More

    ಮೂರ‌್ನಾಲ್ಕು ದಿನಗಳಲ್ಲಿ ಸಂಪೂರ್ಣ ಸಡಿಲವಾಗಲಿದೆ ಲಾಕ್‌ಡೌನ್

    ಬೆಂಗಳೂರು: ಮುಂದಿನ ಮೂರ‌್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಸಹ ಸಡಿಲವಾಗಲಿದೆ ಎಂಬ ಮುನ್ಸೂಚನೆಯನ್ನು ಸ್ವತಃ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೇ ನೀಡಿದ್ದಾರೆ.

    ಕರೊನಾ ಲಾಕ್‌ಡೌನ್‌ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಹುಟ್ಟೂರಿಗೆ ತೆರಳಲು ಮಾಡಿರುವ ಶ್ರಮಿಕ್ ರೈಲು ಸೇವೆಯನ್ನು ಪರಿಶೀಲಿಸಲು ಆಗಮಿಸಿದ್ದ ಸಂದರ್ಭದಲ್ಲಿ ಅವರು ಈ ಮುನ್ಸೂಚನೆ ನೀಡಿದರು.

    ಇದನ್ನೂ ಓದಿ 3 ವಾರಗಳಲ್ಲಿ 4446 ಕೋಟಿ ರೂ. ಪಾವತಿಸಲು ಕೋರ್ಟ್ ಆದೇಶ: ಯಾರಿಗೆ, ಏಕೆ?

    ಲಾಕ್‌ಡೌನ್ ವೇಳೆ ಪೊಲೀಸರು ಇಷ್ಟೆಲ್ಲ ವ್ಯವಸ್ಥಿತವಾಗಿ ಕೆಲಸ ಮಾಡದಿದ್ದರೆ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗುತ್ತಿತ್ತು. ಇದೇ ರೀತಿ ಮುಂದಿನ ಮೂರ‌್ನಾಲ್ಕು ದಿನಗಳ ಕಾಲ ವಲಸಿಗರು ತೆರಳಲಿದ್ದಾರೆ. ಅಷ್ಟರಲ್ಲಿ ಲಾಕ್‌ಡೌನ್ ಸಹ ಸಡಿಲವಾಗಲಿದೆ ಎಂದರು.

    ಅಲ್ಲಿಯವರೆಗೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕಾಗಿದೆ. ಮತ್ತೆ 1 ತಿಂಗಳು ಬಳಿಕ ಈಗ ಹೋಗಿರುವರು ವಾಪಸ್ ಬರಲಿದ್ದಾರೆ. ಆಗಲೂ ಅವರನ್ನು ಬರ ಮಾಡಿಕೊಳ್ಳಲು ಸಿದ್ದರಾಗಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿ, ಸಿಬ್ಬಂದಿಗೆ ಡಿಜಿಪಿ ಪ್ರವೀಣ್ ಸೂದ್ ಕಿವಿ ಮಾತು ಹೇಳಿದರು.

    ಇದನ್ನೂ ಓದಿ ಕ್ವಾರಂಟೈನ್​ನಲ್ಲಿ ಇದ್ದರೂ ನಿಲ್ಲದ ಕಾಮುಕರ ಅಟ್ಟಹಾಸ, ಮುಚ್ಚಿಹಾಕಲು ರಾಜಕೀಯ ಒತ್ತಡ

    ಕರ್ನಾಟಕದಲ್ಲಿ ಸಿಲುಕಿದ್ದ ವಿವಿಧ ರಾಜ್ಯಗಳ ವಲಸಿಗರು ತಮ್ಮ ಹುಟ್ಟೂರಿಗೆ ತೆರಳಲು ಶ್ರಮಿಕ್ ರೈಲು ಸೇವೆಯನ್ನು ಕಲ್ಪಿಸಲಾಗಿದೆ. 19 ದಿನಗಳಿಂದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಮಾಲೂರು, ಚಿಕ್ಕಬಾಣಾವರ, ಯಶವಂತಪುರ ಸೇರಿದಂತೆ ವಿವಿಧ ರೈಲು ನಿಲ್ದಾಣಗಳಿಂದ 100 ರೈಲು ಶ್ರಮಿಕ್ ರೈಲು ಪ್ರಯಾಣ ಬೆಳೆಸಿದ್ದು, ಒಂದೂವರೆ ಲಕ್ಷ ವಲಸಿಗರು ತೆರಳಿದ್ದಾರೆ.

    ಕೇರಳದಲ್ಲಿ ಮತ್ತೊಂದು ಸೆಕ್ಸ್ ಹಗರಣ: ಮಹಿಳೆ ಜತೆ ಸಿಕ್ಕಿಬಿದ್ದ ಫಾದರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts