More

    ಮಕ್ಕಳ ಪಡೆಯಲೂ ಸಿಗುತ್ತೆ ಸಾಲ; ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಕ್ರಮ

    ಬೀಜಿಂಗ್: ಅತ್ಯಂತ ವೇಗವಾಗಿ ಜನಸಂಖ್ಯೆ ಕುಸಿಯುತ್ತಿರುವ ಚೀನಾದ ಈಶಾನ್ಯ ಭಾಗದ ಜಿಲಿನ್ ಪ್ರಾಂತ್ಯದಲ್ಲಿ ಮಕ್ಕಳು ಪಡೆಯುವುದನ್ನು ಉತ್ತೇಜಿಸುವುದಕ್ಕೆ ‘ವಿವಾಹ ಮತ್ತು ಜನನ ಗ್ರಾಹಕ ಸಾಲಗಳು’ ಎಂಬ ವಿಶೇಷ ಸಾಲ ಮೇಳ ಹಮ್ಮಿಕೊಳ್ಳಲಾಗಿದೆ.

    ವಿವಾಹವಾದ ದಂಪತಿ ಮಕ್ಕಳನ್ನು ಪಡೆಯು ವುದಾದರೆ ಅಂತಹವರಿಗೆ 2 ಲಕ್ಷ ಯುವಾನ್ (23.56 ಲಕ್ಷ ರೂ.) ವಿಶೇಷ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್​ಗಳ ಮೂಲಕ ಒದಗಿಸುತ್ತಿದೆ. ದಂಪತಿ ಎಷ್ಟು ಮಕ್ಕಳನ್ನು ಹೊಂದಲು ಬಯಸುತ್ತಾರೆಂಬುದರ ಮೇಲೆ ಬಡ್ಡಿ ದರ ವ್ಯತ್ಯಾಸ ಆಗುತ್ತದೆ. ಮಗುವನ್ನು ಹೊಂದಲು ನೋಂದಣಿ ಮಾಡಿಸಿಕೊಂಡ ದಂಪತಿ ಅನ್ಯ ಪ್ರಾಂತ್ಯದವರಾಗಿದ್ದರೆ ತಮ್ಮ ಪ್ರಾಂತ್ಯದಲ್ಲಿ ನಿವಾಸ ಹೊಂದಲು ಅನುಮತಿ, ಸಾರ್ವಜನಿಕ ಸೇವೆಗಳ ಬಳಕೆಗೆ ಅವಕಾಶ, ಎರಡು ಅಥವಾ ಮೂರು ಮಕ್ಕಳನ್ನು ಹೊಂದಿದ ದಂಪತಿಗೆ ತೆರಿಗೆಯಲ್ಲಿ ರಿಯಾಯಿತಿ, ಉದ್ಯಮ ನಡೆಸಲು ಪ್ರೋತ್ಸಾಹ ಇನ್ನಿತರ ಸೌಲಭ್ಯ ಘೋಷಣೆ ಮಾಡಲಾಗಿದೆ. ಗರ್ಭಿಣಿಯರಿಗೆ ಪ್ರಸವ ಸಮಯದಲ್ಲಿ ನೀಡುವ ರಜೆಯನ್ನು 158 ದಿನದಿಂದ 180 ದಿನಕ್ಕೆ ಹೆಚ್ಚಿಸಿದೆ.

    ಯಾಕೆ ಯೋಜನೆ?: ಚೀನಾದಲ್ಲಿ ಕಳೆದ ಕೆಲವು ವರ್ಷಗಳಿಂದ ಜನಸಂಖ್ಯಾ ವೇಗ ತೀವ್ರವಾಗಿ ಕುಸಿತವಾಗಿದೆ. ಇದರಿಂದ ಭವಿಷ್ಯದಲ್ಲಿ ಶ್ರಮಿಕ ಶಕ್ತಿ ಕಡಿಮೆ ಆಗುತ್ತಿದೆ ಎಂದು ಆತಂಕಗೊಂಡಿರುವ ಕಮ್ಯುನಿಸ್ಟ್ ಆಡಳಿತ, ಹೆಚ್ಚು ಮಕ್ಕಳನ್ನು ಹೊಂದುವುದನ್ನು ಉತ್ತೇಜಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts