More

    ‘ಲಾಕ್​ಡೌನ್​ ಫೇಲ್​…ಮುಂದೇನು? ಏನಾಯಿತು ಮೋದಿಯವರ ನಿರೀಕ್ಷೆ?’: ರಾಹುಲ್​ ಗಾಂಧಿ

    ನವದೆಹಲಿ: ಕರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮೊದಲಿನಿಂದಲೂ ವ್ಯಂಗ್ಯವಾಡುತ್ತ, ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಅವರು ಈಗ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ದೇಶವನ್ನು ವ್ಯಾಪಕವಾಗಿ ಸುತ್ತಿಕೊಳ್ಳುತ್ತಿರುವ ಕರೊನಾ ವೈರಸ್​ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರದ ಯೋಜನೆ ಏನು? ಈಗ ಲಾಕ್​ಡೌನ್​ ನಾಲ್ಕು ಹಂತಗಳು ಮುಗಿದರೂ ಕೊವಿಡ್​-19 ಸೋಂಕು ಹರಡುವ ಪ್ರಮಾಣ ಇಳಿಮುಖವಾಗಿಲ್ಲ. ಲಾಕ್​ಡೌನ್​ನಿಂದ ದೇಶದಲ್ಲಿ ಕರೊನಾ ನಿಯಂತ್ರಣ ನಿಶ್ಚಿತವಾಗಿ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿಯವರು ನಿರೀಕ್ಷೆ ಮಾಡಿದ್ದರು..ಆದರೆ ಈಗೇನಾಯಿತು ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.
    ಅಷ್ಟೇ ಅಲ್ಲ, ಕರೊನಾ ವೈರಸ್​ ಪ್ರಸರಣ ಹೆಚ್ಚಾದ ಸಮಯದಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಿದ ಏಕೈಕ ದೇಶವೆಂದರೆ ಅದು ಭಾರತ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ಮಾಲ್‌ಗಳೂ ಓಪನ್ ಆಗ್ತಾವಾ? ಸಿಎಂ ಏನು ಹೇಳಿದರು?

    ಎರಡು ತಿಂಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಲಾಕ್​ಡೌನ್​ ಘೋಷಣೆ ಮಾಡಿದರು. ಇನ್ನು 21 ದಿನಗಳಲ್ಲಿ ಕರೊನಾ ವೈರಸ್​ ವಿರುದ್ಧ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂದು ಆಗವರು ಹೇಳಿದ್ದರು. ಆದರೆ 60ಕ್ಕೂ ಹೆಚ್ಚು ದಿನಗಳಾದವು. ಏನಾಯಿತು? ಕೊವಿಡ್​-19 ರೋಗಿಗಳ ಸಂಖ್ಯೆ ಹೆಚ್ಚಾಯಿತು ಬಿಟ್ಟರೆ ಬೇರೇನೂ ಫಲಿತಾಂಶ ಸಿಗಲಿಲ್ಲ. ಅಂದಮೇಲೆ ವೈರಸ್​ ನಿಯಂತ್ರಣ ಲಾಕ್​ಡೌನ್​ನಿಂದ ಸಾಧ್ಯವಿಲ್ಲ ಎಂದಾಯಿತು. ಹಾಗಾದರೆ ಮುಂದೇನು? ನಾನು ಈ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೇನೆ ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಭಾರತದಲ್ಲಿ ಕರೊನಾ ನಿಯಂತ್ರಣದೊಂದಿಗೆ ಆರ್ಥಿಕತೆ ಉತ್ತೇಜನ ಮಾಡಲು ಕೇಂದ್ರ ಸರ್ಕಾರದ ಕಾರ್ಯತಂತ್ರ ಏನು? ಈ ರೋಗ ಬಾರದಂತೆ ತಡೆಗಟ್ಟಲು ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದೆ ಕೈಗೊಳ್ಳಲಿದ್ದಾರೆ? ರಾಜ್ಯ ಸರ್ಕಾರಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೇಗೆ ಸಹಾಯ ಮಾಡಲಿದ್ದಾರೆ ಎಂದು ಕೂಡಲೇ ಕೇಂದ್ರ ಸರ್ಕಾರ ಹೇಳಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ 24ಗಂಟೆಯಲ್ಲಿ 101 ಹೊಸ ಕೊವಿಡ್​-19 ಕೇಸ್​ಗಳು; ಯಾವ ಜಿಲ್ಲೆಗಳಲ್ಲಿ ಎಷ್ಟು?

    ಮಾರ್ಚ್​​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಲಾಕ್​ಡೌನ್​ ಘೋಷಣೆ ಮಾಡುವ ಸಂದರ್ಭದಲ್ಲಿ ಕರೊನಾ ಸೋಂಕಿತರ ಸಂಖ್ಯೆ 496 ಇತ್ತು. ಅದೀಗ 1.4 ಲಕ್ಷಕ್ಕೇರಿದೆ. ಹಾಗೇ ಮೃತರ ಸಂಖ್ಯೆ 4000ದ ಗಡಿ ದಾಟಿದೆ. (ಏಜೆನ್ಸೀಸ್​)

    ‘ನಿರ್ಮಲಾ ಸೀತಾರಾಮನ್​ ಇಚ್ಛಿಸಿದರೆ ನಾನೂ ಸಿದ್ಧ…’: ರಾಹುಲ್​ ಗಾಂಧಿ ಸವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts