಿ ಹೊರತುಪಡಿಸಿದ ಪ್ರದೇಶಗಳಲ್ಲಿ ಪ್ರತಿ ನಿಯಂತ್ರಿತ ವಲಯ, ಬಫರ್ ವಲಯಕ್ಕೆ ಜಿಲ್ಲಾಧಿಕಾರಿಯು ಘಟಕ ನಿಯಂತ್ರಕನನ್ನು ಮೇಲಿನ ಕ್ರಮದಂತೆ ನೇಮಕ ಮಾಡಬೇಕು. ನಿಯಂತ್ರಿತ ವಲಯಕ್ಕೆ ವಿನ್ಯಾಸಗೊಳಿಸಲಾದ ಎಸ್​ಒಪಿ ವಲಯದಲ್ಲಿಯೂ ಜಾರಿಯಲ್ಲಿರುತ್ತದೆ.

    ಬಿಬಿಎಂಪಿ ಪ್ರದೇಶದಲ್ಲಿನ ಘಟನಾ ಕಮಾಂಡರ್ ಬಿಬಿಎಂಪಿಯ ಹಿರಿಯ ಅಥವಾ ಕಿರಿಯ ಪ್ರಥಮ ದರ್ಜೆ ಅಧಿಕಾರಿ ಆಗಿರಬೇಕು. ಆತನನ್ನು ಈ ಉದ್ದೇಶಕ್ಕಾಗಿ ದಂಡಾಧಿಕಾರಿಯ ಅಧಿಕಾರವನ್ನು ನೀಡಿ ವಿಶೇಷವಾಗಿ ನೇಮಕ ಮಾಡಿರಬೇಕು. ಬಿಬಿಎಂಪಿಯೇತರ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಯು ಒಂದು ಅಥವಾ ಅದಕ್ಕಿಂತ ಹೆಚ್ಚಿನ ನಿಯಂತ್ರಿತ ವಲಯಕ್ಕೆ ತಾಲೂಕು/ಜಿಲ್ಲಾ ಮಟ್ಟದ ಅಧಿಕಾರಿಯನ್ನು ಘಟನಾ ಕಮಾಂಡರ್ ಆಗಿ ನೇಮಕ ಮಾಡಬಹುದು.
    ನಿಯಂತ್ರಿತ ವಲಯದ ನಿರ್ವಹಣೆಗೆ ಸಂಬಂಧಿಸಿ ಬಿಬಿಎಂಪಿ ಆಯುಕ್ತರು/ಆಯಾ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಗಡಿಗಳ ನಿಗದಿಯೂ ಸೇರಿ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುವ ಹೊಣೆಗಾರಿಕೆ ಘಟನಾ ಕಮಾಂಡರ್​ ಅವರದಾಗಿರುತ್ತದೆ. ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ದಿನನಿತ್ಯದ ನಿರ್ವಹಣೆ ಘಟನಾ ಕಮಾಂಡರ್​ನ ಹೊಣೆಗಾರಿಕೆಯಾಗಿರುತ್ತದೆ. ನಿಯಂತ್ರಿತ ವಲಯದ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಬೇಕು ಹಾಗೂ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್​ಗಳನ್ನು ಗುರುತಿಸಬೇಕು.

    ನಿಯಂತ್ರಿತ ವಲಯದ ಕಣ್ಣಳತೆ ದೂರದಲ್ಲಿ ಘಟನಾ ಕಮಾಂಡ್​ ಕೇಂದ್ರವನ್ನು ಸ್ಥಾಪಿಸಬೇಕು. ಘಟನಾ ಕಮಾಂಡರ್​ ಅಲ್ಲಿಂದಲೇ ಕಾರ್ಯನಿರ್ವಹಿಸಬೇಕು. ಘಟನಾ ಕಮಾಂಡರ್ ಕೇಂದ್ರ ಕೇಂದ್ರೀಕೃತ ನಿಯಂತ್ರಣ ಕೊಠಡಿ ಹೊಂದಿದ್ದು, ಅದಕ್ಕೆ ನಿಯೋಜಿಸಲ್ಪಟ್ಟಿರುವ ಪೊಲೀಸ್, ನಗರಸಭೆ ಮತ್ತು ಆರೋಗ್ಯ ಪ್ರಾಧಿಕಾರಗಳ ಪ್ರತಿನಿಧಿಗಳ ನೆರವಿನೊಂದಿಗೆ ಘಟನಾ ಕಮಾಂಡರ್ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ದಿನದ 24 ಗಂಟೆಯೂ ಕೆಲಸ ಮಾಡುವ ಈ ಕೇಂದ್ರದಲ್ಲಿ ಸಿಬ್ಬಂದಿಗೆ ಅಗತ್ಯ ಮೂಲಸೌಕರ್ಯ ಇರಬೇಕು. ಇದನ್ನು ಒದಗಿಸುವ ಹೊಣೆಗಾರಿಕೆ ಬಿಬಿಎಂಪಿ/ನಗರಸಭೆಗಳದ್ದು.
    ಕಂಟೇನ್​ಮೆಂಟ್​ ಝೋನ್​ನಲ್ಲಿ ನಿಯಂತ್ರಣ ನಿಯಮ ಜಾರಿಗೆ ತರುವುದಕ್ಕಾಗಿ ವಿಶೇಷ ತಂಡಗಳನ್ನು ರಚಿಸಬೇಕು. ಕಮಾಂಡರ್ ನಿಯಂತ್ರಿತ ವಲಯದಲ್ಲಿ ಲಾಕ್​ಡೌನ್ ಜಾರಿಗೊಳಿಸಲು ಸಂಚಾರಿ ತಂಡಗಳನ್ನು ಆಯಾ ವ್ಯಾಪ್ತಿಯಲ್ಲಿ ನಿಯೋಜಿಸಬೇಕು. ನಿಯಂತ್ರಿತ ವಲಯದಲ್ಲಿ ವಾಸಿಸುವ ಜನರ ವಿಶೇಷ ಅವಶ್ಯಕತೆಗಳನ್ನು (ಗರ್ಭಿಣಿ, ಹೃದ್ರೋಗಿಗಳು ಇತ್ಯಾದಿ) ಅಂದಾಜು ಮಾಡಿ ಅವರಿಗೆ ತುರ್ತು ಸಂದರ್ಭದಲ್ಲಿ ನೆರವು ಒದಗಿಸಬೇಕು. ಬಿಬಿಎಂಪಿ/ನಗರಸಭೆಗಳ ಆಯಾ ವಲಯದ ಚೀಫ್ ಆಫೀಸರ್​ ಘಟನಾ ಕಮಾಂಡರ್​ಗೆ ಕರ್ತವ್ಯ ನಿರ್ವಹಿಸಲು ನೆರವಾಗಬೇಕು.

    ಬದಲಾಗಿದೆ ಲಾಕ್​ಡೌನ್​ ಕ್ರಮ, COVID19 ನಿಯಂತ್ರಣ ಕಾರ್ಯತಂತ್ರ

    ಒಂದೇ ಒಂದು ಆ್ಯಪಲ್​ ನಿಂದಾಯಿತು ಭಾರಿ ಅನಾಹುತ!- ಡಿಎನ್​ಎ ಪರೀಕ್ಷೆ ಮಾಡಿ ಅದನ್ನು ಹಿಡಿದವರನ್ನು ಪತ್ತೆ ಹಚ್ಚಿದ ಪೊಲೀಸರು- ಮುಂದೇನಾಯಿತು?!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts