More

    ಲಾಕ್‌ಡೌನ್ ಆದೇಶಕ್ಕೆ ಬೆಲೆ ನೀಡದ ಜನ

    ತೆಲಸಂಗ: ಇಲ್ಲಿ ಯಾರು ಹೇಗೆ ಬೇಕಾದರೂ ಬೇಕಾಬಿಟ್ಟಿಯಾಗಿ ಓಡಾಡಬಹುದು. ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದಂತೂ ಈ ಗ್ರಾಮದ ಜನರಿಗೆ ಅನ್ವಯವಾಗುವುದೇ ಇಲ್ಲ. ಹೀಗಾಗಿ, ಲಾಕ್‌ಡೌನ್ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ನಿತ್ಯ ಬೆಳಗ್ಗೆ ಗ್ರಾಮದ ರಸ್ತೆಗಳೆಲ್ಲ ಸಂತೆಯಂತೆ ಕಂಡು ಬರುತ್ತವೆ. ಪೊಲೀಸರು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಓಡಿ ಹೋಗಿ ಅವಿತುಕೊಳ್ಳುವ ಜನ ಬೆಳಗ್ಗೆ ಮತ್ತು ಸಂಜೆ ಅಲ್ಲಲ್ಲಿ ಕಟ್ಟೆಗಳ ಮೇಲೆ ಮೊಬೈಲ್ ಹಿಡಿದು ಗುಂಪುಗುಂಪಾಗಿ ಕುಳಿತುಕೊಳ್ಳುತ್ತಿದ್ದಾರೆ. ಶುಕ್ರವಾರ ಬೆಳಗಿನ 5.30ರಿಂದ ಗ್ರಾಮದ ಪಿಕೆಪಿಎಸ್ ನ್ಯಾಯಬೆಲೆ ಅಂಗಡಿ ಮುಂದೆ ಪಡಿತರ ಪಡೆಯಲು ಜಮಾಯಿಸಿದ್ದ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ನೂಕುನುಗ್ಗಲು ಮಾಡುತ್ತಿದ್ದ ಜನರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪಿಡಿಒ ಸೇರಿ ಹಲವರು ಕೈ ಮುಗಿದು ಹೇಳಿದರೂ ಜನ ಕೇಳುವ ಸ್ಥಿಯಲ್ಲಿರಲಿಲ್ಲ. ಮಹಿಳೆಯರು ಮುಖಕ್ಕೆ ಮಾಸ್ಕ್ ಕೂಡಾ ಹಾಕಿರಲಿಲ್ಲ. ಬೆಳಗ್ಗೆ 9 ಗಂಟೆಯ ನಂತರ ಪೊಲೀಸ್ ಪೇದೆಯೊಬ್ಬರು ಬಂದ ಬಳಿಕ ನೂಕುನುಗ್ಗಲು ಸ್ವಲ್ಪ ಕಡಿಮೆಯಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts