More

    ಲಾಕ್​ಡೌನ್​ ವಿಸ್ತರಣೆ; ಮಾರ್ಚ್​ 8ರವರೆಗೆ ಮನೆಯಲ್ಲೇ ಇರಿ ಎಂದ ಸರ್ಕಾರ

    ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿನ ಸಂಖ್ಯೆ ದಿನೇದಿನೆ ಏರಿಕೆ ಕಾಣುತ್ತಿದ್ದು, ಇದೀಗ ಲಾಕ್​ಡೌನ್​ ವಿಸ್ತರಣೆ ಮಾಡುವ ನಿರ್ಧಾವರನ್ನು ಸರ್ಕಾರ ತೆಗೆದುಕೊಂಡಿದೆ. ಮಾರ್ಚ್​ 8ರವರೆಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಠಿಣ ಲಾಕ್​ಡೌನ್​ ಜಾರಿಯಲ್ಲಿರಲಿದೆ.

    ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಅಮ್ರಾವತಿ ಮತ್ತು ಅಚಲ್​ ಪುರದಲ್ಲಿ ಫೆಬ್ರವರಿ 21ರಂದು ಒಂದು ವಾರದ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ವಾರದ ನಂತರ ಸೋಂಕಿನ ಸ್ಥಿತಿಗತಿ ನೋಡಿ ಲಾಕ್​ಡೌನ್​ ವಿಸ್ತರಣೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಲಾಗಿತ್ತು. ಇದೀಗ ಈ ಎರಡೂ ನಗರಗಳಲ್ಲಿ ಲಾಕ್​ಡೌನ್​ ಅನ್ನು ಮಾರ್ಚ್​ 8ರವರೆಗೆ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ.

    ಲಾಕ್​ಡೌನ್​ ಸಮಯದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರೆತುಪಡಿಸಿ ಬೇರಾವ ಅಂಗಡಿಯನ್ನೂ ತೆರೆಯುವಂತಿಲ್ಲ. ಶಾಲಾ ಕಾಲೇಜು, ಕೋಚಿಂಗ್​ ಸಂಸ್ಥೆಗಳು, ಕಂಪನಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಜನ ಸೇರುವಂತಿಲ್ಲ ಎಂದು ಕಟ್ಟೆಚ್ಚರ ನೀಡಲಾಗಿದೆ. (ಏಜೆನ್ಸೀಸ್​)

    ಕೋಳಿಪಡೆ ಆಡಲು ಬಂದವನನ್ನು ಕೊಂದು ಪೊಲೀಸ್​ ಠಾಣೆ ಸೇರಿದ ಕೋಳಿ!

    ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​

    ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts