More

    ಲಾಕ್​ಡೌನ್​ ಕಾಲ ಕಳೆಯಲು ರಸಪ್ರಶ್ನೆ ಹಾಗೂ ಹಾಸ್ಯದ ಮೊರೆ ಹೋದ ಪ್ಯಾರಿಸ್​ ನಗರದ ಅಪಾರ್ಟ್​ಮೆಂಟ್​ ನಿವಾಸಿಗಳು

    ಪ್ಯಾರಿಸ್​: ಟೋಪಿಯನ್ನು ಯಾವ ರಾಷ್ಟ್ರ ತನ್ನ ಚಿಹ್ಹೆಯಾಗಿ ಹೊಂದಿದೆ. ಧ್ವಜದ ಹಿನ್ನೆಲೆ ಬಣ್ಣ ನೀಲಿಯಾಗಿದ್ದು, ಹಳದಿ ಬಣ್ಣದ ಶಿಲುಬೆಯನ್ನು ಹೊಂದಿರುವ ರಾಷ್ಟ್ರ ಯಾವುದು ಎಂದು ಪ್ಯಾರಿಸ್​ನ ಅಪಾರ್ಟ್​ಮೆಂಟ್​ನ 5ನೇ ಮಹಡಿಯಲ್ಲಿರುವ ಕೊಠಡಿಯ ಕಿಟಕಿಯಿಂದ ಓರ್ವ ಹೇಳುತ್ತಾನೆ.

    ಇದಕ್ಕೆ ಪಕ್ಕದ ಅಪಾರ್ಟ್​ಮೆಂಟ್​ನಿಂದ ಸ್ವೀಡನ್​ ಎಂಬ ಉತ್ತರ ಬರುತ್ತದೆ. ಉತ್ತರದ ನಂತರ ಇಡೀ ಅಪಾರ್ಟ್​ಮೆಂಟ್​ನಿಂದ ಚಪ್ಪಾಳೆ ಶಬ್ಧ ಹೊರ ಬರುತ್ತದೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಪ್ಯಾರಿಸ್​ ನಗರದ 11ನೇ ಜಿಲ್ಲೆಯ ರೂ ಸೇಂಟ್ ಬರ್ನಾರ್ಡ್‌ನ ಅಪಾರ್ಟ್​ಮೆಂಟ್​ ನಿವಾಸಿಗಳು ಈ ರೀತಿ ರಸಪ್ರಶ್ನೆಗಳ ಮೂಲಕ ಕಾಲ ಕಳೆಯುತ್ತಿದ್ದಾರೆ.

    ರಸಪ್ರಶ್ನೆಯಲ್ಲಿ ಗೆದ್ದವರಿಗೆ ಮನೆಯಲ್ಲಿ ದೊರೆಯುವ ಸಣ್ಣಪುಟ್ಟ ವಸ್ತುಗಳನ್ನೇ ಬಹುಮಾನವಾಗಿ ನೀಡಲಾಗುತ್ತಿದೆ.
    ಅಪಾರ್ಟ್​ಮೆಂಟ್​ ನಿವಾಸಿಗಳು ರಸ ಪ್ರಶ್ನೆ ಸೇರಿದಂತೆ ವಿವಿಧ ಮನೋರಂಜನೆ ಕ್ರೀಡೆಗಳಲ್ಲಿ ಭಾಗಿಯಾಗಿರುವುದನ್ನು ಹಾಸ್ಯನಟ ಕಾರ್ಟೊಜೊ ಸಾಮಾಜಿಕ ತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಈ ವಿಡಿಯೋ ತುಣುಕು ಅಲ್ಪ ಸಮಯದಲ್ಲೇ 1.1. ಮಿಲಿಯನ್​ ಮಂದಿ ವೀಕ್ಷಣೆ ಮಾಡಿದ್ದಾರೆ.

    ಲಾಕ್​ಡೌನ್​ನಿಂದ ಜನರು ಭೀತಿಗೆ ಒಳಗಾಗಿದ್ದಾರೆ ಎಂದು ಅನಿಸಿತು. ಇದನ್ನು ನಿವಾರಿಸಲು ನಾನು ಯತ್ನಿಸಿದೆ. ಇದಕ್ಕಾಗಿ ಅಪಾರ್ಟ್​ಮೆಂಟ್​ನ ಬಾಲ್ಕನಿಗೆ ಬಂದು ರಸ ಪ್ರಶ್ನೆ ಆರಂಭಿಸಿದೆ. ಅಲ್ಲದೆ ಜನರನ್ನು ನಗಿಸಲು ಯತ್ನಿಸಿದೆ. ಇದರಿಂದ ಅವರಲ್ಲಿ ಭೀತಿ ಮರೆಯಾಗಿ ನಗುಮೂಡಿತು. ಪ್ರತಿ ದಿನ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ ಎಂದು ಹಾಸ್ಯ ನಟ ಕಾರ್ಟೊಜೊ ಹೇಳಿದರು. (ಏಜೆನ್ಸೀಸ್​)

    ಸರ್ಕಾರದ ಪರಿಹಾರ ಸಾಮಗ್ರಿಗೆ ಫೋಟೋ ಅಂಟಿಸಿಕೊಂಡಿರುವ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಮಾಜಿ ಸಿಎಂ ಎಚ್​ಡಿಕೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts