More

    ಕೇರಳದಲ್ಲಿ ಎಡರಂಗ ಮೇಲುಗೈ

    ಕಾಸರಗೋಡು: ಕೇರಳದಲ್ಲಿ ಗುರುವಾರ ಸ್ಥಳೀಯಾಡಳಿತ ಸಂಸ್ಥೆಗಳ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎಡರಂಗ ಮೇಲುಗೈ ಸಾಧಿಸಿದೆ. 10ರಲ್ಲಿ ಆಡಳಿತಾರೂಢ ಎಡರಂಗ, ಒಂಬತ್ತರಲ್ಲಿ ಐಕ್ಯರಂಗ ಹಾಗೂ ಒಂದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎಳಂಬೂರ್ ಆಲಮುಟ್ಟಿ ವಾರ್ಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
    ಬದಿಯಡ್ಕ ಪಂಚಾಯಿತಿಯ 14ನೇ ಪಟ್ಟಾಜೆ ವಾರ್ಡ್‌ನಲ್ಲಿ ಐಕ್ಯರಂಗದ ಶ್ಯಾಮಪ್ರಸಾದ್ ಮಾನ್ಯ(427 ಮತ) ಗೆಲುವು ಸಾಧಿಸಿದ್ದಾರೆ. ಇವರು ಸಮೀಪದ ಸ್ಪರ್ಧಿ ಮಹೇಶ್ ವಳಕುಂಜ ಅವರನ್ನು 38 ಮತಗಳ ಅಂತರದಿಂದ ಪರಾಭವಗೊಳಿಸಿದರು. ಸಿಪಿಎಂನಿಂದ ಸ್ಪರ್ಧಿಸಿದ್ದ ಎಂ.ಮದನ 199 ಮತ ಗಳಿಸಿದ್ದಾರೆ. ಕುಂಬಳೆ ಪಂಚಾಯಿತಿ 14ನೇ ಪೆರುವಾಡ್ ವಾರ್ಡ್‌ನಲ್ಲಿ ಸಿಪಿಎಂನ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಕಾಞಂಗಾಡ್ ನಗರಸಭಾ ಒಂದನೇ ತೋಯಮಾಲ್ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಎಡರಂಗದ ಇಂದಿರಾ(701 ಮತ) ವಿಜೇತರಾದರು. ಇವರು ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ನಾರಾಯಣಿ ಅವರನ್ನು 464 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಪಳ್ಳಿಕೆರೆ ಗ್ರಾಮ ಪಂಚಾಯಿತಿಯ ಪಲ್ಲಿಪುಳ 19ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ನ ಸಮೀರಾ ಅಬ್ಬಸ್(831) ವಿಜೇತರಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿ ರಶೀದಾ 235 ಮತ ಗಳಿಸಿ ಎರಡನೇ ಸ್ಥಾನ ಗಳಿಸಿದ್ದಾರೆ. ಕಳ್ಳಾರ್ ಪಂಚಾಯಿತಿಯ ಎರಡನೇ ಅಡ್ಕ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಸನ್ನಿ ಅಬ್ರಹಾಂ(441 ಮತ) ವಿಜೇತರಾಗಿದ್ದಾರೆ. ಜಿಲ್ಲೆಯಲ್ಲಿ ಐದು ವಾರ್ಡ್‌ಗಳಿಗೆ ಉಪ ಚುನಾವಣೆ ನಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts