More

    ಲಾಕ್​ಡೌನ್​ಗೆ ಮಾತ್ರ ಸೀಮಿತವಲ್ಲ…

    ಬೆಂಗಳೂರು: ಕಳೆದ ಒಂದೂವರೆ ತಿಂಗಳುಗಳಿಂದ ಬೇಬ್​ನೋಸ್ ಡಾಟ್​ಕಾಮ್ ಎಂಬ ಬ್ಲಾಗಿಂಗ್ ಸೈಟ್​ನಲ್ಲಿ ನಿರಂತರವಾಗಿ ತಮ್ಮ ಅನುಭವನ್ನು ಹರಿಪ್ರಿಯಾ ಹಂಚಿಕೊಳ್ಳುತ್ತಿರುವುದು ಗೊತ್ತೇ ಇದೆ. ನಾಳೆ ಚಿತ್ರೀಕರಣ ಪ್ರಾರಂಭವಾದ ಮೇಲೆ ಹರಿಪ್ರಿಯಾ ಬರೆಯುತ್ತಾರೋ ಇಲ್ಲವೋ ಎಂಬ ಸಂಶಯ ಇದ್ದರೆ, ಆ ಸಂಶಯ ಬಿಟ್ಟುಬಿಡಿ. ಲಾಕ್​ಡೌನ್ ತೆರವಾಗಿ, ಚಿತ್ರೀಕರಣ ಪ್ರಾರಂಭವಾದ ಮೇಲೂ ಬರೆಯುವುದನ್ನು ಮುಂದುವರೆಸುತ್ತಾರಂತೆ.

    ಈ ಕುರಿತು ವಿಜಯವಾಣಿ ಜೊತೆಗೆ ಮಾತನಾಡಿರುವ ಅವರು, ‘ಈ ಕೆಲಸವನ್ನು ಒಂದು ವರ್ಷದ ಹಿಂದೆಯೇ ಮಾಡಬೇಕಿತ್ತು. ಆದರೆ, ಬ್ಯುಸಿ ಇದ್ದುದರಿಂದ ಆಗಿರಲಿಲ್ಲ. ಲಾಕ್​ಡೌನ್ ಸಮಯದಲ್ಲಿ ತುಂಬಾ ಹೆಲ್ಪ್ ಆಯಿತು. ಲಾಕ್​ಡೌನ್ ನನ್ನನ್ನು ಕಟ್ಟಿ ಹಾಕಿದೆ ಅಂತ ಯಾವತ್ತೂ ಅನಿಸಲಿಲ್ಲ. ಬರೆಯುವುದರಲ್ಲಿ ಕಳೆದು ಹೋಗಿದ್ದೇನೆ. ಕೆಲವೊಮ್ಮೆ ದಿನಕ್ಕೆ ಎರಡು ಲೇಖನ ಬರೆದಿದ್ದೂ ಇದೆ. ಅಷ್ಟರ ಮಟ್ಟಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಅದು ನಿರಂತವಾಗಿ ಮುಂದುವರೆಯುತ್ತದೆ’ ಎನ್ನುತ್ತಾರೆ ಹರಿಪ್ರಿಯಾ.

    ಇದನ್ನೂ ಓದಿ  ರೈತರಿಗೆ, ಕಾರ್ಮಿಕರಿಗೆ ಬಂಪರ್​ ಗಿಫ್ಟ್: ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್

    ತಾವು ನೋಡಿದ್ದು, ಕೇಳಿದ್ದು, ಅರ್ಥ ಮಾಡಿಕೊಂಡಿದ್ದು ಎಲ್ಲವನ್ನೂ ದಾಖಲಿಸುತ್ತಾ ಬಂದಿರುವ ಹರಿಪ್ರಿಯಾ, ‘ನನ್ನ ಈ ಮುಖ ಎಷ್ಟೊಂದು ಜನರಿಗೆ ಗೊತ್ತಿರಲಿಲ್ಲ. ನನಗೆ ಇಂಥದ್ದೊಂದು ಆಸಕ್ತಿ ಇರಬಹುದು ಅಂತ ಸಹ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ನಾನು ಬರೆಯುತ್ತಿದ್ದೇನೆ ಎಂದಾಗ, ಚಿತ್ರರಂಗದಲ್ಲಿ ಹಲವರಿಗೆ ಆಶ್ಚರ್ಯವಾಯಿತು. ಲೇಖನಗಳನ್ನು ಓದಿದ ನಂತರ, ಬಹಳಷ್ಟು ಜನ ಒಳ್ಳೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನಿಜ ಹೇಳಬೇಕೆಂದರೆ, ಕೆಲವು ವರ್ಷಗಳ ಹಿಂದೆ, ನನಗ್ನಿಸಿದ್ದನ್ನೆಲ್ಲಾ ಫೋನ್​ನಲ್ಲಿ ಬರೆದುಕೊಳ್ಳುತ್ತಾ ಹೋದೆ. ಶೂಟಿಂಗ್​ನಲ್ಲಿ ಬಿಡುವಿದ್ದಾಗ ನೋಟ್ಸ್ ಮಾಡಿಕೊಳ್ಳುತ್ತಾ ಇದ್ದೆ. ಅದೀಗ ಸಹಾಯಕ್ಕೆ ಬಂದಿದೆ. ನನಗೆ ಇಂಗ್ಲೀಷ್, ಕನ್ನಡ ಎರಡರಲ್ಲೂ ಹಿಡಿತ ಇರುವುದರಿಂದ, ಎರಡೂ ಭಾಷೆಗಳಲ್ಲಿ ಬರೆಯುತ್ತಿದ್ದೇನೆ’ ಎನ್ನುತ್ತಾರೆ ಅವರು. ಇನ್ನು ಮುಂದಿನ ದಿನಗಳಲ್ಲಿ ಸಾಹಿತ್ಯ ರಚನೆಯಲ್ಲೂ ತೊಡಗಿಸಿಕೊಳ್ಳುತ್ತಾರಾ? ‘ನನಗೆ ಗೊತ್ತಿರುವ ಕೆಲಸಗಳನ್ನು ಮಾತ್ರ ಮಾಡುತ್ತೇನೆ. ನಾನು ಪ್ರೊಫೆಶನಲ್ ರೈಟರ್ ಅಲ್ಲ. ಪ್ಯಾಶನ್​ನಿಂದ ಬರೆಯುತ್ತಾ ಹೋದೆ. ಸದ್ಯಕ್ಕೆ ಅಂತಹ ಯೋಚನೆ ಇಲ್ಲ. ಮುಂದಿನ ದಿನಗಳ ಬಗ್ಗೆ ಈಗಲೇ ಹೇಳುವುದು ಕಷ್ಟ’ ಎನ್ನುತ್ತಾರೆ ಹರಿಪ್ರಿಯಾ.

    ಐದೇ ನಿಮಿಷದಲ್ಲಿ ಕರೊನಾ ಪರೀಕ್ಷೆ, ಒಂದೇ ಬಾರಿಗೆ 8 ಮಾದರಿ ಟೆಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts