More

    ಅಂತರದ ಅರಿವು ಮೂಡಿಸುವ ‘ಅರಿಕಿಲ್​​’

    ಆತ ವಿದೇಶದಿಂದ ಹಾರಿ ಬರುತ್ತಾನೆ. ತನ್ನ ಆತ್ಮೀಯ ಬಂಧು ವರ್ಗದವರನ್ನು ಸೇರುವ ಕಾತರ ಅವನಿಗೆ.
    ಆದರೆ, ಕುಟುಂಬದವರು ಅಷ್ಟೇ ಪ್ರೀತಿಯಿಂದ ಅವನಿಗಾಗಿ ಮನೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿರುತ್ತಾರೆ..
    ಕೋವಿಡ್-19 ತಡೆಗಟ್ಟಲು ಪ್ರಮುಖ ಅಸ್ತ್ರವಾದ ವ್ಯಕ್ತಿಗತ ದೂರವನ್ನು ಕಾಪಾಡಿಕೊಳ್ಳುವುದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ‘ಅರಿಕಿಲ್’ ಎಂಬ ಕಿರುಚಿತ್ರದ ಸಾರಾಂಶವಿದು.
    ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ಕಿಲ್ಲರ್ ಕರೊನಾ ಕುರಿತ ದೃಶ್ಯಾವಳಿಗಳೇ ಕಿಕ್ಕಿರಿದು ತುಂಬಿವೆ. ಕರೊನಾ ತಡೆಗಟ್ಟುವಲ್ಲಿ ಅನುಸರಿಸುವ ಕ್ರಮಗಳು, ಸಾಮಾಜಿಕ ಜಾಗೃತಿ ಮೂಡಿಸಲು ಸರ್ಕಾರಿ, ಖಾಸಗಿ ಸಂಸ್ಥೆಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಅಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ ಈ ಕಿರುಚಿತ್ರ.

    ಇದನ್ನೂ ಓದಿ: ಕರಾಮುವಿ: ಜೂನ್ 30ರೊಳಗೆ ಪರೀಕ್ಷಾ ಶುಲ್ಕ ಪಾವತಿಸಿ 

    ಮನೆಗೆ ಹಿಂತಿರುಗಿದ ಅನಿವಾಸಿ ಭಾರತೀಯ ಮತ್ತು ಆತ ಮನೆಗೆ ಬಂದಾಗ ಅವನಿಗಾಗಿ ಮನೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದ ಆತನ ಕುಟುಂಬದ ಕಥೆಯನ್ನು ಹೇಳುತ್ತದೆ ಈ ಕಿರುಚಿತ್ರ.
    ಒಂದೇ ಮನೆಯ, ಎರಡು ಪ್ರತ್ಯೇಕ ಕೋಣೆಯಲ್ಲಿ ಕುಳಿತು ಕುಟುಂಬದ ಆತ್ಮೀಯರೊಂದಿಗೆ ಮಾತನಾಡುವುದಿದೆಯಲ್ಲ ಆ ‘ಏನೋ ಕಳೆದುಕೊಂಡ’ ಭಾವವನ್ನು, ನೋವನ್ನು ಈ ಕಥೆ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತದೆ. ಆದರೆ, ಇದು ಕುಟುಂಬದ ಒಳಿತಿಗಾಗಿ ಎಂದು ಪ್ರೇಕ್ಷಕರಿಗೆ ಹೇಳುತ್ತದೆ, ಸ್ವದೇಶಕ್ಕೆ ಮರಳಿದ ನಂತರ ಎನ್‌ಆರ್‌ಐಯನ್ನು ಹೇಗೆ ಸ್ವಾಗತಿಸಬೇಕು ಮತ್ತು ಅವನಿಗೆ ವ್ಯವಸ್ಥೆ ಮಾಡಬೇಕಾದ ಕ್ವಾರಂಟೈನ್ ಸೌಲಭ್ಯಗಳ ಬಗ್ಗೆ ಈ ಕಿರುಚಿತ್ರ ಸಾಕಷ್ಟು ತಿಳಿವಳಿಕೆ ಮೂಡಿಸುತ್ತದೆ.

    ಇದನ್ನೂ ಓದಿ: ಅರೆರೆ..! ಹುಲಿರಾಜ ಬೀದಿಗಿಳಿದ …!

    ಕಿರುಚಿತ್ರದಲ್ಲಿ ಸನ್ನಿ ವೇಯ್ನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮೃತ್ ನಿರ್ದೇಶನದ ಈ ಕಿರುಚಿತ್ರವನ್ನು ಎರ್ನಾಕುಲಂ ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ಕೊಚ್ಚಿ ಐಎಂಎ, ಎರ್ನಾಕುಲಂ ಎನ್‌ಎಚ್‌ಎಂ ಮತ್ತು ಡಿಎಂಒ ನಿರ್ಮಿಸಿದ್ದಾರೆ. ಮೋಹನ್ ಲಾಲ್ ಬಿಡುಗಡೆಗೊಳಿಸಿದ್ದಾರೆ.

    ಬಾಲಿವುಡ್​ ನಟನಿಗೆ ವಾಟ್ಸ್​ಆ್ಯಪ್​ನಲ್ಲಿ ಬಂತು ಡಿವೋರ್ಸ್​ ನೋಟಿಸ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts