More

    ಲಾಕ್​ಡೌನ್ ಎಫೆಕ್ಟ್ : ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆ

    ಡೆಹ್ರಾಡೂನ್: ಮೇ 15 ರಂದು ಉತ್ತರಾಖಂಡದ ಬದರಿನಾಥ ದೇಗುಲದ ಬಾಗಿಲು ತೆರೆದರೂ ಲಾಕ್​ಡೌನ್ ಕಾರಣದಿಂದಾಗಿ ಬೆಳಗ್ಗೆ ಪೂಜೆ ವೇಳೆ ಯಾತ್ರಾರ್ಥಿಗಳ ಉದ್ದದ ಸರತಿ ಸಾಲೂ ಇಲ್ಲ. ಅವರಿಂದ ಸಾಂಪ್ರದಾಯಿಕ ಕಾರ್ಯಗಳೂ ನಡೆಯುತ್ತಿಲ್ಲ. ಮುಖ್ಯ ಅರ್ಚಕ ಈಶ್ವರಿ ಪ್ರಸಾದ್ ನಂಬೂದ್ರಿ ಅವರು ದೇವಾಲಯದಲ್ಲಿ ಪೂಜೆ ನೆರವೇರಿಸಿದರು.
    ಮೇ 15 ರಿಂದ ನಿತ್ಯ ದೇಗುಲದಲ್ಲಿ ಪ್ರಾರ್ಥನೆ, ಪೂಜೆ ನಡೆಯುತ್ತದಾದರೂ ಹೊರಗೆ ಭಕ್ತರ ಪ್ರಾರ್ಥನೆ, ಭಜನೆಗಳಿಲ್ಲ. ಚಾರ್ ಧಾಮ್​​ನ ಇತರ ಕ್ಷೇತ್ರಗಳಾದ ಕೇದಾರನಾಥ, ಗಂಗೋತ್ರಿ, ಯಮುನೋತ್ರಿಯಲ್ಲೂ ಇದೇ ಪರಿಸ್ಥಿತಿ ಇದೆ.

    ಇದನ್ನೂ ಓದಿ: ಶಾಲಾ ಆವರಣ ಗೋಡೆಗಳ ಮೇಲೀಗ ಕರೊನಾ ಜಾಗೃತಿ ಚಿತ್ರಗಳು

    ಲಾಕ್​​ಡೌನ್​ನಿಂದಾಗಿ ಪ್ರವೇಶ ನಿಷೇಧಿಸಿರುವುದರಿಂದ ದೇಗಲವಷ್ಟೇ ಅಲ್ಲದೆ ಮಾರುಕಟ್ಟೆ, ಅತಿಥಿಗೃಹಗಳೂ ಬಣಗುಡುತ್ತಿವೆ.
    ಈ ವರ್ಷ ಚಾರ್ ಧಾಮ್ ಯಾತ್ರೆ ಇಲ್ಲದಿರುವುದರಿಂದ, ಉತ್ತರಾಖಂಡದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಆರ್ಥಿಕ ಹಿನ್ನಡೆ ಉಂಟಾಗಿದೆ. ಅಧಿಕಾರಿಗಳ ಪ್ರಕಾರ, ಮಾನ್ಸೂನ್ ಮೊದಲು ಜೂನ್ ವರೆಗೆ ಯಾತ್ರೆಗೆ ಭಾರೀ ಪ್ರಮಾಣದಲ್ಲಿ ಯಾತ್ರಾರ್ಥಿಗಳು ಬರುತ್ತಾರೆ. ಆದರೆ ಲಾಕ್​​ಡೌನ್ ಕಾರಣದಿಂದಾಗಿ ಈ ಋತುವಿನಲ್ಲಿ ಸಂಪೂರ್ಣ ನಷ್ಟವಾಗಿದೆ.

    ಇದನ್ನೂ  ಓದಿ: ಅಂತರದ ಅರಿವು ಮೂಡಿಸುವ ‘ಅರಿಕಿಲ್​​’

    ಟೂರ್ ಆಪರೇಟರ್‌ಗಳು, ಟ್ಯಾಕ್ಸಿವಾಲಾಗಳು, ಹೆಲಿಕಾಪ್ಟರ್ ಸೇವಾ ಪೂರೈಕೆದಾರರು, ಅಂಗಡಿಗಳು, ಅತಿಥಿ ಗೃಹಗಳು ಮತ್ತು ಆಶ್ರಮಗಳಿಗೆ ಈ ಅವಧಿಯಲ್ಲಿ ಗರಿಷ್ಠ ವ್ಯಾಪಾರ ಆಗುತ್ತಿತ್ತು.
    ಲಾಕ್​ಡೌನ್ ನಿಂದಾಗಿ ಉಂಟಾದ ನಷ್ಟ, ಆರ್ಥಿಕ ಅವಕಾಶಗಳು ಮತ್ತು ಮಂಡಳಿಯ ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚಿಸಲು ಚಾರ್ ಧಾಮ್ ದೇವಸ್ಥಾನ ಮಂಡಳಿಯ ಮೊದಲ ಸಭೆ ಮೇ 22 ರಂದು ನಡೆಯಲಿದೆ.

    ಕರಾಮುವಿ: ಜೂನ್ 30ರೊಳಗೆ ಪರೀಕ್ಷಾ ಶುಲ್ಕ ಪಾವತಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts