More

    ಕಂಪಿಸಿದ ಭೂಮಿ, ಭಾರಿ ಸ್ಫೋಟದ ಸದ್ದು; ಭೂ ವಿಜ್ಞಾನಿಗಳ ತಂಡದಿಂದ ಪರಿಶೀಲನೆ

    ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ಭಾರಿ ಸ್ಫೋಟದ ಸದ್ದಿನ ಜತೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸೋಮವಾರ ತಡರಾತ್ರಿ ಸ್ಥಳೀಯರಿಗೆ ಈ ಅನುಭವ ಆಗಿದ್ದು, ಕಳೆದೆರಡು ದಿನಗಳ ಹಿಂದೆಯೂ ಎರಡು ಭಾರಿ ಇಂಥದ್ದೇ ಅನುಭವವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

    ಭೂಕಂಪನ ಉಂಟಾಗಿದ್ದ ಪ್ರದೇಶಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಈ ವೇಳೆ ಮಾತನಾಡಿದ ಭೂ ವಿಜ್ಞಾನಿಗಳು, ಈಗಾಗಲೇ ಮನಗೂಳಿ, ಮಸೂತಿ, ಮಲಘಾಣ, ಎನ್​ಟಿಪಿಸಿ ಟೌನ್​ಶಿಪ್​ನಲ್ಲಿ ಇದೇ ರೀತಿಯ ಸ್ಫೋಟಕ ಸದ್ದು ಕೇಳಿಸಿತ್ತು. ಅದೇ ರೀತಿ ಕೂಡಗಿಯಲ್ಲೂ ಆಗಿರಬಹುದು ಎಂದಿದ್ದಾರೆ.

    ಪರಿಶೀಲನಾ ವರದಿಯನ್ನು ಬೆಂಗಳೂರು ಮತ್ತು ಆಲಮಟ್ಟಿಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಕಳುಹಿಲಾಗುವುದು. ಅಲ್ಲಿಂದ ವರದಿ ಬಂದ ಬಳಿಕ ಸತ್ಯಾಸತ್ಯತೆಯ ಸ್ಪಷ್ಟತೆಗೆ ಬರಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts