More

    ಅನ್ನದಾತರಿಗೆ ಸಾಲ ಸೌಲಭ್ಯ ಅಬಾಧಿತ

    ಬೆಂಗಳೂರು: ಕರೊನಾ ಸಂಕಷ್ಟದಲ್ಲಿ ನರಳಿದ ಕೃಷಿ ಕ್ಷೇತ್ರಕ್ಕೆ ಈ ಬಾರಿ ಆಶಾದಾಯಕ ಬೆಳವಣಿಗೆ ಮುನ್ಸೂಚನೆಗಳು ಲಭಿಸಿದ್ದು, ಇದಕ್ಕೆ ತಕ್ಕಂತೆ ಹೊಸ ಸಾಲ ಇನ್ನಿತರ ಸವಲತ್ತುಗಳನ್ನು ಅಬಾಧಿತವಾಗಿ ಒದಗಿಸಲು ಸರ್ಕಾರ ಅಗತ್ಯ ಕ್ರಮವಹಿಸಿದೆ.

    ಸಕಾಲಿಕ ಉತ್ತಮ ಮಳೆ, ನಗರಗಳಿಂದ ಸ್ವಗ್ರಾಮಕ್ಕೆ ಸೇರಿದವರು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಇತ್ಯಾದಿ ಅಂಶಗಳನ್ನು ಪರಿಗಣಿಸಿಯೇ ಹಳೇ ಹಾಗೂ ಹೊಸ ಸದಸ್ಯರಿಗೆ ಸಾಲ, ಬಿತ್ತನೆ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಸಕಾಲಕ್ಕೆ ವಿತರಿಸಲು ಸಹಕಾರ ಸಂಘ, ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ರಾಜ್ಯ ಸಹಕಾರ ಸಂಘಗಳ ನಿಬಂಧಕ ಎನ್.ಎಸ್. ಪ್ರಸನ್ನಕುಮಾರ್ ಗುರುವಾರ ಸುತ್ತೋಲೆ ಹೊರಡಿಸಿ, ಕಾರ್ಯಸೂಚಿ ನೀಡಿದ್ದಾರೆ.ಕಂತು ಪೂರ್ವದಲ್ಲಿ ಹೊಸ ಸಾಲ: ಲಾಕ್​ಡೌನ್​ನಿಂದಾಗಿ ರೈತರ ಕೃಷಿ ಹಾಗೂ ಕೃಷಿ ಪೂರಕ ಸಾಲ ಮರುಪಾವತಿ ಜೂ.30ರವರೆಗೆ ಮುಂದೂಡಲಾಗಿದೆ. ಹೀಗಾಗಿ ಸಾಲದ ಕಂತು ಪೂರ್ವದಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ 2020-21ನೇ ಸಾಲಿನ ಸಾಲ ಮಂಜೂರು ಮಾಡುವಂತೆ ಸೂಚಿಸಲಾಗಿದೆ. ಪಿಕಾರ್ಡ್ ಮತ್ತು ಕಾಸ್ಕಾರ್ಡ್ ಬ್ಯಾಂಕ್​ಗಳಿಂದ ದೀರ್ಘಾವಧಿ ಸಾಲ ನೀಡುವುದಕ್ಕೂ ಯಾವುದೇ ಅಡಚಣೆ ಇಲ್ಲ.

    15 ದಿನಗಳಿಗೊಮ್ಮೆ ವರದಿ: ಸಾಲದ ಅರ್ಜಿ ಸ್ವೀಕಾರ, ವಿಲೇವಾರಿ, ಮಂಜೂರು, ವಿತರಣೆ ಪ್ರಕ್ರಿಯೆ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಪ್ರತಿ 15 ದಿನಗಳಿಗೊಮ್ಮೆ ನೀಡಲು ಆಯಾ ಹಂತದ ಮೇಲುಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಕಾರ್ಯಸೂಚಿ: ಭೂಮಿ ತಂತ್ರಾಂಶದಿಂದ ಪಹಣಿ ಡೌನ್​ಲೋಡ್ ಮಾಡಿಕೊಂಡು ಹಳೆಯ ಪಹಣಿ ಜತೆ ತುಲನೆ ಮಾಡಿ ನಿಯಮದಂತೆ ಸಾಲ ಮಂಜೂರು ಪ್ರಸ್ತಾವನೆ ಸಿದ್ಧಪಡಿಸಿಕೊಳ್ಳ ಬೇಕು. ಹೊಸ ಸದಸ್ಯರಿಗೂ ನಿಯಮಾನುಸಾರ ಸಾಲ ನೀಡಬೇಕು.

    ಕಿಸಾನ್ ಸಮ್ಮಾನ್​ಗೆ ಜೋಡಣೆ

    ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ವಿತರಣೆ ಹಾಗೂ ಸ್ಥಗಿತವಾಗಿದ್ದ ಕಿಸಾನ್ ಕಾರ್ಡ್ ಸಕ್ರಿಯಗೊಳಿಸಿ ಈ ಅಭಿಯಾನ ಮುಂದುವರಿಸಬೇಕು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಕೆಸಿಸಿ ಜೋಡಿಸಲು ಆದ್ಯತೆ, ಇದರ ಜತೆಗೆ ಬೆಳೆ ವಿಮೆ ಸೌಲಭ್ಯ ನೀಡಬೇಕು ಎಂದು ಸೂಚಿಸಿದ್ದಾರೆ.

    ಮೊಬೈಲ್ ರಿಚಾರ್ಜ್, ಎಲೆಕ್ಟ್ರಿಕ್ ಅಂಗಡಿ ತೆರೆಯಲು ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts