More

    ಅವಧಿ ಮುಗಿದ ರಾಶಿಗಟ್ಟಲೆ ಔಷಧ ಪತ್ತೆ

    ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಡಿವಿಜಿ ವೃತ್ತದ ಬಳಿ ಅವಧಿ ಮುಗಿದ ರಾಶಿ ರಾಶಿ ಔಷಧ, ಮಾತ್ರೆ ಹಾಗೂ ಇಂಜೆಕ್ಷನ್​ಗಳು ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

    ಕೆಲ ಅಪಾಯಕಾರಿ ಔಷಧಗಳನ್ನೂ ಖಾಲಿ ಜಾಗದಲ್ಲಿ ಬಿಸಾಡಿದ್ದು ಸ್ಥಳೀಯರು ಗಮನಿಸಿ ಪಾಲಿಕೆ ಆರೋಗ್ಯ ಇಲಾಖೆ ಮತ್ತು ಸಿಮ್ಸ್​ನ ಆಡಳಿತ ಮಂಡಳಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಹರಿಶಂಕರ್, ಪರಿಸರ ಅಧಿಕಾರ ಶಿಲ್ಪಾ, ಪಾಲಿಕೆ ಆರೋಗ್ಯ ನಿರೀಕ್ಷಕರಾದ ಸಿ.ಎಂ.ಮೊಹಿದ್ದಿನ್, ನಿಶಾ, ಶೋಭಾ ಹಾಗೂ ಸಿಮ್ಸ್​ನ ಆಡಳಿತ ಮಂಡಳಿ ಸದಸ್ಯ ಡಾ. ಗೌತಮ್ ಸೇರಿ ಹಲವರು ಭೇಟಿ ನೀಡಿ ಪರಿಶೀಲಿಸಿದರು.

    ಪ್ರಸೂತಿ ಮತ್ತು ಹೆರಿಗೆಗೆ ಸಂಬಂಧಿಸಿದ ಔಷಧಗಳು ಪತ್ತೆಯಾಗಿದ್ದು 2020ರ ಮಾರ್ಚ್​ಗೆ ಅವಧಿ ಮುಗಿದಿದೆ. ಸ್ಥಳೀಯ ಏಜೆನ್ಸಿಯವರು ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಖಾಲಿ ಜಾಗದಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಔಷಧಗಳನ್ನು ಸ್ಥಳೀಯರು ಮೂರು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿದರು.

    ಸದ್ಯ ಔಷಧಗಳನ್ನು ತೆರವು ಮಾಡಿ ಬ್ಯಾಚ್ ನಂಬರ್ ಪತ್ತೆಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಬಿಪಿ, ಗ್ಯಾಸ್ಟ್ರಿಕ್, ರಕ್ತ ಪರೀಕ್ಷೆ ಸಾಧನಗಳು, ಹೆರಿಗೆ ಸಂದರ್ಭದಲ್ಲಿ ಬಳಸುವ ಔಷಧಗಳು, ಜೆಲ್ ಹಾಗೂ ಸ್ಥಳೀಯವಾಗಿ ಬಳಕೆ ಮಾಡುವ ಅರಿವಳಿಕೆ ಕೂಡ ಪತ್ತೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts