More

    ಜನವಸತಿ ಪ್ರದೇಶದಲ್ಲಿ ಅವೈಜ್ಞಾನಿಕ ಕ್ವಾರಂಟೈನ್ !

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಹೆಮ್ಮಾರಿ ಕರೊನಾಗೆ ಹೆದರಿ ಹೊರ ರಾಜ್ಯಗಳಿಂದ ತಮ್ಮೂರಿಗೆ ಮರಳುತ್ತಿರುವ ಕಾರ್ಮಿಕರನ್ನು ನಗರ ಪ್ರದೇಶಗಳಲ್ಲಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಜನರಲ್ಲಿ ಹೊಸದಾದ ಆತಂಕ ಶುರುವಾಗಿದೆ.

    ಈಗಾಗಲೇ ಮಹಾರಾಷ್ಟ್ರ ಮತ್ತು ಗುಜರಾತ್ಗಳಿಂದ ಬಂದ 13 ಜನರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾದ ಕಾರಣ ಜನ ಭಯದಲ್ಲೇ ದಿನದೂಡುತ್ತಿದ್ದಾರೆ. ಹೊರ ರಾಜ್ಯಗಳಿಂದ ಬಂದವರಿಗೆ ಜಿಲ್ಲಾಡಳಿತ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡುತ್ತಿದೆ. ಆದರೆ ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡಗಳ ಅಭಾವ ಇರುವುದರಿಂದ ಖಾಸಗಿ ಶಾಲಾ-ಕಾಲೇಜುಗಳನ್ನು ಪಡೆಯಲು ಮುಂದಾಗಿದೆ.

    ಇನ್ನು ನಗರ ಹೃದಯಭಾಗದಲ್ಲಿರುವ ಖಾಸಗಿ ಶಾಲೆ ಕಟ್ಟಡಗಳನ್ನು ಕ್ವಾರಂಟೈನ್ಗಾಗಿ ಬಳಸಲು ನಿರ್ಧರಿಸಿರುವುದು ಸ್ಥಳೀಯರ ಭಾರಿ ವಿರೋಧಕ್ಕೆ ಕಾರಣವಾಗಿದೆ. ಯಾದಗಿರಿಯ ಕೊಟಗೇರವಾಡ ಸಮೀಪದ ಸಭಾ ಶಾಲಾ ಕಟ್ಟಡವನ್ನು ಕ್ವಾರಂಟೈನ್ ಮಾಡಿ ಕಾಮರ್ಿಕರನ್ನು ಇರಿಸಲಾಗಿದೆ. ಕೊಡಗೇರವಾಡ ಬಡಾವಣೆಯಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದು, ಇಲ್ಲಿ ಹೊರ ರಾಜ್ಯದವರಿಗೆ ಕ್ವಾರಂಟೈನ್ ಮಾಡಿದರೆ ನಮ್ಮ ಗತಿ ಏನು ಎಂದು ನಿವಾಸಿಗಳು ಗುರುವಾರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆ ಅಧಿಕಾರಿಗಳು ಕಾರ್ಮಿಕರಿಗೆ ಊಟ ನೀಡಲು ಬಂದಾಗ ಸ್ಥಳೀಯರು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ್ದಾರೆ. ಅಲ್ಲದೆ ಕ್ವ್ವಾರಂಟೈನ್ ಕೇಂದ್ರಕ್ಕೆ ಹೋಗುವ ಎರಡೂ ಬದಿ ರಸ್ತೆಗೆ ಮುಳ್ಳು ಕಂಟಿ ಹಾಕಿ ಬಂದ್ ಮಾಡಿದ್ದು, ಕೇಂದ್ರ ಸ್ಥಳಾಂತರ ಮಾಡುವವರೆಗೆ ಕಾರ್ಮಿಕರಿಗೆ ಊಟ, ನೀರು ನೀಡಲು ಬಿಡೋದಿಲ್ಲ ಎಂದು ಪಟ್ಟು ಹಿಡಿದರು.

    ಮಹಾರಾಷ್ಟ್ರ, ಗೋವಾ ಸೇರಿ ಹೊರ ರಾಜ್ಯಗಳಲ್ಲಿ ಹೈರಾಣಾಗಿ ಬಂದ ಕಾಮರ್ಿಕರನ್ನು ನಗರ ಪ್ರದೇಶದಲ್ಲಿ ಕ್ವಾರಂಟೈನ್ ಮಾಡುತ್ತಿರುವ ಕಾರಣ ಸ್ಥಳೀಯರ ವಿರೋಧ ಎದುರಿಸಬೇಕಾದಂಥ ಸ್ಥಿತಿ ಸೃಷ್ಟಿಯಾಗಿದೆ. ಕ್ವಾರಂಟೈನ್ ಕಾಮರ್ಿಕರಲ್ಲಿ ಅಕಸ್ಮಾತ್ ಸೋಂಕು ಕಂಡು ಬಂದರೆ ಇಡೀ ಬಡಾವಣೆಗೆ ವ್ಯಾಪಿಸುತ್ತದೆ. ಹೀಗಾಗಿ ನಗರದಲ್ಲಿ ಕ್ವಾರಂಟೈನ್ ಕೇಂದ್ರ ಸ್ಥಾಪಿಸುವುದು ಬೇಡ ಎಂದು ಜನತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ.

    ಈ ಮಧ್ಯೆ ಸರ್ಕಾರ ಜೂನ್ ಎರಡನೇ ವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕ ಘೋಷಿಸಿದೆ. ನಗರದ ಬಹುತೇಕ ಖಾಸಗಿ ಶಾಲೆಗಳನ್ನು ಪರೀಕ್ಷೆಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಕ್ವಾರಂಟೈನ್ ಮಾಡಿದ ಶಾಲಾ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದರಿಂದ ಪಾಲಕರಲ್ಲೂ ಹೆದರಿಕೆ ಶುರುವಾಗಿದೆ.
    ಹೊರ ರಾಜ್ಯಗಳಿಂದ ಬಂದ ಕಾಮರ್ಿಕರು ನಮ್ಮವರೇ. ಹಾಗಂತ ಸುರಕ್ಷತೆ ಇಲ್ಲದೆ ಅವರನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕಾರಣ ಕರೊನಾ ವೈರಸ್ಗೆ ಕರುಣೆ ಎಂಬುದಿಲ್ಲ. ಹೀಗಾಗಿ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಿಂದ ಹೊರಗಡೆ ಇರುವ ಕಟ್ಟಡಗಳನ್ನು ಕ್ವಾರಂಟೈನ್ಗೆ ಬಳಸಿದರೆ ಜನರ ಆರೋಗ್ಯ ಕಾಪಾಡಿದಂತಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸುವ ಅಗತ್ಯವಿದೆ.

    ನಗರದಲ್ಲಿ ಕ್ವಾರಂಟೈನ್ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ನಿಧರ್ಾರ ಕೈಗೊಂಡಿಲ್ಲ. ಜನವಸತಿ ಹೆಚ್ಚಿರುವ ಪ್ರದೇಶಗಳಲ್ಲಿ ಕ್ವಾರಂಟೈನ್ ಮಾಡುವಂತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅಂಥ ಕ್ವಾರಂಟೈನ್ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
    | ಎಂ.ಕೂರ್ಮಾರಾವ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts